ಕರುನಾಡಲ್ಲಿ ಅಣ್ಣಾವ್ರ ನೆನಪು – ವರನಟ ಡಾ. ರಾಜ್‌ಕುಮಾರ್ ಸಮಾಧಿಗೆ ಕುಟುಂಬಸ್ಥರಿಂದ ಪೂಜೆ ಸಲ್ಲಿಕೆ

ವರನಟ ಡಾ. ರಾಜ್‌ಕುಮಾರ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಇಡೀ ಕರುನಾಡು ಅವರನ್ನು ಸ್ಮರಿಸುತ್ತಿದೆ. ಏಪ್ರಿಲ್ 24ರಂದು ಅಣ್ಣಾವ್ರು ಹುಟ್ಟಿದ ದಿನ. ಅಭಿಮಾನಿ ದೇವ್ರುಗಳು ಅಣ್ಣಾವ್ರ ನೆನಪಿನಲ್ಲಿ ರಾಜ್ಯಾದ್ಯಂತ ನಾನಾ ರೀತಿಯಲ್ಲಿ ಒಳ್ಳೆಯ ಕಾರ್ಯಗಳು ನಡೆಯುತ್ತಿವೆ. ದೊಡ್ಮನೆ ಕುಟುಂಬ ಕೂಡಾ ರಾಜ್‌ಕುಮಾರ್ ಅವರ ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿದರು.
ಇದನ್ನೂ ಓದಿ: ಏ. 26 ರಂದು ಮೈಸೂರಿನ ಪ್ರವಾಸಿ ತಾಣಗಳು ಬಂದ್ – ಕಾರಣವೇನು ಗೊತ್ತಾ?
ಡಾ.ರಾಜ್ ಕುಮಾರ್. ಕನ್ನಡಿಗರ ಹೃದಯ ಸಾಮ್ರಾಜ್ಯದ ಅಧಿಪತಿಯಾಗಿ ಮೆರೆದವರು ಮೇರುನಟ ಡಾ. ರಾಜ್ ಕುಮಾರ್. ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜ್. ಚಾಮರಾಜನಗರದ ಸಿಂಗಾನಲ್ಲೂರು ಎಂಬ ಕುಗ್ರಾಮದ ಪುಟ್ಟ ಬಾಲಕ ಮುತ್ತುರಾಜನನ್ನು ಡಾ.ರಾಜಕುಮಾರನನ್ನಾಗಿ ಮಾಡಿದ್ದು ಅಭಿಮಾನಿ ದೇವರುಗಳು. ಡಾ.ರಾಜ್ ಕುಮಾರ್ ಹುಟ್ಟಿದ್ದು 1929, ಏಪ್ರಿಲ್ 24ರಂದು. ಪುಟ್ಟಸ್ವಾಮಯ್ಯ ಹಾಗೂ ಲಕ್ಷ್ಮಮ್ಮ ದಂಪತಿ ಹಿರಿಮಗನೇ ಈ ಗಾಜನೂರಿನ ಗಂಡು. ಬಡತನ, ಅನಕ್ಷರಸ್ಥ ಕುಟುಂಬದಲ್ಲಿ ಜನಿಸಿದ ಡಾ.ರಾಜ್, ಓದಿದ್ದು ನಾಲ್ಕನೇ ಕ್ಲಾಸ್. ಆದರೆ ಸಾಧನೆ ಮಾತ್ರ ಶಿಖರದಷ್ಟು. ಭಾರತೀಯ ಚಿತ್ರರಂಗದಲ್ಲಿ ಅಣ್ಣಾವ್ರ ಕಲಾಸೇವೆ ಎಂದೆಂದಿಗೂ ಅಜರಾಮರ.
ಕಂಠೀರವ ಸ್ಟುಡಿಯೋದಲ್ಲಿರುವ ಡಾ.ರಾಜ್‌ಕುಮಾರ್ ಸ್ಮಾರಕದ ಬಳಿ ರಾಘವೇಂದ್ರ ರಾಜ್‌ಕುಮಾರ್, ಪತ್ನಿ ಮಂಗಳ, ಡಾ.ರಾಜ್ ಪುತ್ರಿ ಲಕ್ಷ್ಮಿ ದಂಪತಿ, ಅಶ್ವಿನಿ ರಾಜ್‌ಕುಮಾರ್, ಪುತ್ರಿ ವಂದಿತಾ ಆಗಮಿಸಿದ್ದಾರೆ. ಡಾ.ರಾಜ್ ಸ್ಮಾರಕಕ್ಕೆ ಕುಟುಂಬಸ್ಥರಿಂದ ಪೂಜೆ ಸಲ್ಲಿಸಿದ್ದಾರೆ. ಅಂದಹಾಗೆ, ಈ ವೇಳೆ ಹೊನ್ನವಳ್ಳಿ ಕೃಷ್ಣ ಭಾಗಿಯಾಗಿ ಸ್ಮಾರಕಕ್ಕೆ ಪೂಜೆ ಸಲ್ಲಿಸಿದ್ದರು.
ಡಾ. ರಾಜ್‌ಕುಮಾರ್ ಅವರ 95ನೇ ವರ್ಷದ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿಸಲು ನಾನಾ ರೀತಿಯ ಸಿದ್ಧತೆಯನ್ನು ಅಭಿಮಾನಿಗಳು ಮಾಡಿಕೊಂಡಿದ್ದಾರೆ. ಕರ್ನಾಟಕ ಸರಕಾರ ಮತ್ತು ಡಾ.ರಾಜ್ ಕುಮಾರ್ ಸ್ಮಾರಕ ಟ್ರಸ್ಟ್ ಪ್ರತಿ ವರ್ಷದಂತೆ ಈ ವರ್ಷವೂ ನಾನಾ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು.