ಸ್ಟಾರ್ ಚಿಹ್ನೆ ಹೊಂದಿರುವ ನೋಟುಗಳ ಬಗ್ಗೆ ಗೊಂದಲ ಬೇಡ, ಇವು ಕಾನೂನುಬದ್ಧ ನೋಟುಗಳು – ಆರ್‌ಬಿಐ ಸ್ಪಷ್ಟನೆ
ನವದೆಹಲಿ: ಸ್ಟಾರ್ ಚಿಹ್ನೆ ಹೊಂದಿರುವ ನೋಟುಗಳ ಸಿಂಧುತ್ವದ ಬಗ್ಗೆ ಭಾರಿ ಚರ್ಚೆಯಾಗುತ್ತಿತ್ತು. ಈ ನೋಟುಗಳು ನಕಲಿಯೇ, ಅಸಲಿಯೇ ಎಂಬ ಪ್ರಶ್ನೆ ಜನರಲ್ಲಿ ಮೂಡಿತ್ತು. ಇದೀಗ ಆರ್‌ಬಿಐ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಸ್ಪಷ್ಟನೆ ನೋಡಿದೆ. ಸ್ಟಾರ್ ಚಿಹ್ನೆ ಹೊಂದಿರುವ ಬ್ಯಾಂಕ್ ನೋಟ್‌ಗಳು ಕಾನೂನುಬದ್ಧವಾಗಿದೆ. ಅದರಲ್ಲಿ ಯಾವುದೇ ಅನುಮಾನ ಬೇಡ. ಇತರ ನೋಟುಗಳಂತೆ ಅದನ್ನೂ ಕೂಡ ಲೀಗಲ್ ಟೆಂಡರ್ ಆಗಿ ಬಳಸಿಕೊಳ್ಳಬಹುದು ಎಂದು ಹೇಳಿದೆ.
ಬೇರೆಲ್ಲ ನೋಟುಗಳಲ್ಲಿ ಸಾಮಾನ್ಯವಾಗಿ ಮೂರು ಅಕ್ಷರಗಳ ಬಳಿಕ ನಂಬರ್‌ಗಳಿದ್ದರೆ, ಸ್ಟಾರ್ ಚಿಹ್ನೆಯ ನೋಟುಗಳಲ್ಲಿ ಸೀರಿಯಲ್ ನಂಬರ್‌ಗೂ ಮುನ್ನ * ಚಿಹ್ನೆ ಇದೆ. ಹಾಗಾಗಿ ಈ ನೋಟುಗಳ ಸಿಂಧುತ್ವದ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಇದರ ಬೆನ್ನಲ್ಲಿಯೇ ಆರ್‌ಬಿಐ ಸ್ಪಷ್ಟ ನೀಡಿದ್ದು, ಅದು ಕಾನೂನುಬದ್ಧ ನೋಟುಗಳು ಎಂದು ಹೇಳಿದೆ. ನಕ್ಷತ್ರ ಚಿಹ್ನೆಯು ನೋಟುಗಳ ಅರ್ಥ, ಅದನ್ನು ಪ್ರಿಟಿಂಗ್ ವೇಳೆ ಬದಲಿ ಮಾಡಿದ ಅಥವಾ ಮರುಮುದ್ರಣ ಮಾಡಿದ ನೋಟು ಎಂದು ಗುರುತಿಸುತ್ತದೆ ಎಂದು ಆರ್‌ಬಿಐ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಕಾಶಿ ದರ್ಶನದ 4ನೇ ಸುತ್ತಿನ ಯಾತ್ರೆಗೆ 29 ರಂದು ಚಾಲನೆ – ಐಆರ್‌ಸಿಟಿಸಿ ಸ್ಪೆಷಲ್ ಪ್ಯಾಕೇಜ್, ರಾಜ್ಯ ಸರ್ಕಾರದಿಂದಲೂ ರಿಯಾಯಿತಿ
ಈ ನೋಟುಗಳನ್ನು ಪ್ರಿಂಟಿಗ್ ಮಾಡುವಾಗ ದೋಷವಾದಾಗ ಅಥವಾ ತಪ್ಪಾಗಿ ಪ್ರಿಂಟ್ ಆದಾಗ ಅಂಥಾ ನೋಟುಗಳ ಮರುಮುದ್ರಣ ಮಾಡಲಾಗುತ್ತದೆ. ಈ ವೇಳೆ ಅದೇ ಸೀರಿಯಲ್ ನಂಬರ್‌ಗಳ ಮುನ್ನ * ಚಿಹ್ನೆ ಹಾಕಲಾಗುತ್ತದೆ. 100 ಸರಣಿ ಸಂಖ್ಯೆಯ ಕರೆನ್ಸಿ ನೋಟುಗಳ ಪ್ಯಾಕೆಟ್‌ನಲ್ಲಿ ದೋಷಯುಕ್ತವಾಗಿ ಮುದ್ರಿತ ನೋಟುಗಳಿಗೆ ಬದಲಿಯಾಗಿ ಬಳಸಲಾಗುವ ಬ್ಯಾಂಕ್‌ನೋಟಿನ ಸಂಖ್ಯೆಯ ಪ್ಯಾಕೆಟ್‌ನಲ್ಲಿ ನಕ್ಷತ್ರ ಚಿಹ್ನೆಯ ನೋಟ್‌ಗಳನ್ನು ಸೇರಿಸಲಾಗುತ್ತದೆ ಎಂದು ಆರ್‌ಬಿಐ ಸ್ಪಷ್ಟನೆ ನೀಡಿದೆ.
ಆಗಸ್ಟ್ 2006 ರವರೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿದ ತಾಜಾ ಬ್ಯಾಂಕ್‌ನೋಟುಗಳನ್ನು ಕ್ರಮವಾಗಿ ಸಂಖ್ಯೆ ಮಾಡಲಾಗಿದೆ. ಈ ಪ್ರತಿಯೊಂದು ಟಿಪ್ಪಣಿಗಳು ಅಂಕಿಗಳು ಮತ್ತು ಅಕ್ಷರಗಳನ್ನು ಒಳಗೊಂಡಿರುವ ಪೂರ್ವಪ್ರತ್ಯಯದೊಂದಿಗೆ ವಿಶಿಷ್ಟವಾದ ಸರಣಿ ಸಂಖ್ಯೆಯನ್ನು ಹೊಂದಿವೆ. ನೋಟುಗಳನ್ನು 100 ನೋಟುಗಳಿರುವ ಪ್ಯಾಕೆಟ್‌ಗಳಲ್ಲಿ ನೀಡಲಾಗುತ್ತದೆ.
100 ಸರಣಿ ಸಂಖ್ಯೆಯ ಬ್ಯಾಂಕ್ ನೋಟುಗಳ ಪ್ಯಾಕೆಟ್‌ನಲ್ಲಿ ದೋಷಪೂರಿತವಾಗಿ ಮುದ್ರಿತ ನೋಟುಗಳನ್ನು ಬದಲಿಸಲು ಬ್ಯಾಂಕ್ ಸ್ಟಾರ್ ಸರಣಿ ಸಂಖ್ಯೆಯ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ನಕ್ಷತ್ರ ಚಿಹ್ನೆಯ ನೋಟುಗಳು ಇತರ ನೋಟುಗಳಷ್ಟೇ ಕಾನೂನುಬದ್ಧ. ಆದರೆ ಪೂರ್ವಪ್ರತ್ಯಯ ಮತ್ತು ಸರಣಿ ಸಂಖ್ಯೆಯ ನಡುವಿನ ಜಾಗದಲ್ಲಿ ಹೆಚ್ಚುವರಿ ಅಕ್ಷರವಾಗಿ ಸ್ಟಾರ್ ಚಿಹ್ನೆಯನ್ನು ಹೊಂದಿರುತ್ತದೆ ಎಂದು ಆರ್‌ಬಿಐ ಸ್ಪಷ್ಟನೆ ನೀಡಿದೆ.