ನಾಳೆಯಿಂದ ರಾಜ್ಯಾದ್ಯಂತ SIR ಆರಂಭ – ವೋಟರ್‌ ಐಡಿಯಿಂದ OUT, ಗ್ಯಾರಂಟಿ ಕಟ್.. ನೀವು ಏನು ಮಾಡಬೇಕು ಗೊತ್ತಾ?

ನಾಳೆಯಿಂದ ರಾಜ್ಯಾದ್ಯಂತ SIR ಆರಂಭ –  ವೋಟರ್‌ ಐಡಿಯಿಂದ OUT, ಗ್ಯಾರಂಟಿ ಕಟ್.. ನೀವು ಏನು ಮಾಡಬೇಕು ಗೊತ್ತಾ?

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ನಾಳೆಯಿಂದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ  ಆರಂಭವಾಗಲಿದೆ. ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ. ಹೊಸ ಸೇರ್ಪಡೆ ಮಾಡಿ, ನಿಧನರಾದವರು, ಮನೆ ಖಾಲಿ ಮಾಡಿದವರ ಹೆಸರನ್ನ ಮತಪಟ್ಟಿಯಿಂದ ಕೈಬಿಟ್ಟು ಪರಿಷ್ಕರಣೆ ಮಾಡಲಾಗುತ್ತೆ. ಎರಡೆರೆಡು ಕಡೆ ಹೆಸರು ಇದ್ದಲ್ಲಿ ಒಂದು ಕಡೆ ಮಾತ್ರ ಉಳಿಸಲಾಗುತ್ತೆ. ಇನ್ನು ವೋಟರ್ ಲಿಸ್ಟ್ ನಲ್ಲಿ ಹೆಸರು ಕೈ ಬಿಟ್ಟರೆ ಗ್ಯಾರಂಟಿ ಯೋಜನೆಯಿಂದ ಹೊರಗುಳಿಯಲಿದ್ದಾರೆ.

ಗುರುತಿನ ಚೀಟಿಯಲ್ಲಿ ಏನಾದ್ರೂ ದೋಷಗಳು ಇದ್ದಲ್ಲಿ ತಿದ್ದುಪಡಿ ಮಾಡಿಸಿಕೊಳ್ಳಲು ಕೂಡ ಅವಕಾಶವಿದೆ. ಮನೆಗೆ ಬರುವ ಬಿಎಲ್‌ ಒಗಳು ಎರಡು ಅರ್ಜಿಗಳನ್ನ ನೀಡುತ್ತಾರೆ. ಮತದಾರರು ಎರಡನ್ನ ಭರ್ತಿ ಮಾಡಿ ಸಹಿ ಮಾಡ್ಬೇಕು. ಬಿಎಲ್​ಒ ಕೂಡ ಆ ಎರಡು ಫಾರ್ಮ್​​ಗಳ ಮೇಲೆ ಸಹಿ ಮಾಡುತ್ತಾರೆ. ಒಂದನ್ನು ಸ್ವೀಕೃತಿ ಪ್ರತಿಯಾಗಿ ಮತದಾರರಿಗೆ ಮರಳಿಸಿದ್ರೆ, ಇನ್ನೊಂದು ಪ್ರತಿ ಅಧಿಕಾರಿಗಳ ಬಳಿ ಇರಲಿದೆ.

ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಆಗುತ್ತೆ ಹುಷಾರ್ 

ಈ ಪರಿಷ್ಕರಣಾ ಅವಧಿಯಲ್ಲಿ ಬಿಎಲ್‌ಒಗಳು ಮನೆಗೆ ಭೇಟಿ ನೀಡಿದಾಗ ಯಾರು ಇರಲ್ಲ ಅಥವಾ ಇತ್ತೀಚೆಗೆ ಮನೆ ಬದಲಾಯಿಸಿ ಬೇರೆಡೆ ಶಿಫ್ಟ್​ ಆಗಿದ್ದರೆ ಅಂಥವರ ಹೆಸರುಗಳನ್ನ ಮತದಾರರ ಪಟ್ಟಿಯಿಂದ ನೇರವಾಗಿ ಡಿಲೀಟ್ ಮಾಡುವ ಸಾಧ್ಯತೆ ಇದೆ. ಹೀಗಾಗಿ ಸಾರ್ವಜನಿಕರು ಈ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕಿದೆ.

ಗ್ಯಾರಂಟಿಗೆ ಬೀಳುತ್ತೆ ಕತ್ತರಿ

ಈ ಬಗ್ಗೆ ಮಾತಾಡಿದ ಡಿಕೆ ಶಿವಕುಮಾರ್ ಅವ್ರು, ಜೂನ್ 30ರಿಂದ ರಾಜ್ಯದಲ್ಲಿ ಎಸ್‌ಐಆ‌ರ್ ಪ್ರಾರಂಭ ಆಗುತ್ತಿದೆ. ಕಾಂಗ್ರೆಸ್ ಬೆಂಬಲಿತ ಮತಗಳನ್ನು ಡಿಲೀಟ್ ಮಾಡಿಸುವ ಪ್ರಯತ್ನ ನಡೆಯುವ ಸಾಧ್ಯತೆ ಇದೆ. ಈಗಾಗಲೇ ಬೇರೆ ಬೇರೆ ರಾಜ್ಯಗಳಲ್ಲಿ ಇಂತಹದ್ದು ಘಟನೆ ಸಂಭವಿಸಿದೆ. ಇದರ ಬಗ್ಗೆ ಪಕ್ಷದ ನಾಯಕರು ಮತ್ತು ಬೂತ್ ಮಟ್ಟದ ಏಜೆಂಟರು ಎಚ್ಚರದಿಂದ ಇದ್ದು ಅರ್ಹ ಮತದಾರರ ಹೆಸರು ಮತದಾರರ ಪಟ್ಟಿಯಿಂದ ರದ್ದಾಗದಂತೆ ಎಚ್ಚರ ವಹಿಸಬೇಕು . ವೋಟರ್ ಲಿಸ್ಟ್​​ನಿಂದ ಹೆಸರು ಕೈ ಬಿಟ್ಟರೆ ಗ್ಯಾರಂಟಿ ತಪ್ಪುವ ಸಾಧ್ಯತೆ ಇದೆ ಎಂದು ಡಿಕೆ ಶಿವಕುಮಾರ್ ಎಚ್ಚರಿಸಿದ್ದಾರೆ.

 

ಹಾಗಿದ್ರೆ ಇದು ಹೇಗೆ ನಡೆಯುತ್ತೆ ? ನೀವು ಏನು ಮಾಡಬೇಕು ಗೊತ್ತಾ?  

ಎರಡು ನಿಗದಿತ ಫಾರಂ ಕೊಡ್ತಾರೆ

*ಹೊಸ ಹೆಸರುಗಳ ಸೇರ್ಪಡೆ

*ತಿದ್ದುಪಡಿ ಮಾಡುವುದಿದ್ದರೆ ಮಾಡಲು ಅವಕಾಶ

*ಅಧಿಕಾರಿಗಳ ಜೊತೆ ರಾಜಕೀಯ ಪಕ್ಷಗಳ ನೊಂದಾಯಿತ ಏಜೆಂಟರೂ ಆಗಮಿಸುತ್ತಾರೆ

*ಅಧಿಕಾರಿಗಳು ತಮ್ಮ ಬಳಿಯ ಪ್ರತಿಯನ್ನು

ಸ್ಕ್ಯಾನ್ ಮಾಡಿ

*ಅದನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸುತ್ತಾರೆ

*ಎಸ್‌ಐಆ‌ರ್ ಪ್ರಕ್ರಿಯೆ ಪೂರ್ಣ ಗೊಂಡ ಬಳಿಕ ಚುನಾವಣಾ ಆಯೋಗದಿಂದ ಮತದಾರರ ಕರಡು ಪಟ್ಟಿ ಬಿಡುಗಡೆ

*ಈ ವೇಳೆ ಹೆಸರುಗಳು ಬಿಟ್ಟು ಹೋಗಿದ್ದರೆ ನಿಮ್ಮ ಬಳಿ ಇರುವ ದಾಖಲೆ ತೋರಿಸಿ

*ಮತಪಟ್ಟಿಗೆ ಮರಳಿ ಹೆಸರು ಸೇರಿಸಲು ಅವಕಾಶ

Kishor KV

Leave a Reply

Your email address will not be published. Required fields are marked *