ದೇಶದಲ್ಲೇ ಮೊದಲ ಬಾರಿಗೆ ಪರ್ವತ ಪ್ರದೇಶಗಳಿಗೆ ಔಷಧಿ ತಲುಪಿಸಲು ಡ್ರೋನ್ ಬಳಕೆ

ದೇಶದಲ್ಲೇ ಮೊದಲ ಬಾರಿಗೆ ಪರ್ವತ ಪ್ರದೇಶಗಳಿಗೆ ಔಷಧಿ ತಲುಪಿಸಲು ಡ್ರೋನ್ ಬಳಕೆ

ಗುಡ್ಡಗಾಡಿನ ದುರ್ಗಮ ಮಾರ್ಗದಲ್ಲಿ ಸಂಚರಿಸುವುದೇ ತುಂಬಾ ಕಷ್ಟ. ಅದರಲ್ಲೂ ಎಮರ್ಜೆನ್ಸಿಗೆ ಔಷಧಿ ಪೂರೈಕೆಯಾಗುವುದು ಇನ್ನೂ ಕಷ್ಟ. ಪರ್ವತ ಪ್ರದೇಶಗಳಿಗೆ ಔಷಧಿ ತಲುಪಿಸಲು ಇದೀಗ ಡ್ರೋನ್ ಸಹಾಯಕ್ಕೆ ಬಂದಿದೆ. ಉತ್ತರಖಾಂಡದ ರಿಷಿಕೇಶ್​ನಲ್ಲಿರುವ ಏಮ್ಸ್​ ಸಂಸ್ಥೆಯು ರೋಗಿಗಳಿಗೆ ಔಷಧ ಪೂರೈಸಲು ದೇಶದಲ್ಲೇ ಪ್ರಥಮ ಬಾರಿಗೆ ಡ್ರೋನ್​ ಸೇವೆ ಶುರು ಮಾಡಿದೆ. ಮೊದಲ ಬಾರಿಗೆ 41 ಕಿಲೋಮೀಟರ್ ದೂರವನ್ನು ಕೇವಲ 29 ನಿಮಿಷಗಳಲ್ಲಿ ಕ್ರಮಿಸುವ ಮೂಲಕ ಡ್ರೋನ್ ಮೊದಲ ಪ್ರಯತ್ನದಲ್ಲೇ ಸಕ್ಸಸ್ ಆಗಿದೆ.

ಇದನ್ನೂ ಓದಿ: ಸರ್ವಾಧಿಕಾರಿ ಕಿಮ್ ಮಗಳ ಹೆಸರು ಯಾರು ಇಡುವಂತಿಲ್ಲ!

ಏಮ್ಸ್ ನಿರ್ದೇಶಕ ಫ್ರೊ.ಮೀನು ಸಿಂಗ್ ಮತ್ತು ಡ್ರೋನ್ ಕಂಪನಿಯ ಅಧಿಕಾರಿ ಗೌರವ್ ಕುಮಾರ್ ಈ ವಿಭಿನ್ನ ಪ್ರಯತ್ನಕ್ಕೆ ಚಾಲನೆ ನೀಡಿದರು. ಸುಮಾರು 3 ಕೆ.ಜಿ ತೂಕದ ಔಷಧಿಗಳ ಪ್ಯಾಕೆಟ್ ಅನ್ನು ಡ್ರೋನ್‌ನಲ್ಲಿ ನ್ಯೂ ತೆಹ್ರಿ ಪ್ರದೇಶಕ್ಕೆ ರವಾನಿಸಲಾಗಿದೆ. ಈ ಮೂಲಕ ಡ್ರೋನ್‌ನಿಂದ ಔಷಧಿ ರವಾನಿಸಿದ ದೇಶದ ಮೊದಲ ಏಮ್ಸ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಡ್ರೋನ್ ಬಳಕೆಯಿಂದ ಸಮಯದ ಉಳಿತಾಯವಾಗುತ್ತದೆ. ರೋಗಿಗಳಿಗೆ ಸರಿಯಾದ ಸಮಯಕ್ಕೆ ಔಷಧಿಗಳನ್ನು ಪೂರೈಸಲು ಕೂಡಾ ಸಾಧ್ಯವಾಗುತ್ತದೆ.  ರಿಷಿಕೇಶ್​ನ ಏಮ್ಸ್ ಆವರಣದಿಂದ ನ್ಯೂ ತೆಹ್ರಿ ಪ್ರದೇಶಕ್ಕೆ ಹಾರಾಡಿದ ಡ್ರೋನ್ ಒಂದೇ ಬಾರಿ 80 ಕಿಲೋಮೀಟರ್ ಹಾರಾಡುವ ಸಾಮರ್ಥ್ಯಹೊಂದಿದೆ. ರಿಶಿಕೇಷ್‌ನಿಂದ ಹೊರಟ ಡ್ರೋನ್ ಕೇವಲ 29 ನಿಮಿಷಗಳಲ್ಲಿ ನ್ಯೂ ತೆಹ್ರಿ ಪ್ರದೇಶವನ್ನು ತಲುಪಿದೆ. ಅದೇ ರಸ್ತೆ ಮೂಲಕ ಹೋಗುವುದಾದರೆ 75 ಕಿಲೋಮೀಟರ್ ಕ್ರಮಿಸಬೇಕು. ಡ್ರೋನ್ ಸಹಾಯದಿಂದ ಬೇಗನೆ ಔಷಧಿ ತಲುಪಲಿದೆ.

suddiyaana