ದೃಷ್ಟಿ ಮೇಲೆ ಕಣ್ಣಿಟ್ಟ ಪೊಲೀಸ್ ಯಾರು? – ನಟ, ನಿರ್ದೇಶಕ, ರಾಜ್ಯಪ್ರಶಸ್ತಿ ವಿಜೇತ!!
ರಘು ಶಿವಮೊಗ್ಗ ರಿಯಲ್ ಲೈಫ್
ದೃಷ್ಟಿ ಬೊಟ್ಟು ಸೀರಿಯಲ್ ಕಲರ್ಸ್ ಕನ್ನಡದಲ್ಲಿ ಇತ್ತೀಚೆಗಷ್ಟೇ ಶುರುವಾಗಿದೆ.. ಸೀರಿಯಲ್ ಕತೆ ಅದ್ಬುತವಾಗಿ ಮೂಡಿ ಬರುತ್ತಿದ್ದು, ಕಡಿಮೆ ಸಮಯದಲ್ಲೇ ಈ ಸೀರಿಯಲ್ ಗೆ ವೀಕ್ಷಕರಿಂದ ಒಳ್ಳೆ ರೆಸ್ಪಾನ್ಸ್ ಸಿಗ್ತಿದೆ.. ಬಡ ಕುಟುಂಬದಲ್ಲಿ ಸುಂದರವಾದ ಹೆಣ್ಣು ಮಗಳು ಹುಟ್ಟಿದ್ರೆ ಏನೆಲ್ಲಾ ತೊಂದರೆ ಅನುಭವಿಸ್ಬೇಕಾಗುತ್ತೆ.. ಆಕೆಯ ರಕ್ಷಣೆಗಾಗಿ ಕುಟುಂಬ ಏನೆಲ್ಲಾ ಕಷ್ಟ ಪಡಬೇಕಾಗುತ್ತೆ ಅಂತಾ ಸೀರಿಯಲ್ ನಲ್ಲಿ ತೋರಿಸಲಾಗುತ್ತಿದೆ. ಕುರೂಪಿ ಅಂತಾ ದೃಷ್ಠಿಯನ್ನ ಹೀಯಾಳಿಸುತ್ತಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಗೆ ಈಗ ಆಕೆಯ ಸೌಂದರ್ಯ ದರ್ಶನವಾಗಿದೆ. ಹೀಗಾಗಿ ದೃಷ್ಟಿ ಹಿಂದೆ ಬಿದ್ದಿದ್ದಾನೆ.. ಇದೀಗ ಆತನಿಂದ ದೃಷ್ಟಿಯನ್ನ ಕಾಪಾಡುವುದೇ ಆಕೆಯ ತಾಯಿಗೆ ದೊಡ್ಡ ಸವಾಲಾಗಿದೆ.. ಇದೀಗ ಈ ಪೊಲೀಸ್ ಆಫೀಸರ್ ನಟನೆ ಬಗ್ಗೆ ವೀಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಅಷ್ಟಕ್ಕೂ ಈ ಪೊಲೀಸ್ ಆಫೀಸರ್ ಯಾರು ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಆಕಾಶ್ ದೀಪ್ RCBಗೆ ಲೆಕ್ಕಕ್ಕಿಲ್ವಾ? – ಚಿನ್ನದಂಥ ಪ್ಲೇಯರ್ ಗೆ ಚಾನ್ಸ್ ಇಲ್ಲ ಏಕೆ?
ದಂತದ ಗೊಂಬೆಯಂತಿರುವ ದೃಷ್ಟಿ.. ಆದ್ರೆ ಬಾಲ್ಯದಿಂದಲೇ ಆಕೆಯ ಅಮ್ಮ ದೇಹ ತುಂಬಾ ಕಪ್ಪು ಬಣ್ಣವನ್ನು ಹಚ್ಚಿ ಆಕೆಯ ಅಂದವನ್ನ ಮರೆಮಾಚುತ್ತಾಳೆ. ಕಾರಣ, ಅವರಿರುವ ಸ್ಲಮ್ ನಂತಹ ಪ್ರದೇಶದಲ್ಲಿ ಸುಂದರವಾಗಿರುವ ಹೆಣ್ಣಿನ ಮೇಲೆ ಯಾವಾಗ ಯಾರ ಬೇಕಾದ್ರೂ ಕಣ್ಣು ಸಹ ಬೀಳುತ್ತೆ ಅನ್ನೋ ಭಯ.. ಹೀಗಾಗಿ ಇಡೀ ಸಮಾಜದ ಕಣ್ಣಿಂದ ದೃಷ್ಟಿಯ ಅಂದವನ್ನು ಮುಚ್ಚಿಟ್ಟಿದ್ದಳು ಅವಳ ಅಮ್ಮ.. ಆದ್ರೆ ದೃಷ್ಟಿಯ ನಿಜ ಬಣ್ಣ ಎಲ್ಲರ ಮುಂದೆ ಬಯಲಾಗಿದೆ.. ಮಳೆರಾಯನ ಆಶೀರ್ವಾದ, ದೇಹದ ಕಪ್ಪೆಲ್ಲ ತೊಳೆದು, ಅತಿಲೋಕ ಸುಂದರಿಯಂತೆ, ಫಳ ಫಳ ಹೊಳೆಯುತ್ತಿದ್ದಾಳೆ. ಇನ್ಸ್‌ಪೆಕ್ಟರ್ ಕಣ್ಣಿಗೆ ಬಿದ್ದಿರುವ ದೃಷ್ಟಿಯನ್ನು ಕಾಪಾಡಿಕೊಳ್ಳುವುದೇ ಅಮ್ಮನಿಗೆ ಕಷ್ಟವಾಗಿದೆ. ತನ್ನ ಕೆಟ್ಟತನದಿಂದಲೇ ದೃಷ್ಟಿ ಮತ್ತು ಆಕೆಯ ಮನೆಯವರಿಗೆ ಹಿಂಸೆ ಕೊಡುತ್ತಾ.. ತಾನು ದೃಷ್ಟಿಯನ್ನು ಮದುವೆಯಾಗ್ತೀನಿ ಎನ್ನುತ್ತಾ.. ಆಕೆಯ ಕರೆದುಕೊಂಡು ಸಿನಿಮಾಕ್ಕೆ ತೆರಳಿ.. ಆಕೆಯ ಜೊತೆ ಕೆಟ್ಟದಾಗಿ ವರ್ತಿಸುತ್ತಿದ್ದಾನೆ.. ಇದೀಗ ಈ ಇನ್ಸ್ ಪೆಕ್ಟರ ವರ್ತನೆ ವೀಕ್ಷಕರಿಗೆ ಸಿಟ್ಟು ತರಿಸುತ್ತಿದೆ.. ಅಂದ್ಹಾಗೆ ಈ ಇನ್ಸ್‌ಪೆಕ್ಟರ್ ಪಾತ್ರ ಮಾಡುತ್ತಿರುವ ನಟನ ನಿಜವಾದ ಹೆಸರು ರಘು ಶಿವಮೊಗ್ಗ. ಸೀರಿಯಲ್ ನಲ್ಲಿ ಖಳನಾಯಕನಾಗಿ ಕಾಣಿಸಿಕೊಂಡಿರುವ ರಘು ಶಿವಮೊಗ್ಗ, ಆ ಪಾತ್ರಕ್ಕೆ ಸಖತ್ತಾಗಿಯೇ ಸೂಟ್ ಆಗ್ತಿದ್ದಾರೆ. ಅವರ ನಟನೆಗೆ ವೀಕ್ಷಕರು ಫುಲ್ ಮಾಕ್ಸ್ ಕೊಟ್ಟಿದ್ದಾರೆ.
ಅಂದ್ಹಾಗೆ ರಘು ಶಿವಮೊಗ್ಗ ಸಾಮಾನ್ಯ ಕಲಾವಿದರಲ್ಲ. ರಂಗಭೂಮಿಯಿಂದ ಬಂದವರು. ಶಿವಮೊಗ್ಗದ ಗೋಪಾಳದ ಗಲ್ಲಿಯವರು. ಚಿಕ್ಕವಯಸ್ಸಿನಲ್ಲಿಯೇ ಮಿಮಿಕ್ರಿ ಮಾಡಿಕೊಂಡು ಬೆಳೆದವರು ಅನಂತರ ನೀನಾಸಂ ಸೇರಿಕೊಂಡರು. ಅಲ್ಲಿಂದ ನಿರ್ದೇಶನ ಗೀಳು ಹತ್ತಿತ್ತು. ಅಲ್ಲಿಂದ ನಟನಾಗಿ, ನಿರ್ದೇಶಕನಾಗಿ, ಬರಹಗಾರನಾಗಿ ಹೊರಹೊಮ್ಮಿದರು. ‘ಮುಕ್ತ’ ಧಾರಾವಾಹಿಯಲ್ಲಿ ನಟನೆ ಆರಂಭಿಸಿದರು. ಮೊದಲ ಬಾರಿಗೆ ಮಕ್ಕಳ ರಂಗಭೂಮಿ ಎಂಬ ಕಿರುಚಿತ್ರವನ್ನು ನಿರ್ದೇಶನ ಮಾಡಿದರು. ಅಲ್ಲಿಂದ ಅವರ ಪಯಣ ಯಶಸ್ವಿ ಹಾದಿಯಲ್ಲಿ ಸಾಗುತ್ತಾ ಹೋಯ್ತು. ‘ಚೂರಿಕಟ್ಟೆ’ ಎಂಬ ಸಿನಿಮಾವನ್ನು ರಘು ಶಿವಮೊಗ್ಗ ಅವರೇ ನಿರ್ದೇಶನ ಮಾಡಿದ್ರು.. ಇಂಥ ನಿರ್ದೇಶಕ, ನಟ ಈಗ ವಿಲನ್ ಆಗಿಯೂ ಎಲ್ಲರನ್ನು ಕಾಡುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ‘ಭೀಮ’ ಚಿತ್ರದಲ್ಲಿ, ಹೊಯ್ಸಳ, ಕೈವಾ, ಡಿಡಿಡಿ ಚಿತ್ರದಲ್ಲೂ ಪೊಲೀಸ್ ಆಫೀಸರ್ ಪೊಲೀಸ್ ಆಫೀಸರ್ ಆಗಿ ಗಮನ ಸೆಳೆದಿದ್ದರು ರಘು ಶಿವಮೊಗ್ಗ.
ಇನ್ನು ರಘು ಶಿವಮೊಗ್ಗ ಅವರು ನಿರ್ದೇಶಿಸಿರುವ ಕಿರುಚಿತ್ರಕ್ಕೆವೊಂದಕ್ಕೆ ರಾಜ್ಯ ಪ್ರಶಸ್ತಿ ಸಿಕ್ಕಿತ್ತು. ಹೌದು, ಬೇನಾಮಿ ಕರೆಯ ಸುಳಿಯ ಕಥೆ ಹೊಂದಿದ್ದ ‘ಚೌಕ ಬಾರ’ ಎನ್ನುವ ಕಿರುಚಿತ್ರಕ್ಕೆ ರಾಜ್ಯ ಪ್ರಶಸ್ತಿ ಕೂಡ ಬಂದಿತ್ತು. ಈ ಕಿರು ಚಿತ್ರದಲ್ಲಿ ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ ಪ್ರಮುಖ ಪಾತ್ರದಲ್ಲಿ ನಟಿಸಿದ್ರು.. ಈ ಚಿತ್ರವನ್ನು ಥಿಯೇಟರ್ ಗಳಲ್ಲೂ ರಿಲೀಸ್ ಮಾಡಿ ಯಶಸ್ವಿಯಾಗಿದ್ದರು. ಸದ್ಯ ದೃಷ್ಟಿ ಬೊಟ್ಟು ಧಾರಾವಾಹಿಗೆ ಜೀವ ತುಂಬುತ್ತಿರುವ ರಘು ಶಿವಮೊಗ್ಗ ಇವರ ನಟನೆಗೆ ಅಪಾರ ಮೆಚ್ಚುಗೆ ಲಭಿಸಿದೆ.