ಅಣ್ಣಾವ್ರ ಸಮಾಧಿಗೆ ಕುಟುಂಬಸ್ಥರು, ಅಭಿಮಾನಿಗಳಿಂದ ಪೂಜೆ – ಜಪಾನ್​​ನಲ್ಲೂ ಡಾ.ರಾಜ್ ಹುಟ್ಟುಹಬ್ಬ ಆಚರಣೆ!

ಅಣ್ಣಾವ್ರ ಸಮಾಧಿಗೆ ಕುಟುಂಬಸ್ಥರು, ಅಭಿಮಾನಿಗಳಿಂದ ಪೂಜೆ – ಜಪಾನ್​​ನಲ್ಲೂ ಡಾ.ರಾಜ್ ಹುಟ್ಟುಹಬ್ಬ ಆಚರಣೆ!

ಅಭಿಮಾನಿಗಳ ಆರಾಧ್ಯ ದೈವ, ವರನಟ ಡಾ.ರಾಜ್‌ಕುಮಾರ್​ರವರ 94ನೇ ಹುಟ್ಟುಹಬ್ಬ ಇವತ್ತು. ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ಭದ್ರವಾಗಿ ವಿರಾಜಮಾನವಾಗಿರುವ ರಾಜ್‌ಕುಮಾರ್‌ ಅವರ ಹುಟ್ಟುಹಬ್ಬವನ್ನು ಪ್ರತಿ ವರ್ಷದಂತೆ ಈ ವರ್ಷವೂ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ.

ಇದನ್ನೂ ಓದಿ : ಕಲಾತಪಸ್ವಿ ಡಾ.ರಾಜ್​ಗಿಂದು 94ನೇ ಹುಟ್ಟುಹಬ್ಬ – ಅಭಿಮಾನಿಗಳ ‘ಅಪ್ಪಾಜಿ’ ಬಗ್ಗೆ ನಿಮಗೆಷ್ಟು ಗೊತ್ತು?

ಡಾ.ರಾಜ್ ಕುಮಾರ್ (Dr. Rajkumar) ಅವರ 94ನೇ ಜನ್ಮದಿನವನ್ನು (Birthday) ನಾಡಿನಾದ್ಯಂತ ಅಭಿಮಾನಿಗಳು (Fans) ವಿಭಿನ್ನ ರೀತಿಯಲ್ಲಿ ಆಚರಿಸುತ್ತಿದ್ದಾರೆ. ನೆಚ್ಚಿನ ನಟನ ಹೆಸರಿನಲ್ಲಿ ರಕ್ತದಾನ, ಅನ್ನದಾನ ಹಾಗೂ ವೃದ್ಧಾಶ್ರಮ, ಅನಾಥಾಶ್ರಮಗಳಿಗೆ ಸಹಾಯ ಮಾಡುವ ಮೂಲಕ ಆಚರಿಸುತ್ತಿದ್ದಾರೆ. ನಿನ್ನೆಯಷ್ಟೇ ಅಣ್ಣಾವ್ರ ಮೊಮ್ಮಗನ ಹುಟ್ಟುಹಬ್ಬವನ್ನು ಆಚರಿಸಿದ್ದ ಅಭಿಮಾನಿಗಳು ಇಂದು ಮೇರುನಟನಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ. ಕೆಲ ಅಭಿಮಾನಿಗಳು ಇದ್ದೂರಿನಲ್ಲೇ ಹುಟ್ಟು ಹಬ್ಬ ಆಚರಿಸುತ್ತಿದ್ದರೆ, ಇನ್ನೂ ಹಲವರು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ (Kantheerava Studio) ಡಾ.ರಾಜ್ ಕುಮಾರ್ ಸ್ಮಾರಕಕ್ಕೆ ಬಂದು ಪೂಜೆ ಸಲ್ಲಿಸುತ್ತಿದ್ದಾರೆ. ಬೆಳಗ್ಗೆಯಿಂದಲೇ ಸ್ಮಾರಕಕ್ಕೆ ಅಭಿಮಾನಿಗಳು ದಂಡು ಹರಿದು ಬಂದಿದೆ. ಸ್ಮಾರಕದ ಮುಂದೆಯೇ ಅನ್ನಸಂತರ್ಪಣೆ, ಕೇಕ್ ಕತ್ತರಿಸುವುದು ಹಾಗೂ ರಕ್ತದಾನ, ನೇತ್ರದಾನ ಶಿಬಿರಗಳನ್ನು ಆಯೋಜನೆ ಮಾಡಲಾಗಿದೆ. ಡಾ.ರಾಜ್ ಕುಟುಂಬದ ಸದಸ್ಯರು ಕೂಡ ಆಗಮಿಸಿ ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಲಿದ್ದಾರೆ. ಪಕ್ಕದಲ್ಲೇ ಇರುವ ಪಾರ್ವತಮ್ಮ ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಸಮಾಧಿಗಳಿಗೂ ಪೂಜೆ ಸಲ್ಲಿಸಲಿದ್ದಾರೆ.

ವರನಟ ಡಾ. ರಾಜ್​ಕುಮಾರ್ ಜನ್ಮದಿನ. ಅವರ ಬರ್ತ್​ಡೇನ ವಿಶ್ವಾದ್ಯಂತ ಆಚರಿಸಲಾಗುತ್ತಿದೆ. ವಿಶೇಷ ಎಂದರೆ ದೂರದ ಜಪಾನ್​ನಲ್ಲೂ ರಾಜ್​ಕುಮಾರ್ (Rajkumar) ಹುಟ್ಟುಹಬ್ಬ ಆಚರಣೆ ಮಾಡಲಾಗಿದೆ. ಅಲ್ಲಿರುವ ರಾಜ್ ಅಭಿಮಾನಿಗಳು ಅಣ್ಣಾವ್ರ ಫೋಟೋದ ಎದುರು ಕೇಕ್ ಇಟ್ಟು ಕತ್ತರಿಸಿದ್ದಾರೆ.

suddiyaana