ಇವತ್ತು ಮನೆ ಮನೆ ಮತಶಿಕಾರಿ – ಅಭ್ಯರ್ಥಿಗಳ ಕೊನೇ ಕ್ಷಣದ ಕಸರತ್ತು!

ಇವತ್ತು ಮನೆ ಮನೆ ಮತಶಿಕಾರಿ – ಅಭ್ಯರ್ಥಿಗಳ ಕೊನೇ ಕ್ಷಣದ ಕಸರತ್ತು!

ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಕೌಂಟ್ ಡೌನ್ ಶುರುವಾಗಿದೆ. ಪಕ್ಷಗಳ ಬಹಿರಂಗ ಪ್ರಚಾರಕ್ಕೆ ಮೇ 8ರಂದು ತೆರೆ ಬಿದ್ದಿದ್ದು ಇವತ್ತು ಮನೆ ಮನೆ ಪ್ರಚಾರ ಮಾತ್ರ ನಡೆಯಲಿದೆ. ಕ್ಷೇತ್ರದಲ್ಲಿ ಅಭ್ಯರ್ಥಿ ಬಿಟ್ಟು ಬೇರೆ ನಾಯಕರು ಮತಯಾಚನೆ ಮಾಡುವಂತಿಲ್ಲ. ಆದರೆ ಮನೆ ಮನೆಗೆ ತೆರಳಿ ಅಭ್ಯರ್ಥಿ ಸೇರಿ 6 ಜನರು ಮಾತ್ರ ಪ್ರಚಾರ ಮಾಡಲು ಅವಕಾಶವಿದೆ.

ಇಷ್ಟು ದಿನದ ಅಬ್ಬರದ ಪ್ರಚಾರವೇ ಒಂದು ಲೆಕ್ಕವಾದ್ರೆ ಇವತ್ತು ನಡೆಯುವ ಮನೆ ಮನೆ ಮತಯಾತ್ರೆ ಮತ್ತೊಂದು ಲೆಕ್ಕ. ಕೊನೇ ಕ್ಷಣದಲ್ಲಿ ಮಾಡುವ ತಂತ್ರಗಾರಿಕೆ ಸೋಲು ಗೆಲುವಿನ ಲೆಕ್ಕಾಚಾರವನ್ನೇ ಬದಲಾಯಿಸಲಿದೆ. ಹೀಗಾಗಿ ಅಭ್ಯರ್ಥಿಗಳು ಹಾಗೂ ಬೆಂಬಲಿಗರು ಇವತ್ತು ಡೋರ್ ಟು ಡೋರ್ ತೆರಳಿ ಮತಯಾಚನೆ ನಡೆಸಲಿದ್ದಾರೆ. ಕ್ಷೇತ್ರದಲ್ಲಿ ಅಭ್ಯರ್ಥಿ ಬಿಟ್ಟು ಬೇರೆ ನಾಯಕರು ಮತಯಾಚನೆ ಮಾಡುವಂತಿಲ್ಲ. ಆದರೆ ಮನೆ ಮನೆಗೆ ತೆರಳಿ ಅಭ್ಯರ್ಥಿ ಸೇರಿ 6 ಜನರು ಮಾತ್ರ ಪ್ರಚಾರ ಮಾಡಲು ಅವಕಾಶವಿದೆ.

ಇದನ್ನೂ ಓದಿ : ಬಿಜೆಪಿ ವಿರುದ್ಧ ‘ಕೈ’ ಹೋಮಹವನ – ‘ಜೈ ಹನುಮಾನ್ ಕಾಂಗ್ರೆಸ್ ನಿರ್ನಾಮ್’ ಎಂದು ಕೇಸರಿ ಅಭಿಯಾನ!

ಬಹಿರಂಗ ಪ್ರಚಾರ ಮುಗಿದ ಬಳಿಕ ಶೂನ್ಯ ಅವಧಿ ಎಂದು ಚುನಾವಣಾ ಆಯೋಗವು ಪರಿಗಣಿಸುತ್ತದೆ. ಈ ಅವಧಿಯಲ್ಲಿ ಅಭ್ಯರ್ಥಿಗಳನ್ನು ಹೊರತುಪಡಿಸಿ ಇನ್ನುಳಿದ ಯಾವುದೇ ವ್ಯಕ್ತಿಗಳು ಕ್ಷೇತ್ರದಲ್ಲಿ ಉಳಿಯುವಂತಿಲ್ಲ. ಇವತ್ತು ಅಭ್ಯರ್ಥಿಗಳು ಮನೆ ಮನೆ ಪ್ರಚಾರ ಕೈಗೊಂಡು ಸಂಜೆ 6 ಗಂಟೆ ಒಳಗೆ ಮುಗಿಸಬೇಕು.

ಚುನಾವಣೆ ಹಿನ್ನೆಲೆ ಮೇ8ರ ಸಂಜೆ 6 ಗಂಟೆಯಿಂದ ಮೂರು ದಿನ ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ. ಮೇ 8 , 9 , 10 ರಂದು ಡ್ರೈ ಡೇ ಆಚಾರಿಸುವಂತೆ ಮದ್ಯ ಮಾರಾಟದ ಅಂಗಡಿ ಮಾಲೀಕರಿಗೆ ಚುನಾವಣಾ ಆಯೋಗ ಸೂಚನೆ ನೀಡಿದೆ. ಅಲ್ಲದೇ ಮತ ಎಣಿಕೆಗೂ ಸಮಸ್ಯೆಯಾಗದಂತೆ ಮೇ 13 ರ ಬೆಳಗ್ಗೆ 6 ಗಂಟೆಯಿಂದ ಮೇ.14 ರ ಬೆಳ್ಳಗ್ಗೆ 6 ಗಂಟೆವರೆಗೂ ಮದ್ಯ ನಿರ್ಬಂಧಿಸಲಾಗಿದೆ.

224 ವಿಧಾನಸಭಾ ಕ್ಷೇತ್ರಗಳಲ್ಲಿ ಜಿದ್ದಾಜಿದ್ದಿನ ಪೈಪೋಟಿ ಇದೆ. ಮೂರು ಪಕ್ಷಗಳು ಈಗಾಗಲೇ ಅಬ್ಬರದ ಪ್ರಚಾರ ನಡೆಸಿವೆ. ಮೇ 10ರಂದು ಮತದಾನ ನಡೆಯಲಿದೆ. ಹಾಗೇ ಮೇ 13ರಂದು ಫಲಿತಾಂಶ ಹೊರಬೀಳಲಿದೆ.

suddiyaana