ಡಾ.ಕೃತಿಕಾ ರೆಡ್ಡಿ ಕೊಲೆ ಮಾಡಿ ದೇವಸ್ಥಾನ ಸುತ್ತಿದ್ದ ಕಿಲ್ಲರ್ ಪತಿ – ಮಹೇಂದ್ರ ರೆಡ್ಡಿಯನ್ನು ದೇವರು ಕ್ಷಮಿಸಲಿಲ್ಲ

ಡಾ. ಕೃತಿಕಾ ರೆಡ್ಡಿ ಕೊಲೆ ಪ್ರಕರಣದಲ್ಲಿ ಪೊಲೀಸರು ಒಂದೊಂದೇ ವಿಚಾರವನ್ನು ಬಹಿರಂಗ ಮಾಡುತ್ತಿದ್ದಾರೆ. ತನಿಖೆ ವೇಳೆ ಆರೋಪಿ ಮಹೇಂದ್ರ ರೆಡ್ಡಿಯಿಂದ ಕೊಲೆ, ಕೊಲೆ ನಂತರ ನಡೆದ ಘಟನೆಗಳನ್ನು ಪೊಲೀಸರು ಬಾಯಿ ಬಿಡಿಸಿದ್ದಾರೆ.
ಇದನ್ನೂ ಓದಿ:ಪತ್ನಿಯನ್ನು ಕೊಂದಿದ್ದು ನಾನೇ ಎಂದ ಡಾ. ಮಹೇಂದ್ರ ರೆಡ್ಡಿ – ಪತ್ನಿ ಡಾ.ಕೃತಿಕಾ ರೆಡ್ಡಿ ಕೊಂದಿದ್ದು ಹೇಗೆ ಗೊತ್ತಾ?
ಮುದ್ದಿನಂತಾ ಮಗಳನ್ನು ಹೆತ್ತು, ಶಿಕ್ಷಣ ಕೊಡಿಸಿ, ಡಾಕ್ಟರ್‌ನ್ನಾಗಿ ಮಾಡಿ, ಲಕ್ಷ ಲಕ್ಷ ಖರ್ಚು ಮಾಡಿ ಮದುವೆ ಮಾಡಿಸಿಕೊಟ್ಟ ಪೋಷಕರು ಕಂಡಿದ್ದು, ಮಗಳ ಸಾವು. ಆದರೆ, ಕೊಲೆ ಮಾಡಿದ ಪಾಪಿ ಗಂಡ ಮಾಡಿದ್ದು ಬರೀ ನಾಟಕ. ಕೊನೆಗೂ ಮಾಡಿದ ಪಾಪ ಸುಮ್ಮನೆ ಬಿಡಲಿಲ್ಲ. ಪಾಪ ಕಳೆದುಕೊಳ್ಳಲು ದೇವಸ್ಥಾನ ಸುತ್ತಿದ ಪಾಪಿಯನ್ನು ದೇವರು ಕೂಡಾ ಕ್ಷಮಿಸಲಿಲ್ಲ. ಪೊಲೀಸರ ಬಲೆಗೆ ಬಿದ್ದಿದ್ದಾನೆ. ಇದೀಗ ಕೊಲೆಯಾದ ನಂತರ ತಾನು ದೇವಸ್ಥಾನ ಸುತ್ತಿದ್ದೆ ಎಂದು ಪಾಪಿಯೇ ಪೊಲೀಸರ ಎದುರು ಬಾಯಿಬಿಟ್ಟಿದ್ದಾನೆ.
ಪೊಲೀಸ್ ವಿಚಾರಣೆ ವೇಳೆ ಅಚ್ಚರಿಯ ಸಂಗತಿಯೊಂದು ಬೆಳಕಿಗೆ ಬಂದಿದೆ. ಕೊಲೆ ಆರೋಪಿಯಾದ ಡಾ. ಮಹೇಂದ್ರ ರೆಡ್ಡಿ, ಪಶ್ಚಾತ್ತಾಪದಿಂದ ದೇವಸ್ಥಾನಗಳನ್ನು ಸುತ್ತಿ ಬಂದಿದ್ದ ಎಂಬ ವಿಷಯ ಬಯಲಾಗಿದೆ. ಡಾ. ಕೃತಿಕಾ ರೆಡ್ಡಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾದ ಪತಿ ಡಾ. ಮಹೇಂದ್ರ ರೆಡ್ಡಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡು ತನಿಖೆ ವೇಳೆ ಹಲವಾರು ಸತ್ಯಗಳನ್ನು ಬಿಚ್ಚಿಟ್ಟಿದ್ದಾನೆ. ಮಹೇಂದ್ರ ತನ್ನ ಪತ್ನಿಯ ಆರೋಗ್ಯ ಸಮಸ್ಯೆಯಿಂದ ಬೇಸತ್ತು ಆಕೆಯನ್ನು ಕೊಂದು ಸಹಜ ಸಾವು ಎಂದು ಬಿಂಬಿಸಲು ಯತ್ನಿಸಿದ್ದ. ಮರಣೋತ್ತರ ಪರೀಕ್ಷೆ ನಡೆಸಿದಾಗ ಆರೋಪಿ ಕೃತಿಕಾಗೆ ಮಿತಿ ಮೀರಿ ಅನಸ್ತೇಶಿಯಾ ನೀಡಿರುವ ವಿಚಾರ ಬಹಿರಂಗವಾಗಿತ್ತು. ಇದೀಗ ಪೊಲೀಸರ ಮುಂದೆ ಆರೋಪಿ ಮತ್ತೊಂದು ಸತ್ಯ ಬಿಚ್ಚಿಟ್ಟಿದ್ದಾನೆ. ಕೊಲೆ ಮಾಡಿ ಪಾಪಪ್ರಜ್ಞೆಯಿಂದ ಬಳಲುತ್ತಿದ್ದ ಆರೋಪಿ ದೇವಸ್ಥಾನಗಳ ಮೊರೆಹೋಗಿದ್ದ ಎನ್ನುವುದು ತನಿಖೆಯ ವೇಳೆ ತಿಳಿದುಬಂದಿದೆ. ಪತ್ನಿ ಸಾವಿನಿಂದ ತೀವ್ರ ಆತಂಕಕ್ಕೊಳಗಾಗಿದ್ದ ಮಹೇಂದ್ರ ರೆಡ್ಡಿ, ಆರು ತಿಂಗಳ ಕಾಲರಾಜ್ಯದ ಪ್ರಮುಖ ತೀರ್ಥ ಕ್ಷೇತ್ರಗಳಿಗೆ ಭೇಟಿ ನೀಡಿದ್ದ . ಆರೋಪಿ ತಾನು ಮಾಡಿದ ಹೇಯ ಕೃತ್ಯದಿಂದ ಎಲ್ಲಿ ಪೊಲೀಸರ ಕೈಗೆ ಸಿಕ್ಕಿ ಬೀಳುತ್ತೀನೋ ಎಂಬ ಭಯದಿಂದ ಹಾಗೂ ಮಾನಸಿಕ ನೆಮ್ಮದಿಗೋಸ್ಕರ ಸುಮಾರು 15 ಕ್ಕೂ ಹೆಚ್ಚು ದೇವಸ್ಥಾನಗಳನ್ನು ಸುತ್ತಿ ಬಂದಿದ್ದ ಅನ್ನೋದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.

ನೋಡಿರಿ

