ಬಂಗಾಳ ರಾಜಕೀಯದಲ್ಲಿ ಬಿರುಗಾಳಿ – ತಾನು ಕಟ್ಟಿದ ಪಕ್ಷದಿಂದಲೇ ಮಮತಾ ಬ್ಯಾನರ್ಜಿ ಔಟ್

ಬಂಗಾಳ ರಾಜಕೀಯದಲ್ಲಿ ಬಿರುಗಾಳಿ – ತಾನು ಕಟ್ಟಿದ ಪಕ್ಷದಿಂದಲೇ ಮಮತಾ  ಬ್ಯಾನರ್ಜಿ ಔಟ್

ಬಂಗಾಳ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಆಗುತ್ತಿದ್ದು,  ತಾನೇ ಕಟ್ಟಿ ಬೆಳಸಿದ ಪಕ್ಷದಿಂದ ಮಮತಾ ಬ್ಯಾನರ್ಜಿಯನ್ನ ಹೊರಹಾಕಲಾಗಿದೆ. ಇತ್ತೀಚಿಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲಿನಿಂದ ಕಂಗೆಟ್ಟಿರುವ ತೃಣಮೂಲ ಕಾಂಗ್ರೆಸ್ ಈಗ ಇಬ್ಭಾಗವಾಗುತ್ತಿದ್ದು, ಪಕ್ಷದ ವರಿಷ್ಠೆ ಮಮತಾ ಬ್ಯಾನರ್ಜಿ ಅವರನ್ನೇ ಪಕ್ಷದಿಂದ ಹೊರ ಹಾಕಲಾಗಿದೆ.

ಇದನ್ನೂ ಓದಿ: ನಾಯಕತ್ವದ ವಿರುದ್ಧ ಅಸಮಾಧಾನ ಸ್ಫೋಟ – ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ರಾಜೀನಾಮೆ

ಉಲುಬೇರಿಯಾ ಪುರ್ಬಾ ಶಾಸಕ ರಿತಬ್ರತ ಬ್ಯಾನರ್ಜಿ ಅವರು ತಮ್ಮದೇ ನಿಜವಾದ ತೃಣಮೂಲ ಕಾಂಗ್ರೆಸ್  ಎಂದು ಹೇಳಿದ್ದು, ಪಕ್ಷದ ಸಂಸ್ಥಾಪಕಿ ಮಮತಾ ಅವರನ್ನು ಅಧ್ಯಕ್ಷ ಸ್ಥಾನದಿಂದಲೇ ವಜಾಗೊಳಿಸಿದ್ದಾರೆ.ಮಮತಾ ಬ್ಯಾನರ್ಜಿ ಅವರು ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ರಿತಬ್ರತ ಬ್ಯಾನರ್ಜಿ ಅವರನ್ನು ಪಕ್ಷದಿಂದ ಹೊರಹಾಕಿದ ಕೆಲವು ದಿನಗಳ ನಂತರ ಈಗ ದೀದಿಯನ್ನೇ ಉಚ್ಚಾಟಿಸಲಾಗಿದೆ. ನಿಜವಾದ ತೃಣಮೂಲ ಕಾಂಗ್ರೆಸ್” ಪಕ್ಷ ಹೊಸ ಸಮಿತಿಯನ್ನು ರಚಿಸಿದ್ದು, ಅಭಿಷೇಕ್ ಬ್ಯಾನರ್ಜಿ ಅವರನ್ನು ಪಕ್ಷದಿಂದ ಅಮಾನತುಗೊಳಿಸುವ ಮೂಲಕ ಶಿಸ್ತು ಕ್ರಮ ಕೈಗೊಳ್ಳಲಾಗಿದೆ.

ಈ ಬಗ್ಗೆ ನಿನ್ನೆ ಕೊಲ್ಕತ್ತಾದಲ್ಲಿ ನಡೆದ ಸಭೆಯಲ್ಲಿ ಮಮತಾ ಅವರನ್ನು ಉಚ್ಚಾಟಿಸಿ, ಅವರ ಜಾಗಕ್ಕೆ ಹೌರಾ ಮಧ್ಯಮ ಕ್ಷೇತ್ರದ ಶಾಸಕ ಅರೂಪ್ ರಾಯ್ ಅವರನ್ನು ತೃಣಮೂಲ ಕಾಂಗ್ರೆಸ್‌ನ ನೂತನ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

Kishor KV

Leave a Reply

Your email address will not be published. Required fields are marked *