ಘಾಟ್​ನಲ್ಲಿ ಕಮರಿಗೆ ಬಿದ್ದ ಬಸ್​! – ಮೂವರು ಸಾವು.. 38 ಪ್ರಯಾಣಿಕರಿಗೆ ಗಾಯ

ಘಾಟ್​ನಲ್ಲಿ ಕಮರಿಗೆ ಬಿದ್ದ ಬಸ್​! – ಮೂವರು ಸಾವು.. 38 ಪ್ರಯಾಣಿಕರಿಗೆ ಗಾಯ

ಮಧ್ಯಪ್ರದೇಶದ ಇಂದೋರ್‌ನಲ್ಲಿ ಭೀಕರ ಅವಘಡವೊಂದು ಸಂಭವಿಸಿದೆ. 40 ಕ್ಕೂ ಪ್ರಯಾಣಿಕರಿದ್ದ ಬಸ್ಸೊಂದು ತಡ ರಾತ್ರಿ ಕಮರಿಗೆ ಬಿದ್ದಿದ್ದು, ಮೂವರು ಮೃತಪಟ್ಟಿದ್ದಾರೆ. 38 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಇದನ್ನೂ ಓದಿ: ಕಳಪೆ ಫಾರ್ಮ್​ನಿಂದ ಬಳಲುತ್ತಿರುವ ಸೂರ್ಯಕುಮಾರ್! – ಗಂಡನ ಯಶಸ್ಸಿಗಾಗಿ ಕಾಪು ಮಾರಿಗುಡಿಗೆ ಭೇಟಿ ನೀಡಿದ ದೇವಿಶಾ!

ಬಸ್‌ ಸೋಮವಾರ ರಾತ್ರಿ ಓಂಕಾರೇಶ್ವರದಿಂದ ಇಂದೋರ್​ಗೆ ಹೊರಟಿತ್ತು. ಭೇರು ಘಾಟ್ ಬಳಿ ಬಸ್ ಬರುತ್ತಿದ್ದಂತೆ ಕಮರಿಗೆ ಉರುಳಿ ಬಿದ್ದಿದೆ. ಹೀಗಾಗಿ ಬಸ್​ನಲ್ಲಿದ್ದವರ ಪೈಕಿ ಸ್ಥಳದಲ್ಲೇ ಇಬ್ಬರು ಉಸಿರು ಚೆಲ್ಲಿದ್ದಾರೆ. ಒಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆದಲ್ಲಿ ಕೊನೆಯುಸಿರೆಳೆದಿದ್ದಾರೆ. ಘಟನೆಯಲ್ಲಿ 38 ಜನರು ಗಂಭೀರವಾಗಿ ಗಾಯಗೊಂಡಿದ್ದು ಇದರಲ್ಲಿ ಮೂವರು ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.

ಸದ್ಯ ಗಾಯಾಳುಗಳನ್ನು ಇಂದೋರ್​ನ ಎಂವೈ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೂವರು ಪ್ರಯಾಣಿಕರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಘಟನೆ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ್ದ ಅಗ್ನಿ ಶಾಮಕ ಸಿಬ್ಬಂದಿ, ಪೊಲೀಸರು ರಕ್ಷಣೆ ಕಾರ್ಯದಲ್ಲಿ ತೊಡಗಿ ಹಲವರನ್ನು ಕಾಪಾಡಿದ್ದಾರೆ. ಆ್ಯಂಬುಲೆನ್ಸ್​ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ .

ಇನ್ನು ಘಟನೆಯಲ್ಲಿ ಬದುಕುಳಿದ ನವಲ್ ಸಿಂಗ್ ಚೌಹಾಣ್ ಎನ್ನುವರು ಮಾತನಾಡಿ, ಬಸ್​ ಇಂದೋರ್​ಗೆ ಹೋಗುವಾಗ ಮಾರ್ಗಮಧ್ಯೆ ಡಾಬಾದಲ್ಲಿ ನಿಲ್ಲಿಸಿ ಎಲ್ಲರೂ ಊಟ ಮಾಡಿದ್ದೇವು. ಮತ್ತೆ ಬಸ್ ಹೊರಡಲು ಪ್ರಾರಂಭವಾಗಿ ಸ್ವಲ್ಪ ದೂರ ಹೋಗಿತ್ತು ಅಷ್ಟೇ, ಆದರೆ ಅಷ್ಟರಲ್ಲೇ ಆಳವಾದ ಕಮರಿಗೆ ಬಸ್​ ಬಿದ್ದಿತು ಎಂದಿದ್ದಾರೆ. ಅಲ್ಲದೇ ಘಟನೆಯಲ್ಲಿ ಬದುಕುಳಿದ ಇಲ್ಲೊಬ್ಬರು ಮಾತನಾಡಿ, ಅನಿತಾ ಬಾಯಿ ಎನ್ನುವ ನನ್ನ ಅತ್ತೆಯನ್ನು ಕಳೆದುಕೊಂಡೆ ಎಂದು ಕಣ್ಣೀರು ಹಾಕಿದ್ದಾರೆ.

Shwetha M