ಸಿರಿಯಾದಲ್ಲಿ ಅಮೆರಿಕ ಸೇನೆ ಮೇಲೆ ಡ್ರೋನ್ ದಾಳಿ! – ಇರಾನ್‌ ಬೆಂಬಲಿತ ಉಗ್ರಗಾಮಿಗಳದ್ದೇ ಕೈವಾಡ ಎಂದು ಜೋ ಬೈಡೆನ್‌ ಆರೋಪ!

ಸಿರಿಯಾದಲ್ಲಿ ಅಮೆರಿಕ ಸೇನೆ ಮೇಲೆ ಡ್ರೋನ್ ದಾಳಿ! – ಇರಾನ್‌ ಬೆಂಬಲಿತ ಉಗ್ರಗಾಮಿಗಳದ್ದೇ ಕೈವಾಡ ಎಂದು ಜೋ ಬೈಡೆನ್‌ ಆರೋಪ!

ಸಿರಿಯಾ ಗಡಿ ಸಮೀಪದಲ್ಲಿರುವ ಈಶಾನ್ಯ ಜೋರ್ಡಾನ್‌ನಲ್ಲಿ ಅಮೆರಿಕ ಸೇನೆಯ ಮೇಲೆ ಡ್ರೋನ್ ದಾಳಿ ನಡೆದಿದೆ. ಭಾನುವಾರ ತಡರಾತ್ರಿ ಡ್ರೋನ್‌ ದಾಳಿ ನಡೆಸಲಾಗಿದೆ. ಈ ದಾಳಿ ಹಿಂದೆ ಇದು ಇರಾನ್ ಬೆಂಬಲಿತ ಉಗ್ರಗಾಮಿಗಳದ್ದೇ ಕೈವಾಡ ಇದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಆರೋಪಿಸಿದ್ದಾರೆ.

ಇದನ್ನೂ ಓದಿ: ಶಾಲಾ ಬಸ್ ಹಾಗೂ ಟ್ಯಾಕ್ಟರ್‌ ನಡುವೆ ಭೀಕರ ಅಪಘಾತ – ನಾಲ್ವರು ವಿದ್ಯಾರ್ಥಿಗಳ ದುರ್ಮರಣ

ಭಾನುವಾರ ರಾತ್ರಿ ಸಿರಿಯಾ ಗಡಿ ಸಮೀಪವಿರುವ ಈಶಾನ್ಯ ಜೋರ್ಡಾನ್​ನಲ್ಲಿ ನಮ್ಮ ಪಡೆಗಳ ಮೇಲೆ ದಾಳಿ ನಡೆದಿದೆ. ಮೂವರು ಸಾವನ್ನಪ್ಪಿದ್ದು ಹಲವರು ಗಾಯಗೊಂಡಿದ್ದಾರೆ. ದಾಳಿ ಹಿಂದೆ ಇರಾನ್‌ ಬೆಂಬಲಿತ ಉಗ್ರಗಾಮಿಗಳದ್ದೇ ಕೈವಾಡ ಇದೆ. ಈ ದಾಳಿಗೆ ತಕ್ಕ ಉತ್ತರ ಅಮೆರಿಕ ನೀಡಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಬೈಡನ್‌ ಹೇಳಿಕೆಗೆ ಇರಾನ್‌ ಬೆಂಬಲಿತ ರಾಷ್ಟ್ರಗಳ ಗುಂಪು ಆಕ್ಷೇಪ ವ್ಯಕ್ತಪಡಿಸಿದೆ.

ಹಮಾಸ್​ನೊಂದಿಗೆ ಇಸ್ರೇಲ್​ನಲ್ಲಿ ಯುದ್ಧ ಪ್ರಾರಂಭವಾದ ಬಳಿಕ ಇದೇ ಮೊದಲ ಬಾರಿಗೆ ಮಧ್ಯಪ್ರಾಚ್ಯದಲ್ಲಿ ಯುಎಸ್​ ಮಿಲಿಟರಿ ಸಿಬ್ಬಂದಿಯನ್ನು ನೇರವಾಗಿ ಗುರಿಯಾಗಿಸಲಾಗಿದೆ. ಹಮಾಸ್ ವಕ್ತಾರ ಸಮಿ ಅಬು ಝಹ್ರಿ ಮಾತನಾಡಿ, ಈ ದಾಳಿಯು ಅಮೆರಿಕದ ಆಡಳಿತಕ್ಕೆ ನೀಡಿರುವ ಎಚ್ಚರಿಕೆಯ ಸಂದೇಶವಾಗಿದೆ ಎಂದಿದ್ದಾರೆ.

Shwetha M