ನೀವು ಫ್ರಿಡ್ಜ್ ನಲ್ಲಿ ಎರಡು ದಿನಕ್ಕಿಂತ ಹೆಚ್ಚು ದಿನ ಇಟ್ಟ ಆಹಾರವನ್ನು ಸೇವಿಸ್ತಿದ್ದೀರಾ?

ಇವತ್ತಿನ ಬ್ಯುಸಿ ಲೈಫ್‍ನಲ್ಲಿ ನಮಗೆ ಫ್ರೆಶ್ ಆಗಿ ಅಡುಗೆ ಮಾಡಿಕೊಳ್ಳಲು ಕೂಡ ಪುರುಸೊತ್ತಿಲ್ಲ. ಮೊದಲಂತೆ ಈಗ ಹೆಣ್ಣು ಮಕ್ಕಳು ಮನೆಯಲ್ಲಿಯೇ ಕುಳಿತಿರುವುದಿಲ್ಲ. ಅವರು ಕೂಡ ಕೆಲಸಕ್ಕೆ ಹೊರಗಡೆ ಹೋಗುವುದರಿಂದ ಮನೆಯಲ್ಲಿ ಆಹಾರ ತಯಾರಿಸುವುದು ಬಹಳ ಕಷ್ಟಕರವಾದ ಕೆಲಸವಾಗಿ ಬಿಟ್ಟಿದೆ. ಇದಕ್ಕಾಗಿ ನಾವು ಸಹಜವಾಗಿಯೇ ಮೈಕ್ರೋವೇವ್ ಅಥವಾ ರೆಫ್ರಿಜರೇಟರ್ ನಂತಹ ಸಾಧನಗಳನ್ನು ಬಳಸುತ್ತೇವೆ ಹಾಗಾದರೆ ಫ್ರಿಡ್ಜ್ ನಲ್ಲಿ ಆಹಾರವನ್ನು ಎಷ್ಟು ಸಮಯ ಇಟ್ಟುಕೊಂಡು ತಿಂದರೆ ಒಳ್ಳೆಯದು ಅಥವಾ ಹೆಚ್ಚು ಸಮಯ ಇಟ್ಟುಕೊಂಡು ತಿಂದರೆ ಏನಾಗುತ್ತೆ ಎಂಬ ಮಾಹಿತಿ ಇಲ್ಲಿದೆ..
ಸಾಮಾನ್ಯವಾಗಿ ಅನ್ನದಿಂದ ಹಿಡಿದು ತಿಂಡಿ ತರಕಾರಿ, ದವಸ ಧಾನ್ಯಗಳು ಎಲ್ಲವನ್ನೂ ಇಡ್ತೆವೆ. ಇದನ್ನ ತುಂಬಾ ದಿನಗಳವರೆಗೆ ಫಿಜ್ ನಲ್ಲಿ ಇಟ್ಟುಕೊಂಡು ಸೇವನೆ ಮಾಡುತ್ತೇವೆ. ಹೀಗೆ ಹೆಚ್ಚು ಸಮಯ ಫ್ರಿಡ್ಜನಲ್ಲಿಟ್ಟ ಆಹಾರ ಸೇವಿಸುವುದು ಒಳ್ಳೆಯದಲ್ಲ. ಇದರಿಂದ ನಮ್ಮ ಆರೋಗ್ಯದ ಮೇಲೆ ಎಂತಹ ಕೆಟ್ಟ ಪರಿಣಾಮ ಬೀರಬಹುದು. ಫ್ರಿಡ್ಜ್ ಆಹಾರಗಳನ್ನು ಒಂದರಿಂದ ಎರಡು ದಿನಗಳ ಒಳಗೆ ಸೇವಿಸಬೇಕು ಮೊದಲು ಫ್ರಿಡ್ಜ್ ನಿಂದ ಹೊರ ತೆಗೆದು ರೂಮ್ ಟೆಂಪರ್ಚರ್ ಗೆ ಬಂದ ನಂತರ ಬಿಸಿ ಮಾಡಿಕೊಂಡು ಸೇವಿಸಬಹುದು.
ಇನ್ನು ಫ್ರಿಡ್ಜ್ ನಲ್ಲಿ ಇಟ್ಟ ಆಹಾರವನ್ನು 12 ರಿಂದ 14 ಗಂಟೆಗಳ ಒಳಗೆ ಸೇವನೆ ಮಾಡಬೇಕು ಇಲ್ಲವಾದರೆ ಇದರಲ್ಲಿ ಇರುವ ಪೌಷ್ಟಿಕಾಂಶ ಕಡಿಮೆಯಾಗುತ್ತದೆ ಅಷ್ಟೇ ಅಲ್ಲದೆ ಶಿಲೀಂದ್ರದಂತಹ ಬ್ಯಾಕ್ಟೀರಿಯಾ ಗಳು ಕೂಡ ಬೆಳೆಯಬಹುದು ಇದು ಕಿಬ್ಬೊಟ್ಟೆ ನೋವಿಗೆ ಕಾರಣವಾಗುತ್ತದೆ. ಇನ್ನು ಮಾಂಸ ಹಾಗೂ ಡೈರಿ ಉತ್ಪನ್ನಗಳನ್ನು ಎರಡು ದಿನಕ್ಕಿಂತ ಹೆಚ್ಚಿಗೆ ಸಮಯ ಫ್ರಿಡ್ಜ್ ನಲ್ಲಿ ಇಟ್ಟು ಸೇವನೆ ಮಾಡುವುದು ಒಳ್ಳೆಯದಲ್ಲ. ಮಾಂಸದ ಮೂಲ ರೂಪವನ್ನು ಎರಡು ದಿನಗಳಿಗಿಂತ ಸ್ವಲ್ಪ ಸಮಯ ಹೆಚ್ಚಿಗೆ ಇಡಬಹುದು ಆದರೆ ಮಾಂಸದಿಂದ ತಯಾರಿಸಿದ ಅಡುಗೆಯನ್ನು ಫ್ರಿಡ್ಜ್ ನಲ್ಲಿ ಹೆಚ್ಚು ಸಮಯ ಇಡುವುದು ಒಳ್ಳೆಯದಲ್ಲ. ತುಂಬಾ ಅನಿವಾರ್ಯವಾದರೆ ಕನಿಷ್ಠ ನಾಲ್ಕು ದಿನಗಳ ಒಳಗೆ ಅವುಗಳನ್ನು ಬಳಸಿ ಇಲ್ಲವಾದರೆ ದೇಹದಲ್ಲಿ ದೊಡ್ಡ ಪ್ರಮಾಣದಲ್ಲಿ ಅನಾರೋಗ್ಯ ಕಾಣಿಸಿಕೊಳ್ಳಬಹುದು.