ಡ್ರಾಮಾ ಕ್ವೀನ್ ರಾಖಿ ಸಾವಂತ್ ಶಾಕಿಂಗ್ ಹೇಳಿಕೆ – ಜ್ಯೋತಿಷಿ ಹೇಳಿದಮೇಲೆ ಒಳ ಉಡುಪು ಹಾಕೋದೇ ಇಲ್ವಂತೆ..!

ಡ್ರಾಮಾ ಕ್ವೀನ್ ರಾಖಿ ಸಾವಂತ್ ಶಾಕಿಂಗ್ ಹೇಳಿಕೆ – ಜ್ಯೋತಿಷಿ ಹೇಳಿದಮೇಲೆ ಒಳ ಉಡುಪು ಹಾಕೋದೇ ಇಲ್ವಂತೆ..!

ಬಾಲಿವುಡ್ ನಟಿ ರಾಖಿ ಸಾವಂತ್ ಯಾರಿಗೆ ಗೊತ್ತಿಲ್ಲ ಹೇಳಿ. ರಿಯಾಲಿಟಿ ಶೋನಲ್ಲೂ ಡ್ರಾಮಾ, ಮದುವೆ ಹೆಸರಲ್ಲೂ ಡ್ರಾಮಾ, ಡ್ರೆಸ್ ವಿಚಾರದಲ್ಲೂ ಡ್ರಾಮಾ. ಈಕೆಯನ್ನ ಕರೆಯೋದೇ ಡ್ರಾಮಾ ಕ್ವೀನ್ ರಾಖಿ, ವಿವಾದಗಳ ರಾಣಿ ಎಂದು. ಇದೀಗ ರಾಖಿ ಮತ್ತೊಂದು ಶಾಕಿಂಗ್ ನ್ಯೂಸ್ ಕೊಟ್ಟಿದ್ದಾಳೆ. ಈಕೆ ಒಳ ಉಡುಪು ಧರಿಸೋದೇ ಇಲ್ವಂತೆ.

ಇದನ್ನೂ ಓದಿ: ಇದು ನನ್ನ ಮೊದಲ ಮದುವೆ! – ಎರಡನೇ ಮದುವೆಯಾದ ಬಳಿಕ ಉಲ್ಟಾ ಹೊಡೆದ ರಾಖಿ ಸಾವಂತ್ ಮಾಜಿ ಪತಿ

ರಿಯಾಲಿಟಿ ಶೋಗಳಿಂದ ಫೇಮಸ್ ಆಗಿರುವ ರಾಖಿ ಸಾವಂತ್ ಈಗ ಮತ್ತೊಂದು ರಿಯಾಲಿಟಿ ಶೋಗೆ ಎಂಟ್ರಿಕೊಟ್ಟಿದ್ದಾರೆ. ವಿವಾದಗಳ ರಾಣಿ ರಾಖಿ ಸಾವಂತ್, ಮರಾಠಿ ಬಿಗ್‌ಬಾಸ್‌ಗೆ ವೈಲ್ಡ್‌ಕಾರ್ಡ್ ಎಂಟ್ರಿ ಕೊಟ್ಟಿದ್ದಾರೆ. ಮರಾಠಿಯ ಬಿಗ್​ಬಾಸ್​​ ಮನೆಗೆ ಭೇಟಿ ಕೊಟ್ಟು ಬಿಗ್​ ಸರ್​ಪ್ರೈಸ್​ ನೀಡಿದ್ದಾರೆ. ಇದಕ್ಕೂ ಮೊದಲು ರಾಖಿ ಸಾವಂತ್ ನಿರೂಪಕಿ ಜೊತೆ ಮಾತನಾಡುತ್ತಾ ಒಂದು ಶಾಕಿಂಗ್ ವಿಚಾರ ರಿವೀಲ್ ಮಾಡಿದ್ದಾರೆ.  ನೀವ್ಯಾಕೆ ಈ ರೀತಿಯ ಡ್ರೆಸ್​ ಹಾಕುತ್ತೀರಿ ಎಂದು ಆ್ಯಂಕರ್​ ರಾಖಿ ಸಾವಂತ್ ಬಳಿ ಕೇಳುತ್ತಾರೆ. ಆಗ ರಾಖಿ ಸಾವಂತ್, ನನಗೆ ಜ್ಯೋತಿಷಿ ಒಬ್ಬರು ಮೇಲಿನ ಹಾಗೂ ಕೆಳಗಿನ ಒಳ ಉಡುಪು ಹಾಕಬಾರದು. ಒಂದು ವೇಳೆ ಈ ಉಡುಪು ಹಾಕದಿದ್ದರೆ, ಟಾಪ್​ ಲೆವಲ್​ಗೆ ಹೋಗುವುದಾಗಿ ಹೇಳಿದ್ದಾರೆ ಎಂದರು. ಆವತ್ತಿನಿಂದ ಇವತ್ತಿನವರೆಗೂ ಒಳ ಉಡುಪು ಧರಿಸಲ್ಲ ಎಂದು ಹೇಳಿದ್ದಾರೆ. ರಾಖಿ ಮಾತು ಕೇಳಿ ಆ್ಯಂಕರ್ ಮುಜುಗರಕ್ಕೊಳಗಾಗಿದ್ದಾರೆ. ಆಗ ರಾಖಿ ಸಾವಂತ್, ಅಂಜುತ್ತಾ ಯಾಕೆ ಕೇಳ್ತೀರಿ. ಈಗಲೂ ಆ ಉಡುಪುಗಳನ್ನು ನಾನು ಹಾಕಿಲ್ಲ. ನೀವು ಇದಕ್ಕೆ ಮುಜುಗರ ಪಡುವುದು ಬೇಕಿಲ್ಲ ಎಂದಾಗ ಆ್ಯಂಕರ್​ ಸುಸ್ತಾಗಿದ್ದಾಳೆ. ಇದರ ವಿಡಿಯೋ ಈಗ ವೈರಲ್ ಆಗಿದೆ.

ರಾಖಿ ಅವರು, ತಮ್ಮ ಪತಿ ಆದಿಲ್ ದುರಾನಿ ವಿರುದ್ಧ ಕ್ರಿಮಿನಲ್ ಕೇಸ್​​ ದಾಖಲಿಸಿದ್ದರು. ಇದನ್ನು ಬಾಂಬೆ ಹೈಕೋರ್ಟ್ ಈಚೆಗೆ ರದ್ದುಗೊಳಿಸಿದೆ. ಜೊತೆಗೆ, ಆದಿಲ್ ಕೂಡ ರಾಖಿ ವಿರುದ್ಧ ನೀಡಿದ್ದ ದೂರನ್ನೂ ವಜಾಗೊಳಿಸಲಾಗಿದೆ. ಇಬ್ಬರೂ ಸೌಹಾರ್ದಯುತವಾಗಿ ಸಮಸ್ಯೆಯನ್ನು ಬಗೆಹರಿಸಿಕೊಂಡಿರೋ ಹಿನ್ನೆಲೆಯಲ್ಲಿ ಕೇಸ್ ವಜಾ ಆಗಿದೆ. ಇದೆಲ್ಲಾ ಆದಮೇಲೆ ರಾಖಿ ಮತ್ತೆ ರಿಯಾಲಿಟಿ ಶೋಗಳಲ್ಲಿ ಭಾಗವಹಿಸುತ್ತಿದ್ದಾರೆ.

Sulekha

Leave a Reply

Your email address will not be published. Required fields are marked *