ರಾತ್ರಿ ಮಲಗುವ ಮುನ್ನ ಈ ತಪ್ಪುಗಳನ್ನು ಮಾಡುತ್ತಿದ್ದೀರಾ?

ರಾತ್ರಿ ಮಲಗುವ ಮುನ್ನ ಈ ತಪ್ಪುಗಳನ್ನು ಮಾಡುತ್ತಿದ್ದೀರಾ?

ಕೆಲವರಿಗೆ ರಾತ್ರಿ ಏನ್ ಮಾಡಿದ್ರು ನಿದ್ರೆ ಬರಲ್ಲ. ರಾತ್ರಿ ಸರಿಯಾಗಿ ನಿದ್ರೆ ಮಾಡಿಲ್ಲ ದಿನವಿಡಿ ಸರಿಯಿರಲ್ಲ. ಮಲಗಿದ ಮೇಲೆ ಒಳ್ಳೆಯ ನಿದ್ರೆ ಬಂದರೆ ಬೆಳಗ್ಗೆ ಎದ್ದ ಮೇಲೆ ಒಳ್ಳೆಯ ಉಲ್ಲಾಸ-ಉತ್ಸಾಹವೂ ಇರುತ್ತದೆ. ಅಂಥ ಒಳ್ಳೆಯ ನಿದ್ರೆಯನ್ನು ಮಲಗುವ ಮುನ್ನ ಹೇಗಿರುತ್ತೇವೆ ಎಂಬ ಸಂಗತಿಗಳೂ ನಿರ್ಧರಿಸುತ್ತವೆ ಎಂಬುದು ಕೂಡ ಅಷ್ಟೇ ಸತ್ಯ. ಹೀಗಾಗಿ ಮಲಗುವ ಮುನ್ನ ಏನೇನು ಎಚ್ಚರಿಕೆ ವಹಿಸಬೇಕು ಅನ್ನೋ ಮಾಹಿತಿ ಇಲ್ಲಿದೆ.

ರಾತ್ರಿ ವೇಳೆ ಒತ್ತಡ ಉಂಟು ಮಾಡುವಂಥ, ಅತಿಯಾದ ಭಾವಸಂಘರ್ಷ ಮೂಡಿಸುವಂಥ ಅಥವಾ ಅನಗತ್ಯ ಚರ್ಚೆ  ವಾದಗಳಲ್ಲಿ ಮಲಗುವ ಮುನ್ನ ಭಾಗಿಯಾಗಬೇಡಿ. ಇದು ಮನಸಿನ ಪ್ರಶಾಂತತೆಯನ್ನು ಹಾಳು ಮಾಡಿ, ನಿದ್ರೆಗೂ ತೊಂದರೆ ಮಾಡುತ್ತದೆ.

ಇದನ್ನೂ ಓದಿ: ಹಗಲಿನಲ್ಲಿ ಹೆಚ್ಚು ನಿದ್ದೆ ಮಾಡುತ್ತೀರಾ? – ಎಚ್ಚರ.. ಇದು ಕಾಯಿಲೆ ಇರಬಹುದು!

ಇನ್ನು ನಿದ್ರೆಯ ದೊಡ್ಡ ಶತ್ರು ಎಂದರೆ ಮೊಬೈಲ್​ಫೋನ್. ಮೊಬೈಲ್​ಫೋನ್​, ಲ್ಯಾಪ್​ಟಾಪ್​, ಡೆಸ್ಕ್​ಟಾಪ್​ ಮುಂತಾದ ಗ್ಯಾಜೆಟ್​ಗಳನ್ನು ಮಲಗಲಿಕ್ಕೆ ಕನಿಷ್ಠ ಒಂದು ಗಂಟೆಯ ಮುಂಚೆಯೇ ದೂರ ಇರಿಸಿ. ಏಕೆಂದರೆ ಇದರಿಂದ ಹೊರಹೊಮ್ಮುವ ನೀಲಿಬೆಳಕು ನಿದ್ರೆಗೆ ಪೂರಕವಾದ ಮೆಲಟೊನಿನ್ ಹಾರ್ಮೋನ್ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಮಲಗಲಿಕ್ಕೆ ಇನ್ನೇನು ಕೆಲವೇ ಗಂಟೆಗಳಿವೆ ಎನ್ನುವಾಗ ಅತಿಯಾದ ಶ್ರಮ ಇರುವ ಚಟುವಟಿಕೆಗಳನ್ನು ಮಾಡಬಾರದು. ಕಚೇರಿಗೆ ಸಂಬಂಧಿತ ಒತ್ತಡದ ಕೆಲಸ, ಅತಿಯಾದ ವ್ಯಾಯಾಮಗಳನ್ನು ಮಾಡಬೇಡಿ. ಇವು ಮನಸು ಶಾಂತವಾಗಲು ತಡೆಯೊಡ್ಡುತ್ತವೆ. ಇನ್ನು ಕಾಫಿಯೂ ಚಹ ಕುಡಿಬೇಡಿ. ರಾತ್ರಿಯ ವೇಳೆ ಹೆಚ್ಚು ತಿನ್ನೋದು ಒಳ್ಳೆಯದಲ್ಲ. ಇದು ಜೀರ್ಣ ವ್ಯವಸ್ಥೆ ಮೇಲೆ ಭಾರಿ ಒತ್ತಡ ಉಂಟು ಮಾಡುತ್ತದೆ ಹಾಗೂ ಒಳ್ಳೆಯ ನಿದ್ರೆಗೆ ಅಡ್ಡಿ ಆಗುತ್ತದೆ.

ಮಲಗುವ ಮೊದಲು ನೀರು-ಜ್ಯೂಸ್ ಮುಂತಾದ ದ್ರವಪದಾರ್ಥಗಳನ್ನು ಹೆಚ್ಚು ಸೇವಿಸ್ಬೇಡಿ. ಇದು ಮೂತ್ರವಿಸರ್ಜನೆಗಾಗಿ ಮಧ್ಯೆ ಎಚ್ಚರಗೊಳ್ಳುವಂತೆ ಮಾಡುವುದಲ್ಲದೆ ನಂತರ ಮತ್ತೆ ನಿದ್ರೆ ಬರುವಲ್ಲಿ ತೊಂದರೆ ಎದುರಿಸುವಂತೆ ಮಾಡುತ್ತದೆ.

Shwetha M