ಈ ಹೊತ್ತಲ್ಲಿ ಮಸಾಲೆಯುಕ್ತ ಆಹಾರ ತಿನ್ನಲೇಬೇಡಿ! – ಒಂದು ತಪ್ಪಿನಿಂದ ಆರೋಗ್ಯಕ್ಕೆ ತೊಂದರೆ!

ಈ ಹೊತ್ತಲ್ಲಿ ಮಸಾಲೆಯುಕ್ತ ಆಹಾರ ತಿನ್ನಲೇಬೇಡಿ! – ಒಂದು ತಪ್ಪಿನಿಂದ ಆರೋಗ್ಯಕ್ಕೆ ತೊಂದರೆ!

ಖಾಲಿ ಹೊಟ್ಟೆಯಲ್ಲಿ ಈ ಆಹಾರ ಸೇವಿಸ್ತೀರಾ? ಹಾಗಾದ್ರೆ ನೀವೇ ನಿಮ್ಮ ಆರೋಗ್ಯ ಈಗಿನ ಕಾಲದಲ್ಲಿ ಏನ್‌ ತಿಂದ್ರೂ ಆಗೋದಿಲ್ಲ. ಪದೇ ಪದೆ ಆರೋಗ್ಯ ಹಾಳಾಗ್ತಾನೆ ಇರುತ್ತೆ. ಹೀಗಾಗೇ ಜೀವನ ಶೈಲಿ ಜೊತೆಗೆ ನಮ್ಮ ಆಹಾರ ಪದ್ಧತಿಯನ್ನ ಕೂಡ ಚೇಂಜ್‌ ಮಾಡಿಕೊಳ್ಳೋದು ತುಂಬಾ ಮುಖ್ಯ. ಇದರಲ್ಲಿ ಬೆಳಗ್ಗೆ ಉಪಹಾರ ಕೂಡ ಒಂದು. ಬೆಳಗ್ಗಿನ ಉಪಹಾರ ಅಂದರೆ ಬ್ರೇಕ್ ಫಾಸ್ಟ್ ವಿಚಾರದಲ್ಲಿ ನಾವು ಮಾಡುವ ಕೆಲವು ತಪ್ಪುಗಳು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ.

ಇದನ್ನೂ ಓದಿ: BBK 12ರಲ್ಲಿ ಗಿಲ್ಲಿ.. 13ಕ್ಕೆ ಗಗನಾ? -ಈ ಬಾರಿ TV ಸ್ಟಾರ್ಸ್‌ಗಷ್ಟೇ ಚಾನ್ಸ್?‌

ಖಾಲಿ ಹೊಟ್ಟೆಯಲ್ಲಿ ಎಣ್ಣೆ ಪದಾರ್ಥವನ್ನ ತಿನ್ಬೇಡಿ. ಎಣ್ಣೆಯಲ್ಲಿ ಕರಿದ ಆಹಾರ ತಿನ್ನೋದ್ರಿಂದ ಆರೋಗ್ಯ ಸಮಸ್ಯೆಗಳು ಕಾಡಬಹುದು‌. ಇದರಿಂದ ನಿಮ್ಮ ದೇಹದಲ್ಲಿ ಅನಾರೋಗ್ಯಕರ ಕೊಬ್ಬು ಉಂಟಾಗಿ ವಾಂತಿ, ಎದೆ ಉರಿ, ವಾಯು, ಹೊಟ್ಟೆ ಹುಣ್ಣು ಮುಂತಾದ ಸಮಸ್ಯೆಗಳು ಉಂಟಾಗುತ್ತವೆ.

ಇನ್ನು ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯೋದ್ರಿಂದ ಕೂಡ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ. ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದರಿಂದ ಎದೆಯುರಿ, ಆಸಿಡ್ ರಿಫ್ಲಕ್ಸ್ ಅಥವಾ ಜಠರದ ಉರಿ ಮುಂತಾದ ಸಮಸ್ಯೆಗಳು ನಿಮ್ಮನ್ನ ಕಾಡಬಹುದು.

ಇನ್ನು ಮಸಾಲೆಯುಕ್ತ ಆಹಾರಗಳುಗಳನ್ನ ಖಾಲಿ ಹೊಟ್ಟೆಯಲ್ಲಿ ತಿನ್ಬೇಡಿ. ಯಾಕಂದ್ರೆ ಇವುಗಳನ್ನ  ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತವೆ. ಇದ್ರಿಂದ ಗ್ಯಾಸ್ಟ್ರಿಕ್‌ ಆಗ್ಬೋದು. ಅಲ್ಲದೇ,  ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತೆ.

ಖಾಲಿ ಹೊಟ್ಟೆಯಲ್ಲಿ ಸಿಹಿ ಪದಾರ್ಥಗಳನ್ನು ಸೇವಿಸಬಾರದು. ಖಾಲಿ ಹೊಟ್ಟೆಯಲ್ಲಿ ಕೇಕ್, ಪೇಸ್ಟ್ರಿ ಅಂತಹ ಸಿಹಿತಿಂಡಿಗಳನ್ನು ತಪ್ಪಿಸ ಬೇಕು‌. ಖಾಲಿ ಹೊಟ್ಟೆಯಲ್ಲಿ ಸಿಹಿತಿಂಡಿಗಳನ್ನು ತಿನ್ನುವುದು ದೇಹದಲ್ಲಿ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ. ಹಾಗಾಗಿ ಇದರಿಂದ ಆಲಸ್ಯ ಮತ್ತು ಆಯಾಸ ಹೆಚ್ಚಾಗುವ ಸಾಧ್ಯತೆ ಇರುತ್ತೆ.

ಇನ್ನು ಬೆಳಗ್ಗಿನ ಖಾಲಿ ಹೊಟ್ಟೆಗೆ ಸಿಟ್ರಸ್ ಹಣ್ಣುಗಳನ್ನು ಸೇವಿಸಬಾರದು. ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಿದರೆ, ಹೊಟ್ಟೆಯಲ್ಲಿ ಉತ್ಪತ್ತಿಯಾಗುವ ಜೀರ್ಣ ಪ್ರಕ್ರಿಯೆಗೆ ಸಂಬಂಧಪಟ್ಟ ಆಮ್ಲಗಳು ಹೆಚ್ಚಾಗಿ ಹೊಟ್ಟೆಯಲ್ಲಿ ಹುಣ್ಣುಗಳು ಆಗಬಹುದು. ಹಾಗಾಗಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಹಣ್ಣುಗಳನ್ನ  ತಿನ್ನೋದನ್ನ ಆದಷ್ಟು ತಪ್ಪಿಸಿ.

ಜಂಕ್ ಫುಡ್ ತಿನ್ನೋದನ್ನ ಆದಷ್ಟು ಅವಾಯ್ಡ್‌ ಮಾಡಿ. ಪಿಜ್ಜಾ ಮತ್ತು ಬರ್ಗರ್‌ಗಳಂತಹ ಜಂಕ್ ಫುಡ್‌ಗಳನ್ನು ಬೆಳಗ್ಗೆ ಖಾಲಿ ಹೊಟ್ಟೆಗೆ ತಿನ್ನಬಾರದು‌.ಇದ್ರಿಂದ ಕೂಡ ನಿಮ್ಮ ಆರೋಗ್ಯ ಹಾಳಾಗುತ್ತೆ. ಹೀಗಾಗಿ ಖಾಲಿ ಹೊಟ್ಟೆಯಲ್ಲಿ ಇಂತಹ ಆಹಾರ ಸೇವಿಸೋದನ್ನ ತಪ್ಪಿಸಿ.

Shwetha M

Leave a Reply

Your email address will not be published. Required fields are marked *