ಮಾತು-ಮಾತಿಗೂ ಮಕ್ಕಳಿಗೆ ಹೊಡೆಯೋಕು ಮೊದ್ಲು ಈ ವಿಚಾರ ತಿಳಿಯಲೇ ಬೇಕು!
ಮಕ್ಕಳು ಹೇಳಿದ ಮಾತು ಕೇಳಲ್ಲ. ಎದುರುತ್ತರ ನೀಡಿದ್ರೆ, ಸುಳ್ಳು ಹೇಳಿದ್ರೆ, ತಪ್ಪೇನಾದರೂ ಮಾಡಿದ್ರೆ ಮಕ್ಕಳಿಗೆ ಬುದ್ಧಿ ಕಲಿಸಲು ಪೋಷಕರು ಅನುಸರಿಸುವ ಮಾರ್ಗವೆಂದರೆ ರಪ್ಪೆಂದು ಬಾರಿಸೋದು. ಮಕ್ಕಳಿಗೆ ಪದೇ ಪದೆ ಬಾರಿಸುತ್ತಿದ್ದರೆ ಅವರು ಸರಿಹೋಗುತ್ತಾರೆ ಅನ್ನೋದು ಅನೇಕ ಪೋಷಕರ ವಾದ. ಆದ್ರೆ ಮಾತು ಮಾತಿಗೂ ಮಕ್ಕಳಿಗೆ ಹೊಡೆದು ಬುದ್ದಿವಾದ ಹೇಳುವುದು ಒಳ್ಳೆಯದಲ್ಲ..
ರಪ್ಪೆಂದು ಬಾರಿಸಿದ ತಕ್ಷಣ ಮಕ್ಕಳಿಗೆ ಬುದ್ಧಿ ಬರುತ್ತದೆ ಎಂದು ನೀವೆಂದುಕೊಂಡಿದ್ದರೆ ಅದು ತಪ್ಪು ಕಲ್ಪನೆ. ಇದರಿಂದಾಗಿ ಮಕ್ಕಳ ಗಂಭೀರ ಪರಿಣಾಮ ಬೀಳುತ್ತೆ. ಮಕ್ಕಳ ಮಾನಸಿಕ ಬೆಳವಣಿಗೆ ಮೇಲೆ ವ್ಯತಿರಿಕ್ತ ಪರಿಣಾಮ ಬೀಳುತ್ತದೆ. ಬಾರಿಸಿದಷ್ಟೂ ಮಕ್ಕಳು ಮಕ್ಕಳ ವರ್ತನೆ ಮತ್ತಷ್ಟು ಕೆಡುತ್ತದೆ ಹೊರತು ಒಳ್ಳೆಯದಾಗುವುದಿಲ್ಲ. ಮಕ್ಕಳು ಸರಿ ಹೋಗ್ತಾರೆ ಅಂತಾ ಹೊಡೆದ್ರೆ ಮತ್ತಷ್ಟು ತಪ್ಪು ದಾರಿ ತುಳಿತಾರೆ. ಕೆಟ್ಟ ಹಠಮಾರಿಗಳಾಗುತ್ತಾರೆ. ಹೊಡೆಯುತ್ತಾರೆ ಎಂಬ ಕಾರಣಕ್ಕೆ ಸುಳ್ಳಿನ ಕೋಟೆಯನ್ನೇ ಕಟ್ಟುತ್ತಾರೆ.
ಇದನ್ನೂ ಓದಿ: ನೀವು ಹೆಚ್ಚು ಹೊತ್ತು ಸ್ಮಾರ್ಟ್ ಫೋನ್ ಯೂಸ್ ಮಾಡ್ತೀರಾ? – ಸದಾ ಮೊಬೈಲ್ ಬಳಸ್ತಾನೇ ಇದ್ದರೆ ಈ ಕಾಯಿಲೆ ಒಕ್ಕರಿಸೋದು ಗ್ಯಾರಂಟಿ!
ಹಾಗಾದರೆ ಮಕ್ಕಳನ್ನು ಸರಿದಾರಿಗೆ ಹೇಗೆ ತರೋದು ಅಂತಾ ನಿಮ್ಮಲ್ಲಿ ಪ್ರಶ್ನೆ ಮೂಡೋದು ಸಹಜ. ಮಕ್ಕಳು ತಪ್ಪು ಮಾಡಿದಾಗ ಕೋಪ ಬರೋದು ಸಹಜ, ಆದರೆ ನಿಮ್ಮ ಕೋಪವನ್ನು ಕಂಟ್ರೋಲ್ ಮಾಡಿ ಅವರ ತಪ್ಪುಗಳನ್ನು ಮನವರಿಕೆ ಮಾಡಿ. ಹಾಗಂತ ಆಗಾಗ ಸಲಹೆ ಕೊಡಬೇಡಿ, ಅದೂ ಅವರಿಗೆ ಕಿರಿಕಿರಿ ಅನಿಸಬಹುದು. ಹೇಳಬೇಕಾದ ವಿಷಯವನ್ನು ಕಟ್ಟುನಿಟ್ಟಾಗಿ ದೃಢವಾಗಿ ಹೇಳಿ. ನಿಮ್ಮ ಧ್ವನಿಯಲ್ಲೇ ಅರ್ಥ ಮಾಡಿಕೊಳ್ತಾರೆ. ಇನ್ನು ಮಕ್ಕಳಿಗೆ ಬೇರೆಯವರ ಎದುರಿನಲ್ಲಂತೂ ಹೊಡೆಯಲೇಬೇಡಿ. ಅವರಿಗೆ ಅದು ಅವಮಾನವಾದಂತೆ ಅನಿಸುತ್ತೆ. ಎಲ್ಲವನ್ನೂ ನಿಮ್ಮ ದೃಷ್ಟಿಕೋನದಿಂದಲೇ ನೋಡುವ ಬದಲು ಮಗುವಿನ ಸ್ಥಾನದಲ್ಲಿ ನಿಂತು ಒಮ್ಮೆ ಯೋಚಿಸಿ. ಹೊಡೆದು ಬುದ್ಧಿವೇಳುವ ಬದಲು ಮಕ್ಕಳಿಗೆ ಪುಸಲಾಯಿಸಿ ತಿಳಿ ಹೇಳಿದರೆ ಮಕ್ಕಳು ಬೇಗನೆ ಅರ್ಥ ಮಾಡಿಕೊಳ್ತಾರೆ.