ಏಪ್ರಿಲ್ 1 ಮತ್ತು 2ರಂದು ಆಕಾಶ ನೋಡುವುದು ಮರೆಯಬೇಡಿ – ಬೆಳದಿಂಗಳಲ್ಲಿ ಕಾಣಿಸಲಿದೆ ಪಿಂಕ್ ಮೂನ್

ಏಪ್ರಿಲ್ 1 ಮತ್ತು 2ರಂದು ಆಕಾಶ ನೋಡುವುದು ಮರೆಯಬೇಡಿ – ಬೆಳದಿಂಗಳಲ್ಲಿ ಕಾಣಿಸಲಿದೆ ಪಿಂಕ್ ಮೂನ್

ನಿಮಗೆ ಆಕಾಶ ವೀಕ್ಷಣೆ ಇಷ್ಟವಿದೆಯಾ?, ಹಾಗಾದರೆ, ಏಪ್ರಿಲ್ 1 ಮತ್ತು 2 ರಂದು ಆಕಾಶ ವೀಕ್ಷಣೆ ಮಾಡುವುದನ್ನು ತಪ್ಪಿಸಿಕೊಳ್ಳಬೇಡಿ. 2026ನೇ ವರ್ಷದ ಅಪರೂಪದ ಪಿಂಕ್ ಮೂನ್ ನಿಮ್ಮನ್ನು ಆಕರ್ಷಿಸಲಿದೆ.

ಇದನ್ನೂ ಓದಿ:ಗಜೇಂದ್ರನ ಏಕಾಂತವಾಸ ಅಂತ್ಯ – ಆನೆ ಶಿಬಿರಕ್ಕೆ ಬಂದ ಏಕಾಂಗಿ ಗಜೇಂದ್ರ

ಏಪ್ರಿಲ್ 1ರಂದು ಮತ್ತು 2 ರಂದು ಆಕಾಶದಲ್ಲಿ ವಿಶೇಷ ಹಾಗೂ ಅಪರೂಪದ ಚಂದಿರ ಗಮನ ಸೆಳೆಯಲಿದ್ದಾನೆ. ಈ ಅಪರೂಪದ ಚಂದ್ರಮನನ್ನು ಕಣ್ತುಂಬಿಕೊಳ್ಳಲು ಇಡೀ ವಿಶ್ವವೇ ಕಾದು ಕುಳಿತಿದೆ. ಇದನ್ನು ಪಿಂಕ್ ಮೂನ್ ಅಥವಾ ಗುಲಾಬಿ ಬಣ್ಣದ ಚಂದ್ರ ಎಂದು ಕರೆಯಲಾಗುವುದು. ಯಾಕೆಂದರೆ ಏಪ್ರಿಲ್ 1ರಂದು ಚಂದ್ರ ವಾತಾವರಣದ ಪ್ರಭಾವದಿಂದಾಗಿ ಗುಲಾಬಿ ಅಥವಾ ಹಳದಿ ಬಣ್ಣದ ಛಾಯೆಯನ್ನು ಹೊಂದಿರುತ್ತಾನೆ. ಹುಣ್ಣಿಮೆ ತಿಥಿಯು ಏಪ್ರಿಲ್ 1ರ ಬೆಳಗ್ಗೆ 7:06ಕ್ಕೆ (IST) ಆರಂಭವಾಗಿ, ಏಪ್ರಿಲ್ 2ರ ಬೆಳಗ್ಗೆ 7:41ಕ್ಕೆ (IST) ಅಂತ್ಯಗೊಳ್ಳಲಿದೆ ಹಾಗೂ ಇದೇ ಸಮಯದಲ್ಲಿ ಚಂದ್ರನು ಪೂರ್ಣವಾಗಿ ಪ್ರಕಾಶಿಸುತ್ತಾನೆ. ಚಂದ್ರನನ್ನು ವೀಕ್ಷಿಸಲು ಉತ್ತಮ ಸಮಯವೆಂದರೆ ಏಪ್ರಿಲ್ 1ರ ಸಂಜೆ ಸೂರ್ಯಾಸ್ತದ ನಂತರದ ಹೊತ್ತು.  ಪರಿಣಿತರು ಹಂಚಿಕೊಂಡ ಸಮಯ 10 ಗಂಟೆ 02 ನಿಮಿಷ.

ಇನ್ನು ಚಂದ್ರ ನಿಜಕ್ಕೂ ಗುಲಾಬಿ ಬಣ್ಣದಲ್ಲಿ ಕಾಣಿಸುತ್ತಾನಾ?, ಈ ಪ್ರಶ್ನೆಗೂ ಉತ್ತರವಿದೆ. ಪಿಂಕ್ ಮೂನ್ ಎಂದು ಕರೆದ ತಕ್ಷಣ ಚಂದ್ರನೇನು ನಿಜವಾಗಿಯೂ ಗುಲಾಬಿ ಬಣ್ಣಕ್ಕೆ ತಿರುಗುವುದಿಲ್ಲ. ವಾಸ್ತವದಲ್ಲಿ, ಉತ್ತರ ಅಮೆರಿಕದಲ್ಲಿ ವಸಂತ ಕಾಲದ ಆರಂಭದಲ್ಲಿ ಅರಳುವ ಫ್ಲಾಕ್ಸ್ ಎಂಬ ಸುಂದರವಾದ ಕಾಡುಹೂವುಗಳ ನೆನಪಿಗಾಗಿ ಏಪ್ರಿಲ್ ತಿಂಗಳ ಈ ಹುಣ್ಣಿಮೆಗೆ ಈ ವಿಶಿಷ್ಟ ಹೆಸರಿಡಲಾಗಿದೆ. ಏಪ್ರಿಲ್ 1ರ ರಾತ್ರಿ 9-10 ಗಂಟೆಯ  ನಂತರ ನೇರವಾಗಿ ನಿಮ್ಮ ಮನೆಯ ಟೆರೇಸ್ ಅಥವಾ ಅಂಗಳದ ಕಡೆ ಹೋಗಿ ಆಗಸದತ್ತ ನೋಡಿ. ಚಂದ್ರನು ಸಾಮಾನ್ಯಕ್ಕಿಂತ ಹೆಚ್ಚು ದೊಡ್ಡದಾಗಿ ಮತ್ತು ಆಕರ್ಷಕವಾದ ಚಿನ್ನದ ಅಥವಾ ಹಳದಿ ಬಣ್ಣದಲ್ಲಿ ಮಿನುಗುತ್ತಿರುತ್ತಾನೆ. ನಂತರ ನಿಧಾನಕ್ಕೆ ಗುಲಾಬಿ ಬಣ್ಣಕ್ಕೆ ತಿರುಗುತ್ತಾನೆ. ಯಾವುದೇ ಟೆಲಿಸ್ಕೋಪ್ ಸಹಾಯವಿಲ್ಲದೆ ಬರಿಗಣ್ಣಿನಿಂದಲೇ ಸುಂದರ ಚಂದಿರನನ್ನು ಕಣ್ತುಂಬಿಕೊಳ್ಳಿ.

Sulekha