ಬದಲಾದ ದೃಷ್ಠಿಬೊಟ್ಟು ದತ್ತಾ! – ವಿಜಯ್ಸೂರ್ಯ ಸ್ಥಾನಕ್ಕೆ ಹೊಸ ನಟ ಎಂಟ್ರಿ!

ಸೆಪ್ಟೆಂಬರ್ 28ರಂದು ಬಿಗ್ ಬಾಸ್ ಕನ್ನಡ ಸೀಸನ್ 12 ರಂದು ಆರಂಭವಾಗ್ತಿದೆ. ಶೋ ಆರಂಭವಾಗ್ತಿದ್ದಂತೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿರೋ ಕೆಲ ಸೀರಿಯಲ್ಗೆ ಗೇಟ್ಪಾಸ್ ನೀಡಲಾಗ್ತಿದೆ. ಇದೀಗ ದೃಷ್ಟಿಬೊಟ್ಟು ಸೀರಿಯಲ್ ಈಗ ಮುಕ್ತಾಯದ ಹಂತ ತಲುಪಿದೆ. ಆದ್ರೆ ಈ ಸೀರಿಯಲ್ ಮುಗಿಯುವ ಮುನ್ನವೇ ಪ್ರಮುಖ ಪಾತ್ರಧಾರಿ ವಿಜಯ್ ಸೂರ್ಯ ದೃಷ್ಟಿಬೊಟ್ಟುಗೆ ಗುಡ್ಬೈ ಹೇಳಿದ್ದಾರೆ ಎಂಬ ವಿಚಾರ ಸದ್ಯ ಕನ್ನಡ ಕಿರುತೆರೆಯಲ್ಲಿ ಸದ್ದು ಮಾಡ್ತಿದೆ. ಇದೀಗ ದತ್ತ ಪಾಟೀಲ್ ಪಾತ್ರಕ್ಕೆ ಹೊಸ ನಾಯಕ ಎಂಟ್ರಿ ಕೊಟ್ಟಿದ್ದಾರೆ ಎಂದು ಹೇಳಲಾಗ್ತಿದೆ.
ಇದನ್ನೂ ಓದಿ: ಬಗೆದಷ್ಟು ಬಿಗಿಯಾಗುತ್ತಿದೆ ಬಂಗ್ಲೆ ಗುಡ್ಡದ ರಹಸ್ಯ – SIT ಗೊಂದಲ.. ಮತ್ತೆ ಕಾರ್ಯಾಚರಣೆ ನಡೆಯುತ್ತಾ?
ದೃಷ್ಟಿಬೊಟ್ಟು ಸೀರಿಯಲ್ ಈಗ ಅಂತಿಮ ಹಂತಕ್ಕೆ ತಲುಪಿದೆ. ಇನ್ನೇನು ಕೆಲವೇ ದಿನಗಳಲ್ಲಿ ಸೀರಿಯಲ್ ಅಂತ್ಯವಾಗಲಿದೆ. ಆದ್ರೀಗ ಸೀರಿಯಲ್ ಕ್ಲೈಮ್ಯಾಕ್ಸ್ ಶೂಟಿಂಗ್ ಮುಗಿಯುವ ಮುನ್ನವೇ ನಾಯಕ ವಿಜಯ್ ಸೂರ್ಯ ಸೀರಿಯಲ್ನಿಂದ ಹೊರಕ್ಕೆ ಬಂದಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಿದೆ. ಸೀರಿಯಲ್ ನಲ್ಲೂ ದತ್ತಾಭಾಯ್ ಕಾಣಿಸುತ್ತಿಲ್ಲ. ಆತನ ಕಾರು ಅಪ್ಪಚ್ಚಿಯಾಗಿದೆ. ಸತ್ತಿದ್ದಾನೆ ಎಂದೇ ತೋರಿಸಲಾಗಿದೆ. ಆದ್ರೆ ದೃಷ್ಟಿ ಮಾತ್ರ ತನ್ನ ಗಂಡ ಬದುಕಿದ್ದಾಳೆ ಎಂದು ಹೇಳುತ್ತಿದ್ದಾಳೆ. ಇದು ಸೀರಿಯಲ್ ವೀಕ್ಷಕರಿಗೂ ಕನ್ಫ್ಯೂಸ್ ಆಗುವಂತೆ ಮಾಡಿದೆ. ಇದೀಗ ದತ್ತನ ಪಾತ್ರಕ್ಕೆ ಹೊಸ ನಟನ ಎಂಟ್ರಿಯಾಗಿದೆ ಎಂದು ಹೇಳಲಾಗ್ತಿದೆ.
ಇದೀಗ ದೃಷ್ಟಿಯ ತಮ್ಮನ ರೋಲ್ ಮಾಡ್ತಿರೋ ಬಾಲಕ ಮುದ್ದುರಾಜ ಅನೂಪ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದು, ಎಲ್ಲರೂ ಏನು ಎತ್ತ ಎಂದು ತಿಳಿಯಲಾಗದೇ ಪ್ರಶ್ನೆಗಳ ಸುರಿಮಳೆಗೈಯುತ್ತಿದ್ದಾರೆ. ‘ನಿಮ್ಮೆಲ್ಲರೊಂದಿಗೆ ನನ್ನ ಅತ್ಯುತ್ತಮ ಸ್ಮರಣೀಯ ಸಮಯವನ್ನು ಕಳೆದಿದ್ದೇನೆ. ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ ಮತ್ತು ಶೀಘ್ರದಲ್ಲೇ ಮತ್ತೆ ಈ ತಂಡದ ಭಾಗವಾಗಲು ಬಯಸುತ್ತೇನೆ’ ಎಂದು ಬಾಲಕ ಬರೆದುಕೊಂಡಿದ್ದಾನೆ. ಹಾಗಿದ್ದರೆ ಸೀರಿಯಲ್ ಮುಗಿಯುವುದು ಬಹುತೇಕ ಖಚಿತವಾಗಿದೆ. ಅಷ್ಟೇ ಅಲ್ಲದೇ ಇಡೀ ಟೀಮ್ನವರು ಫೋಟೋಶೂಟ್ ಕೂಡ ಮಾಡಿಸಿಕೊಂಡಿದ್ದಾರೆ. ಇದರಲ್ಲಿ ವಿಜಯಸೂರ್ಯ ಇಲ್ಲ ಎನ್ನುವುದು ಮಾತ್ರ ಕುತೂಹಲಕ್ಕೆ ಕಾರಣವಾಗಿದೆ. ಸೀರಿಯಲ್ ಮುಗಿಸುವುದೇ ಹೌದಾದರೆ ದತ್ತನನ್ನು ಸಾಯಿಸುವ ಅವಶ್ಯಕತೆ ಇತ್ತೇ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ಆದ್ರೆ ಇನ್ನೊಂದು ಫೋಟೋದಲ್ಲಿ ನಟ ರಕ್ಷಿತ್ ಗೌಡ ಕಾಣಿಸಿಕೊಂಡಿದ್ದಾರೆ. ಹಾಗಿದ್ದರೆ, ದತ್ತಾಬಾಯಿ ಆಗಿ ರಕ್ಷಿತ್ ಅವರು ಬರುತ್ತಿದ್ದಾರಾ ಎಂದು ಅನೇಕರು ಕೇಳಿದ್ದಾರೆ. ಇನ್ನು ಕೆಲವರು ದತ್ತನ ರೋಲ್ ಬದಲಾಗುತ್ತಿದೆ. ಆತನಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಿದಂತೆ ತೋರಿಸಿ, ಹೊಸ ನಟನನ್ನು ತರಲಾಗುತ್ತದೆ ಎಂದು ಕಮೆಂಟ್ ಮಾಡ್ತಿದ್ದಾರೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಅಪ್ಡೇಟ್ ಸಿಗುತ್ತಾ ಅಂತಾ ಕಾದುನೋಡ್ಬೇಕು.

ನೋಡಿರಿ

