ಡಾಕ್ಟರ್ ಗಂಡನ ಮೇಲೆ ಅನುಮಾನ – ಬೆಡ್ರೂಮ್ನಲ್ಲೇ ಪತಿಯ ಜೀವ ತೆಗೆದ ಡಾ.ಪ್ರಿಯಾಂಕ

ಡಾ. ಕಿರಣ್ ಹಾಗೂ ಡಾ. ಪ್ರಿಯಾಂಕಾ. ಇಬ್ಬರೂ ವೈದ್ಯರು. ಒಬ್ಬರು ಖ್ಯಾತ ಅರವಳಿಕೆ ತಜ್ಞ. ಇನ್ನೊಬ್ಬರು ನೇತ್ರತಜ್ಞೆ. ಒಬ್ಬ ಮಗ. ಚೆಂದದ ಸಂಸಾರ. ಆದರೆ, ಡಾಕ್ಟರ್ ಫ್ಯಾಮಿಲಿಯಲ್ಲಿ ಎಲ್ಲವೂ ಅಂದುಕೊಂಡಂತೆ ಇರಲಿಲ್ಲವಂತೆ. ಗಂಡನ ಮೇಲೆ ವೈದ್ಯೆ ಪತ್ನಿಗೆ ಅನುಮಾನ. ಪದೇ ಪದೇ ಮನೆಯಲ್ಲಿ ಜಗಳ. ಕೊನೆಗೂ ಈ ಸಂಸಾರ ಸಮಸ್ಯೆ ಕೊನೆಯಾಗಿದ್ದು ಕೊಲೆಯಲ್ಲಿ.
ಇದನ್ನೂ ಓದಿ:ಮನೆಯಲ್ಲಿ ಹೆಂಡ್ತಿ , ಹೊಲದಲ್ಲಿ ಗಂಡ ಆತ್ಮಹ*ತ್ಯೆ – ಸಾವಿನ ಮನೆ ಸೇರಿದ ನಾಲ್ಕು ತಿಂಗಳ ಹಿಂದೆ ಮದುವೆಯಾದ ನವಜೋಡಿ
ಧಾರವಾಡದಲ್ಲಿ ಬುಧವಾರ ರಾತ್ರಿ (ಜು.16) ನಡೆದ ವೈದ್ಯರೊಬ್ಬರ ಕೊಲೆ ಬೆಚ್ಚಿಬೀಳಿಸಿದೆ. ಡಾ. ಕಿರಣ್ ಹೊನ್ನಣ್ಣನವರ್ ಬೆಳಗಾವಿ ಜಿಲ್ಲೆಯ ಸಂಕೇಶ್ವರ ತಾಲೂಕಿನ ಹೆಬ್ಬಾಳ ಗ್ರಾಮದವರು. ಖಾಸಗಿ ಆಸ್ಪತ್ರೆಯಲ್ಲಿ ಖ್ಯಾತ ಅರವಳಿಕೆ ತಜ್ಞರಾಗಿದ್ರು. ಇನ್ನು ವಿಜಯಪುರ ಮೂಲದ ಪ್ರಿಯಾಂಕಾ ನೇತ್ರ ತಜ್ಞೆಯಾಗಿದ್ದರು. ಆದರೆ, ಮನೆಯಲ್ಲೇ ಇದ್ದರಂತೆ. ಡಾ. ಕಿರಣ್ ಹಾಗೂ ಡಾ. ಪ್ರಿಯಾಂಕಾ ಇಬ್ಬರಿಗೂ ಮೊದಲೇ ಮದುವೆಯಾಗಿತ್ತು. ಇಬ್ಬರಿಗೂ ಮೊದಲ ಮದುವೆಯಿಂದ ಡಿವೋರ್ಸ್ ಕೂಡ ಆಗಿದೆ. ಶ್ರೀಮಂತ ಮನೆತನದವರಾದ ಡಾ. ಪ್ರಿಯಾಂಕಾ ಹಾಗೂ ಮಧ್ಯಮ ವರ್ಗದ ಡಾ ಕಿರಣ್ಗೂ ಮ್ಯಾಟ್ರಿಮೋನಿಯಲ್ಲಿ ಪರಿಚಯವಾಗಿದೆ. ಬಳಿಕ ಆತ್ಮೀಯತೆ ಬೆಳೆದಿದೆ. ಇಬ್ಬರೂ ಕೆಲ ವರ್ಷಗಳ ಕಾಲ ಪ್ರೀತಿ ಮಾಡಿ ಮದುವೆಯಾಗಿದ್ದರು. 9 ವರ್ಷಗಳ ಹಿಂದೆಯೇ ಮದುವೆಯಾಗಿದ್ದರೂ ಕೂಡಾ ಗಂಡನ ಮೇಲೆ ಪ್ರಿಯಾಂಕಾಗೆ ಅನುಮಾನ ಶುರುವಾಗಿದೆ. ಇದೇ ಇಬ್ಬರ ನಡುವೆ ಕಲಹಕ್ಕೂ ಕಾರಣವಾಗಿದೆ. ಪ್ರಿಯಾಂಕಾ ನೇತ್ರ ತಜ್ಞೆಯಾಗಿದ್ದರೂ ಕೂಡಾ ಪ್ರಾಕ್ಟೀಸ್ ಮಾಡದೆ ಮನೆಯಲ್ಲೇ ಇದ್ದರಂತೆ. ಕೆಲ ವರ್ಷಗಳ ಹಿಂದಷ್ಟೇ ಈ ಜೋಡಿ ಧಾರವಾಡದಲ್ಲಿ ಫ್ಲಾಟ್ ಖರೀದಿಸಿದ್ದರು.
ಡಾ. ಪ್ರಿಯಾಂಕಾ ಗಂಡನ ಮನೆಯವರಿಂದ ದೂರವಿದ್ದರು ಎನ್ನಲಾಗಿದೆ. ಜೊತೆಗೆ ಡಾ. ಕಿರಣ್ ಮೇಲೆ ಪ್ರಿಯಾಂಕಾಗೆ ಅನುಮಾನ ಮೂಡಿತ್ತು. ಬೇರೊಬ್ಬರ ಜೊತೆ ಸಂಬಂಧವಿದೆ ಅಂತ ಜಗಳವಾಡ್ತಿದ್ದಳು ಎನ್ನಲಾಗ್ತಿದೆ. ಬುಧವಾರ ಆಸ್ಪತ್ರೆಯಿಂದ ಮನೆಗೆ ಬಂದಿದ್ದ ಕಿರಣ್, ಬೆಡ್ರೂಮ್ನಲ್ಲಿ ಮಲಗಿದ್ದ ವೇಳೆಯೇ ಪ್ರಿಯಾಂಕ ಚಾಕುವಿನಿಂದ ಇರಿದಿದ್ದಾಳೆ. ಗಂಡನನ್ನ ಕೊಂದು, ಮಗುವಿನ ಮೇಲೂ ಹಲ್ಲೆ ಮಾಡಿದ್ದಳು. ನಂತರ ನಾಲ್ಕು ಇನ್ಸುಲಿನ್ ಇಂಜೆಕ್ಷನ್ ಪಡೆದು ಆತ್ಮಹತ್ಯೆ ಯತ್ನಿಸಿದ್ದಳು. ಸ್ಥಳಕ್ಕೆ ಪೊಲೀಸರು ಆಗಮಿಸಿದಾಗ ಮಗ ಉಸಿರಾಡುತ್ತಿದ್ದ. ಹೀಗಾಗಿ ಪೊಲೀಸರು ತಕ್ಷಣವೇ ಮಗನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಮತ್ತೊಂದೆಡೆ ಪ್ರಿಯಾಂಕಾಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಇನ್ನು ಗಂಡನನ್ನು ತಾನೇ ಕೊಂದಿರುವುದಾಗಿ ಪ್ರಿಯಾಂಕಾ ಹೇಳಿಕೆ ನೀಡಿದ್ದಾಳೆ.

ನೋಡಿರಿ

