ಡಾ. ರಾಜ್‌ಕುಮಾರ್ 17ನೇ ವರ್ಷದ ಪುಣ್ಯಸ್ಮರಣೆ – ಅಭಿಮಾನಿಗಳಿಂದ ಅಣ್ಣಾವ್ರ ಸಮಾಧಿಗೆ ಪೂಜೆ

ಡಾ. ರಾಜ್‌ಕುಮಾರ್ 17ನೇ ವರ್ಷದ ಪುಣ್ಯಸ್ಮರಣೆ – ಅಭಿಮಾನಿಗಳಿಂದ ಅಣ್ಣಾವ್ರ ಸಮಾಧಿಗೆ ಪೂಜೆ

ಭಾರತ ಚಿತ್ರರಂಗ ಕಂಡ ಅಪ್ರತಿಮ ನಟ ಡಾ. ರಾಜ್‌ಕುಮಾರ್. ಕನ್ನಡದ ವರನಟ ರಾಜ್‌ಕುಮಾರ್ ಇಲ್ಲದೇ ಇವತ್ತಿಗೆ 17 ವರ್ಷಗಳು ಕಳೆದಿದೆ. ಅಣ್ಣಾವ್ರ ಅಗಲಿಕೆಯ ದುಃಖ ಈಗಲೂ ಅಭಿಮಾನಿಗಳನ್ನು ಕಾಡುತ್ತಿದೆ. 5 ದಶಕಗಳ ಕಾಲ ಕನ್ನಡ ಚಿತ್ರರಂಗವನ್ನು ಆಳಿದ್ದ ಡಾ. ರಾಜ್‌ಕುಮಾರ್, ಏಪ್ರಿಲ್ 12ರಂದು ಅಭಿಮಾನಿ ದೇವರುಗಳನ್ನು ಅಗಲಿದ್ದರು. ಅಣ್ಣಾವ್ರ ಪುಣ್ಯಸ್ಮರಣೆಯ ಅಂಗವಾಗಿ ಅಭಿಮಾನಿಗಳು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಬೆಂಗಳೂರಿನ ಕಂಠೀರವ ಸ್ಟುಡಿಯೋ ಬಳಿಯಿರುವ ಸಮಾಧಿಗೆ ಡಾ.ರಾಜ್ ಕುಟುಂಬ ಆಗಮಿಸಿ ಪೂಜೆ ಸಲ್ಲಿಸಿದ್ದಾರೆ. ರಾಘವೇಂದ್ರ ರಾಜ್ ಕುಮಾರ್, ಯುವರಾಜ್ ಕುಮಾರ್, ಶಿವರಾಜ್ ಕುಮಾರ್, ಅಶ್ವಿನಿ ಪುನೀತ್ ರಾಜ್ ಕುಮಾರ್ ಸೇರಿದಂತೆ ಡಾ.ರಾಜ್ ಕುಟುಂಬದ ಸದಸ್ಯರು ಪೂಜೆ ಸಲ್ಲಿಸಿದರು.

ಇದನ್ನೂ ಓದಿ: ‘ಕ್ಯಾಪ್ಟನ್ ಮಿಲ್ಲರ್’ ಚಿತ್ರದಲ್ಲಿ ಶಿವಣ್ಣನ ಪಾತ್ರ ರಿವೀಲ್ – ಧನುಷ್ ಜೊತೆ ವಿಭಿನ್ನ ಗೆಟಪ್‌ನಲ್ಲಿ ಬರಲಿದ್ದಾರೆ ಶಿವರಾಜ್‌ ಕುಮಾರ್

ರಾಜ್ ಕುಮಾರ್ ಅವರ ಪುಣ್ಯತಿಥಿ ಅಂಗವಾಗಿ ಪುನೀತ್ ರಾಜ್ ಕುಮಾರ್ ಮತ್ತು ಪಾರ್ವತಮ್ಮ ರಾಜ್ ಕುಮಾರ್ ಸಮಾಧಿಗೂ ಹೂಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು. ಸ್ಮಾರಕದ ಮುಂದೆ ಅಭಿಮಾನಿಗಳು ರಕ್ತದಾನ, ಅನ್ನದಾನ ಶಿಬಿರಗಳನ್ನು ಆಯೋಜನೆ ಮಾಡಿದ್ದರು. ತಮ್ಮ ನೆಚ್ಚಿನ ನಟನಿಗೆ ಈ ಮೂಲಕ ನಮನ ಸಲ್ಲಿಸಿದರು. ಅನ್ನದಾನ, ರಕ್ತದಾನ, ಉಚಿತ ಆರೋಗ್ಯ ತಪಾಸಣೆ ಕಾರ್ಯಗಳನ್ನು ಅಭಿಮಾನಿಗಳು ರಾಜ್ಯಾದ್ಯಂತ ನಡೆಸುತ್ತಿದ್ದಾರೆ.

suddiyaana