ಬ್ರೇಕ್ಫಾಸ್ಟ್ ಮೀಟಿಂಗ್ ಬೆನ್ನಲ್ಲೇ ಕೈ ನಾಯಕರ ಸೀಕ್ರೆಟ್ ಮೀಟಿಂಗ್! – ಕಾಂಗ್ರೆಸ್ನಲ್ಲಿ ಇನ್ನೂ ನಿಂತಿಲ್ವಾ ಶೀತಲ ಸಮರ?

ರಾಜ್ಯದಲ್ಲಿ ಗದ್ದುಗೆ ಗುದ್ದಾಟ ನಿಂತಂತೆ ಕಾಣುತ್ತಿಲ್ಲ. ಸಿಎಂ ಸಿದ್ಧರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಒಂದೆರಡು ದಿನಗಳಿಂದ ಒಗ್ಗಟ್ಟಿನ ಮಂತ್ರ ಜಪಿಸ್ತಿದ್ದಾರೆ. ನಾವು ಬದರ್ಸ್ ತರ ಕೆಲಸ ಮಾಡ್ತೇವೆ ಎಂದು ಹೇಳಿದ್ರು. ಇವೆಲ್ಲದ್ರ ಮಧ್ಯೆ ಈಗ ಕೈ ನಾಯಕರ ಸಿಕ್ರೇಟ್ ಮೀಟಿಂಗ್ ಮುನ್ನಲೆಗೆ ಬಂದಿದೆ. ಇದು ಭಾರಿ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: ಬೆಂಗಳೂರು ಏರ್ಪೋರ್ಟ್ನಲ್ಲಿ 70 ವಿಮಾನಗಳ ಹಾರಾಟದಲ್ಲಿ ವ್ಯತ್ಯಯ! – ಕಾರಣವೇನು ಗೊತ್ತಾ?
ಇಷ್ಟು ದಿನ ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಶೀತಲ ಸಮರ ನಡೆಯುತ್ತಿತ್ತು. ಇದ್ರ ಬೆನ್ನಲ್ಲೇ ಹೈಮಾಂಡ್ ಮಧ್ಯಪ್ರವೇಶಿಸಿ, ಉಂಟಾಗಿರುವ ಗೊಂದಲ ನಿವಾರಿಸಲು ಬ್ರೇಕ್ಫಾಸ್ಟ್ ಮೀಟಿಂಗ್ಗೆ ಸಲಹೆ ನೀಡಿತ್ತು. ಈ ಬೆನ್ನಲ್ಲೇ ಸಿಎಂ ಹಾಗೂ ಡಿಸಿಎಂ ಸುದ್ದಿಗೋಷ್ಠಿ ನಡೆಸಿ, ನಮ್ಮಿಬ್ಬರ ಮಧ್ಯೆ ಏನೂ ಇಲ್ಲ. ನಾವಿಬ್ಬರು ಎಂದೆಂದಿಗೂ ಸಹೋದರರು ಎಂಬ ಸಂದೇಶ ಸಾರುತ್ತ ಎರಡೆರಡು ಬಾರಿ ಬ್ರೇಕ್ಫಾಸ್ಟ್ ಮೀಟಿಂಗ್ ಮಾಡಿದ್ರು. ಇತ್ತ ಸಿಎಂ, ಡಿಸಿಎಂ ಗೊಂದಲ ಬಗೆಹರಿದ ಬೆನ್ನಲ್ಲೇ ಕೈ ನಾಯಕರಿಬ್ಬರು ರಹಸ್ಯ ಮಾತುಕತೆ ನಡೆಸಿರೋದು ಚರ್ಚೆಗೆ ಕಾರಣವಾಗಿದೆ. ಗೃಹ ಸಚಿವ ಪರಮೇಶ್ವರ್ ಮತ್ತು ಸತೀಶ್ ಜಾರಕಿಹೋಳಿ ಸೀಕ್ರೆಟ್ ಮೀಟಿಂಗ್ ನಡೆಸಿರುವ ವಿಚಾರ ಬೆಳಕಿಗೆ ಬಂದಿದೆ.
ಗೃಹ ಸಚಿವ ಡಾ.ಜಿ ಪರಮೇಶ್ವರ್ ಮಂಗಳವಾರ ಸತೀಶ್ ಜಾರಕಿಹೊಳಿ ನಿವಾಸಕ್ಕೆ ಭೇಟಿ ನೀಡಿದ್ದರು. ಇಪ್ಪತ್ತು ನಿಮಿಷಗಳ ಕಾಲ ಪರಸ್ಪರ ಮೀಟಿಂಗ್ ನಡೆಸಿದ್ದಾರೆ. ಇನ್ನು ಜಾರಕಿಹೋಳಿ ಭೇಟಿಗೂ ಮೊದಲು ಪರಮೇಶ್ವರ್, ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿದ್ದಾರೆ. ನಂತರ ಜಾರಕಿಹೊಳಿಯನ್ನ ಭೇಟಿಯಾಗಿರೋದು ಕುತೂಹಲ ಮೂಡಿಸಿದೆ. ಸತೀಶ್ ಜಾರಕಿಹೊಳಿ ಹಾಗೂ ಡಾ.ಜಿ ಪರಮೇಶ್ವರ್ ನಡೆ ಏನು ಅನ್ನೋದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ನೋಡಿರಿ

