ಕಲ್ಲೇಟು ಬಿದ್ದ ಗ್ರಾಮದಿಂದಲೇ ಮತ್ತೆ ಪ್ರಚಾರ – ಬ್ಯಾಂಡೇಜ್ ಕಟ್ಟಿಕೊಂಡೇ ಫೀಲ್ಡಿಗಿಳಿದ ಡಾ. ಜಿ ಪರಮೇಶ್ವರ್..!

ಕಲ್ಲೇಟು ಬಿದ್ದ ಗ್ರಾಮದಿಂದಲೇ ಮತ್ತೆ ಪ್ರಚಾರ – ಬ್ಯಾಂಡೇಜ್ ಕಟ್ಟಿಕೊಂಡೇ ಫೀಲ್ಡಿಗಿಳಿದ ಡಾ. ಜಿ ಪರಮೇಶ್ವರ್..!

ಕಲ್ಲೇಟಿನಿಂದ ಗಾಯಗೊಂಡಿದ್ದ ಕಾಂಗ್ರೆಸ್ ಅಭ್ಯರ್ಥಿ ಡಾ. ಜಿ. ಪರಮೇಶ್ವರ್, ಈಗ ಮತ್ತೆ ಪ್ರಚಾರಕ್ಕಿಳಿದಿದ್ದಾರೆ. ತಲೆಯಲ್ಲಿ ಆದ ಗಾಯದಿಂದಾಗಿ ಚೇತರಿಸಿಕೊಂಡಿರುವ ಕಾಂಗ್ರೆಸ್ ಅಭ್ಯರ್ಥಿ ಡಾ. ಜಿ. ಪರಮೇಶ್ವರ್, ಎಲ್ಲಿ ಕಲ್ಲೇಟು ಬಿದ್ದಿದೆಯೋ ಅದೇ ಗ್ರಾಮದಿಂದಲೇ ಪ್ರಚಾರ ಆರಂಭಿಸಿದ್ದಾರೆ. ತಲೆಯಲ್ಲಿ ಬ್ಯಾಂಡೇಜ್ ಇದ್ದು, ಟೋಪಿ ಧರಿಸಿಕೊಂಡು ಕೊರಟಗೆರೆ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದರು.

ಇದನ್ನೂ ಓದಿ: ‘ಕಲ್ಲಲ್ಲಿ ಹೊಡೆದು ದ್ವೇಷ ತೀರಿಸಿಕೊಳ್ಳಬಾರದು’ – ಚೇತರಿಸಿಕೊಂಡ ನಂತರ ಡಾ.ಜಿ ಪರಮೇಶ್ವರ್ ನೋವಿನ ಮಾತು

ಕೊರಟಗೆರೆ ತಾಲೂಕಿನ ಭೈರೇನಹಳ್ಳಿಯಲ್ಲಿ ಶುಕ್ರವಾರ ಪ್ರಚಾರದ ವೇಳೆ ಕಿಡಿಗೇಡಿಗಳು ಕಲ್ಲು ತೂರಿದ್ದರು. ಇದರಿಂದ ಕಾಂಗ್ರೆಸ್ ಅಭ್ಯರ್ಥಿ ಪರಮೇಶ್ವರ್ ಅವರ ತಲೆಗೆ ಬಿದ್ದು ಗಾಯವಾಗಿತ್ತು. ಕೂಡಲೇ ಅವರ ಬೆಂಬಲಿಗರು ಸಮೀಪದ ಅಕ್ಕಿರಾಮಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು. ನಂತರ ಡಾ. ಜಿ. ಪರಮೇಶ್ವರ್ ತುಮಕೂರಿನ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು, ಏಪ್ರಿಲ್ 29ರಂದು ಇಡೀ ದಿನ ಪ್ರಚಾರವನ್ನು ಸ್ಥಗಿತಗೊಳಿಸಿ ವಿಶ್ರಾಂತಿಯಲ್ಲಿದ್ದರು. ಇದೀಗ ಮತ್ತೆ ಪ್ರಚಾರಕ್ಕಿಳಿದಿದ್ದಾರೆ.

suddiyaana