ಐಸಿಯು ಬೆಡ್ ​ನಲ್ಲಿ ಅಮ್ಮ.. ಬಣ್ಣ ಬಳಿದು ಮಗಳ ಸಂಭ್ರಮ – ಜನ್ಮದಾತೆ ಜೊತೆ ಪುತ್ರಿಯ ಹೋಳಿಯಾಟ!

ಐಸಿಯು ಬೆಡ್ ​ನಲ್ಲಿ ಅಮ್ಮ.. ಬಣ್ಣ ಬಳಿದು ಮಗಳ ಸಂಭ್ರಮ – ಜನ್ಮದಾತೆ ಜೊತೆ ಪುತ್ರಿಯ ಹೋಳಿಯಾಟ!

ಬಣ್ಣಗಳಂತೆ ಬದುಕು ಕೂಡ ರಂಗು ರಂಗಿನಿಂದ ಕೂಡಿರಲಿ ಅಂತಾ ಜನ್ರೆಲ್ಲಾ ಹೋಳಿಯಾಟದಲ್ಲಿ ಮಿಂದೆದ್ದಿದ್ದಾರೆ. ಪರಸ್ಪರ ಬಣ್ಣಗಳನ್ನ ಎರಚಿಕೊಂಡು ಸಂಭ್ರಮಿಸಿದ್ದಾರೆ. ಆದ್ರೆ ಈ ತಾಯಿ ಮಗಳ ಹೋಳಿ ಸೆಲೆಬ್ರೇಷನ್ ತುಂಬಾ ಭಾವನಾತ್ಮಕವಾಗಿದೆ. ಕರುಳುಬಳ್ಳಿಯ ಸಂಬಂಧದ ಕನ್ನಡಿಯಂತಿದೆ.

ಇದನ್ನೂ ಓದಿ : ತೊಟ್ಟಿಲು ತೂಗುವಳು.. ಜಗವನ್ನೂ ಆಳುವಳು – ವಿಶ್ವ ಮಹಿಳಾ ದಿನ ಹುಟ್ಟಿಕೊಂಡಿದ್ದೇಗೆ ಗೊತ್ತಾ..?

ತಾಯಿ ಮಕ್ಕಳ ಬಾಂಧವ್ಯವೇ ಅಂಥಾದ್ದು. ಪದಗಳಿಗೆ ನಿಲುಕದ ಬಂಧವದು. ನವಮಾಸ ಗರ್ಭದಲ್ಲಿರಿಸಿಕೊಂಡು ಕಂದನಿಗೆ ಜನ್ಮ ನೀಡುವ ತಾಯಿ ತಾನು ಹಸಿದಿದ್ದರೂ ಮಕ್ಕಳ ಹೊಟ್ಟೆ ತುಂಬಿಸುತ್ತಾಳೆ. ಹೀಗೆ ಅಮ್ಮನ ನೆರಳಲ್ಲೇ ಬೆಳೆದ ಮಕ್ಕಳು ದೊಡ್ಡವರಾದ ಬಳಿಕ ಹೆತ್ತವರನ್ನ ಅಷ್ಟೇ ಪ್ರೀತಿಯಿಂದ ನೋಡಿಕೊಳ್ಳಬೇಕಾಗುತ್ತೆ.

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಆಸ್ಪತ್ರೆ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದೆ. ಹೋಳಿ ಹಬ್ಬವನ್ನು ಆಚರಿಸಿದ್ದು, ಈ ದೃಶ್ಯವೇ ಭಾವನಾತ್ಮಕವಾಗಿದೆ.

ಅನಾರೋಗ್ಯದಿಂದ ಐಸಿಯುದಲ್ಲಿದ್ದ ಅಮ್ಮನೊಂದಿಗೆ ಹಾಡು ಹೇಳಿ ಹೋಳಿ ಆಚರಿಸಿದ್ದಾರೆ. ವೈದ್ಯೆಯಾಗಿರುವ ಮಗಳು ತುರ್ತು ನಿಗಾ ಘಟಕದಲ್ಲಿದ್ದ ಅಮ್ಮನಿಗೆ ಬಣ್ಣ ಹಚ್ಚಿ ಹೋಳಿ ಸಂಭ್ರಮಿಸಿದ್ದಾಳೆ.

ಅಮ್ಮನ ಮುಂದೆ ಹಾಡು ಹೇಳುವ ಮೂಲಕ ಮಗಳು ಅಮ್ಮನ ಮೊಗದಲ್ಲಿ ಮಂದಹಾಸ ತರಿಸಿದ್ದಾಳೆ. ತಾಯಿ ಮಗಳ ಅಪರೂಪದ ಕ್ಷಣಗಳ ಫೋಟೋಗಳು ವೈರಲ್ ಆಗಿವೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಈ ಘಟನೆ ನಡೆದಿದೆ. ಪೆಥಾಲಜಿಸ್ಟ್​ ಡಾ.‌ಸುಮನ್ ದಿನೇಶ ಹೆಗಡೆ ತನ್ನ ಅಮ್ಮನಿಗಾಗಿ ಹಾಡಿ ಹೋಳಿ ಹಬ್ಬವನ್ನ ಸಂಭ್ರಮಿಸಿದ್ದಾರೆ. ಮಹಾಲಕ್ಷ್ಮೀ ನರ್ಸಿಂಗ್ ಹೋಮ್​ನಲ್ಲಿ ಈ ಘಟನೆ ನಡೆದಿದೆ.

suddiyaana