ಊಟಕ್ಕೆ ಮುಂಚೆ ಈ ಹಣ್ಣಿನ ಜ್ಯೂಸ್‌ ಕುಡಿದ್ರೆ ಮಂಜಿನಂತೆ ಕರಗುತ್ತೆ ಬೊಜ್ಜು!

ಊಟಕ್ಕೆ ಮುಂಚೆ ಈ ಹಣ್ಣಿನ ಜ್ಯೂಸ್‌ ಕುಡಿದ್ರೆ ಮಂಜಿನಂತೆ ಕರಗುತ್ತೆ ಬೊಜ್ಜು!

ಇತ್ತೀಚಿನ ದಿನಗಳಲ್ಲಿ ಅನೇಕರಿಗೆ ಬೊಜ್ಜು ಕರಗಿಸುವುದು ಹೇಗೆ ಅನ್ನೋದೇ ದೊಡ್ಡ ಚಿಂತೆ. ಇದಕ್ಕಾಗಿ ಅನೇಕರು ಡಯೆಟ್, ವ್ಯಾಯಾಮ, ವಾಕಿಂಗ್‌ ಅಂತಾ ನಾನಾ ಸರ್ಕಸ್‌ ಮಾಡ್ತಾರೆ. ಬೊಜ್ಜು ಕರಗಿಸುವವರು ಊಟಕ್ಕಿಂತ ಮುಂಚೆ ಕರ್ಬೂಜ ಜ್ಯೂಸ್‌ ನ ಕುಡಿದ್ರೆ ದೇಹದಲ್ಲಾಗುತ್ತೆ ಮ್ಯಾಜಿಕ್!‌

ಇದನ್ನೂ ಓದಿ: ಅಶ್ವಿನಿ & ಗ್ಯಾಂಗ್‌ ಪ್ಲ್ಯಾನ್‌ ವರ್ಕೌಟ್?‌ – ಈ ವಾರದ ಕಳಪೆ ಮಾಳು!

ಕರ್ಬೂಜ ಹಣ್ಣು ಮಾರ್ಕೆಟ್‌ ನಲ್ಲಿ ಸಿಗುತ್ತದೆ. ಈ ಹಣ್ಣಿನಿಂದ ಅದ್ಭುತ ಆರೋಗ್ಯ ಪ್ರಯೋಜನಗಳಿವೆ. ಕರ್ಬೂಜ ಹಣ್ಣಿನಲ್ಲಿ ಹೆಚ್ಚಿನ ಫೈಬರ್, ವಿಟಮಿನ್ ಎ & ವಿಟಮಿನ್ ಸಿ ಯಿಂದ ಸಮೃದ್ಧವಾಗಿದೆ. ಕರಬೂಜ ಹಣ್ಣು ಹೃದಯ ರೋಗಿಗಳಿಗೆ ಸಹ ಒಳ್ಳೆಯದು. ಏಕೆಂದರೆ ಇದರಲ್ಲಿ ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಇದ್ದು ಅದು ರಕ್ತನಾಳಗಳನ್ನು ಆರೋಗ್ಯವಾಗಿಡುತ್ತದೆ. ಕರಬೂಜ ಹಣ್ಣು ಹೆಚ್ಚಿನ ಫೈಬರ್ ಆಹಾರವಾಗಿದ್ದು ಅದು ಜೀರ್ಣಾಂಗ ವ್ಯವಸ್ಥೆಯ ಕಾರ್ಯನಿರ್ವಹಣೆಯನ್ನು ಸುಧಾರಿಸುತ್ತದೆ. ಈ ಹಣ್ಣು ಕೊಬ್ಬನ್ನು ವೇಗವಾಗಿ ಜೀರ್ಣಿಸಿಕೊಳ್ಳುತ್ತದೆ. ಇದು ತೂಕ ಹೆಚ್ಚಾಗಲು ಕಾರಣವಾಗುವುದಿಲ್ಲ. ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.

ಕರಬೂಜ ಹಣ್ಣು ಉತ್ತಮ ಪ್ರಮಾಣದ ನೀರನ್ನು ಸಹ ಹೊಂದಿರುತ್ತದೆ. ಕರಬೂಜ ಹಣ್ಣು ಊಟಕ್ಕೆ ಮುನ್ನ ತಿಂದರೆ ಹೊಟ್ಟೆ ತುಂಬಿದ ಅನುಭವ ಆಗುತ್ತದೆ. ಕರಬೂಜ ಹಣ್ಣು ಉತ್ತಮ ಪ್ರಮಾಣದ ಪೊಟ್ಯಾಸಿಯಮ್ ಅನ್ನು ಹೊಂದಿರುತ್ತವೆ. ಇದು ದೇಹದ ಕೊಬ್ಬನ್ನು ಕಡಿಮೆ ಮಾಡುತ್ತದೆ. ಕಡಿಮೆ ಹಸಿವನ್ನು ಅನುಭವಿಸುತ್ತೀರಿ. ಕ್ಯಾಲೋರಿಗಳು ಕಡಿಮೆ. ಇದು ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ತೂಕ ಇಳಿಸಿಕೊಳ್ಳಲು ಕರಬೂಜ ಹಣ್ಣನ್ನು ಎರಡು ವಿಧಗಳಲ್ಲಿ ತಿನ್ನಬಹುದು. ಉಪಾಹಾರ ಮತ್ತು ತಿಂಡಿಯ ಸಮಯದಲ್ಲಿ ತಿನ್ನಬಹುದು. ಅಥವಾ ಸಲಾಡ್ ಅಥವಾ ಸ್ಮೂಥಿ ರೂಪದಲ್ಲಿಯೂ ತೆಗೆದುಕೊಳ್ಳಬಹುದು. ಹೃದಯ ಕಾಯಿಲೆಗಳಿಂದ ರಕ್ಷಿಸುತ್ತದೆ. ತೂಕ ನಷ್ಟಕ್ಕೆ ಕರಬೂಜ ಹಣ್ಣು ತಿನ್ನುವುದು ಪ್ರಯೋಜನಕಾರಿ ಆಗಿದೆ.

Shwetha M