‘ದಲಿತ ಸಮುದಾಯದ ನಿರೀಕ್ಷೆ ದೊಡ್ಡದಿದೆ, ತಪ್ಪಿದ್ರೆ ಸ್ವಾಭಾವಿಕ ಪ್ರತಿಕ್ರಿಯೆ’ – ಡಿಸಿಎಂ ಸ್ಥಾನ ಕೈತಪ್ಪಿದ್ದಕ್ಕೆ ಡಾ.ಜಿ ಪರಮೇಶ್ವರ್ ಗರಂ!

‘ದಲಿತ ಸಮುದಾಯದ ನಿರೀಕ್ಷೆ ದೊಡ್ಡದಿದೆ, ತಪ್ಪಿದ್ರೆ ಸ್ವಾಭಾವಿಕ ಪ್ರತಿಕ್ರಿಯೆ’ – ಡಿಸಿಎಂ ಸ್ಥಾನ ಕೈತಪ್ಪಿದ್ದಕ್ಕೆ ಡಾ.ಜಿ ಪರಮೇಶ್ವರ್ ಗರಂ!

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದ್ರೂ ಕಾಂಗ್ರೆಸ್​ಗೆ ಸಿಎಂ ಆಯ್ಕೆಯೇ ಕಗ್ಗಂಟಾಗಿತ್ತು. ಒಂದಲ್ಲ ಎರಡಲ್ಲ ಬರೋಬ್ಬರಿ 5 ದಿನಗಳ ಹಗ್ಗಜಗ್ಗಾಟದ ಬಳಿಕ ಸಿಎಂ ಕುರ್ಚಿ ಕದನಕ್ಕೆ ತೆರೆ ಬಿದ್ದಿದೆ. ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಿ ಆಯ್ಕೆಯಾಗಿದ್ದಾರೆ. ಡಿ.ಕೆ ಶಿವಕುಮಾರ್​ಗೆ ಡಿಸಿಎಂ ಪಟ್ಟ ಲಭಿಸಿದೆ. ಆದರೆ ಸಿಎಂ ಮತ್ತು ಡಿಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದ ಡಾ.ಜಿ ಪರಮೇಶ್ವರ್ ಹೈಕಮಾಂಡ್ ನಿರ್ಧಾರದ ಬಳಿಕ ಅಸಮಾಧಾನಗೊಂಡಿದ್ದಾರೆ.

ಇದನ್ನೂ ಓದಿ : ಸಿದ್ದು ವಿರುದ್ಧ ಮಾತಾಡಿದ ಸುಧಾಕರ್ ಗೆ ಪ್ರದೀಪ್ ಈಶ್ವರ್ ಟಾಂಗ್ – ಕ್ಷೇತ್ರದ ಮನೆ ಮನೆಗೂ ಭೇಟಿ!

ಸಿಎಂ ಮತ್ತು ಡಿಸಿಎಂ ಆಯ್ಕೆ ಬಗ್ಗೆ ಮಾತನಾಡಿದ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್(G Parameshwara) ‘ನನಗೆ ಡಿಸಿಎಂ ಸ್ಥಾನ ಕೊಡಲೇಬೇಕು, ನಾನು ಈ ಹಿಂದೆ ಕೂಡ ಉಪ ಮುಖ್ಯಮಂತ್ರಿಯಾಗಿದ್ದೆ. ಎಲ್ಲ ಸಮುದಾಯಗಳನ್ನು ಪರಿಗಣಿಸಿ ಡಿಸಿಎಂ ಸ್ಥಾನ ಕೊಡಬೇಕಾಗುತ್ತದೆ. ಒಬ್ಬರು ಮಾತ್ರ ಅಧಿಕಾರದಲ್ಲಿ ಇರಬೇಕೆಂಬುದು ಸೂಕ್ತವಲ್ಲ, ಎಲ್ಲರ ನಾಯಕತ್ವದಿಂದ ಕಾಂಗ್ರೆಸ್​​ ಪಕ್ಷ ಅಧಿಕಾರಕ್ಕೆ ಬಂದಿದೆ’ ಎಂದಿದ್ದಾರೆ. 51 ಕ್ಷೇತ್ರಗಳ ಪೈಕಿ 37 ಕ್ಷೇತ್ರದಲ್ಲಿ ದಲಿತರು ಗೆದ್ದಿದ್ದೇವೆ. ಬೇರೆ ಕ್ಷೇತ್ರದಲ್ಲೂ ದಲಿತ ಸಮುದಾಯದ ಮತಗಳು ಪರಿಣಾಮ ಬೀರಿವೆ. ನಾನು ಸಿಎಂ ಆಕಾಂಕ್ಷಿಯೂ ಆಗಿದ್ದೆ. ಡಿಸಿಎಂ ಸ್ಥಾನದ ಆಕಾಂಕ್ಷಿನೂ ಆಗಿದ್ದೆ. ಆದರೆ ಹೈಕಮಾಂಡ್ ಈಗ ಇಬ್ಬರ ಹೆಸರನ್ನ ಮಾತ್ರ ಘೋಷಣೆ ಮಾಡಿದೆ. ನೋಡೋಣ ಮುಂದೆ ಹೈಕಮಾಂಡ್ ಯಾವ ನಿರ್ಧಾರ ಕೈಗೊಳ್ಳುತ್ತೆ. ದಲಿತ ಸಮುದಾಯದ ನಿರೀಕ್ಷೆ ಬಹಳ ದೊಡ್ಡದಿದೆ. ಮಾಡದಿದ್ರೆ ಸಮುದಾಯದ ಸ್ವಾಭಾವಿಕ ಪ್ರತಿಕ್ರಿಯೆ ಇರುತ್ತೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ನಮ್ಮ ಬಳಿಯೂ ಶಾಸಕರು ಇದ್ದಾರೆ. ಆದರೆ ನಾವು ಶಿಸ್ತಿನ ಸಿಪಾಯಿಗಳು, ಲಾಬಿ, ಹೋರಾಟ ಮಾಡಲ್ಲ. ‌ಆದರೆ, ಅವರಿಗೆ ಅರ್ಥ ಆಗಬೇಕು. ಯಾವ ಸಮುದಾಯದ ಬೆಂಬಲ ದೊರಕಿದೆ ಎಂದು.‌ ರಾಜಸ್ಥಾನ ರೀತಿ ಆಗಲು ಬಿಡಲ್ಲ. ಒಳ್ಳೆಯ ಆಡಳಿತ ನೀಡುವ ನಿರೀಕ್ಷೆ ಜನರಲ್ಲಿದೆ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಎಲ್ಲರೂ ಕೊಡುಗೆ ನೀಡಿದ್ದಾರೆ. ಒಬ್ಬರೇ ಡಿಸಿಎಂ ಆಗಿರಬೇಕು ಎಂದು ಹೇಳಲು ಬರುವುದಿಲ್ಲ ಎಂದ ಅವರು,‌ ಡಿಕೆ ಶಿವಕುಮಾರ್ ಅವರು ನಮ್ಮ ಅಭಿಪ್ರಾಯ ಹೇಳಿರ್ತಾರೆ. ಎಲ್ಲ ಒಟ್ಟಿಗೆ ಇದ್ದೇವೆ. ಎಲ್ಲಾ ಸೇರಿ ಅಧಿಕಾರ ನಡೆಸ್ತೇವೆ ಎಂದರು

suddiyaana