ಈ ಕ್ಯಾಬ್ ಡ್ರೈವರ್‌ನ ಭಯ್ಯಾ ಅಂತ ಕರೆಯಬಾರದು! – ಶಾಕ್‌ ಆಗುವಂತಿದೆ   ಡ್ರೈವರ್‌ ರೂಲ್ಸ್‌?

ಈ ಕ್ಯಾಬ್ ಡ್ರೈವರ್‌ನ ಭಯ್ಯಾ ಅಂತ ಕರೆಯಬಾರದು! – ಶಾಕ್‌ ಆಗುವಂತಿದೆ   ಡ್ರೈವರ್‌ ರೂಲ್ಸ್‌?

ಈಗಿನ ದಿನಗಳಲ್ಲಿ ಎಲ್ಲಿ ಹೋಗೋದಾದ್ರೂ ಅನೇಕರು ಕ್ಯಾಬ್‌ ಗಳನ್ನೇ ಬಳಸುತ್ತಾರೆ. ಕ್ಯಾಬ್‌ ಡ್ರೈವರ್‌ ಕಾಲ್‌ ಮಾಡಿದಾಗ, ಪೇ ಮಾಡುವಾಗ ಅನೇಕ ಪ್ರಯಾಣಿಕರು, ಅಣ್ಣಾ, ಭಯ್ಯಾ ಅಂತಾ ಕರೀತಾರೆ.. ಇದೀಗ ಇಲ್ಲೊಬ್ಬ ಡ್ರೈವರ್‌ ಪ್ರಯಾಣಿಕರಿಗೆ ಹೊಸ ಗೈಡ್‌ಲೈನ್‌ ತಯಾರಿಸಿದ್ದಾನೆ. ಇದನ್ನ ಕಂಡು ಪ್ರಯಾಣಿಕರೇ ಶಾಕ್‌ ಆಗಿದ್ದಾರೆ.

ಇದನ್ನೂ ಓದಿ: 40 ಬಾಲ್.. 14 ಫೋರ್.. ಸೆಂಚುರಿ! – ಸಂಜು ಸ್ಯಾಮ್ಸನ್ IS BACK

ಈಗಿನ ದಿನಗಳಲ್ಲಿ ಸಣ್ಣಪುಟ್ಟ ಪ್ರಯಾಣದಿಂದ ಹಿಡಿದು ದೂರದ ಪ್ರಯಾಣಕ್ಕೆ ಕ್ಯಾಬ್ ಅನುಕೂಲವಾಗಿದೆ. ಆನ್ಲೈನ್ ಫ್ಲಾಟ್ ಫಾರ್ಮ್ ನಲ್ಲಿ ಕ್ಯಾಬ್ ಬುಕ್ ಮಾಡಿದ್ರೆ ಪ್ರಯಾಣ ಸುಲಭ. ಕ್ಯಾಬ್ ಡ್ರೈವರ್ಸ್ ಪ್ರತಿ ದಿನ ಹತ್ತಾರು ಮಂದಿಯನ್ನು ನೋಡ್ತಿರುತ್ತಾರೆ. ಒಬ್ಬೊಬ್ಬರ ಸ್ವಭಾವ, ವರ್ತನೆ ಭಿನ್ನವಾಗಿರುತ್ತದೆ. ಅವರಿಗೆಲ್ಲ ತನ್ನ ರೂಲ್ಸ್ ಹೇಳ್ತಾ ಕುಳಿತುಕೊಳ್ಳೋದು ಕಷ್ಟ. ಹಾಗಾಗಿ ಕ್ಯಾಬ್ ಡ್ರೈವರ್ ಒಬ್ಬ, ಪೇಪರ್ ಮೇಲೆ ರೂಲ್ಸ್ ಬರೆದು ಅದನ್ನು ಸೀಟ್ ಹಿಂದೆ ನೇತು ಹಾಕಿದ್ದಾನೆ. ಪ್ರಯಾಣಿಕರ್ಯಾರೋ ಅದ್ರ ಫೋಟೋ ಕ್ಲಿಕ್ಕಿಸಿ, ಅದನ್ನು ರೆಡ್ಡಿಟ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ರೂಲ್ಸ್‌ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

ಕ್ಯಾಬ್‌ ಡ್ರೈವರ್‌ ರೂಲ್ಸ್‌ ಏನು?

ಮೊದಲನೇಯದಾಗಿ, ನೀವು ಕಾರಿನ ಓನರ್ ಅಲ್ಲ ಎಂದು ಬರೆಯಲಾಗಿದೆ. ಕಾರು ಓಡಿಸುತ್ತಿರುವ ವ್ಯಕ್ತಿ, ಕಾರಿನ ಓನರ್ ಎಂದು ಎರಡನೇ ಪಾಯಿಂಟ್ ಹಾಕಲಾಗಿದೆ. ಸಭ್ಯತೆಯಿಂದ ಮಾತನಾಡಿ, ಗೌರವ ಪಡೆಯಿರಿ, ಕಾರಿನ ಡೋರನ್ನು ನಿಧಾನವಾಗಿ ಹಾಕಿ ಎಂದು ಸೂಚನೆ ನೀಡಲಾಗಿದೆ. ನಿಮ್ಮ ಮನೋಭಾವವನ್ನು ನಿಮ್ಮ ಜೇಬಿನಲ್ಲಿ ಇರಿಸಿ. ದಯವಿಟ್ಟು ಅದನ್ನು ನಮಗೆ ತೋರಿಸಬೇಡಿ, ಏಕೆಂದರೆ ನೀವು ನಮಗೆ ಹೆಚ್ಚು ಹಣವನ್ನು ನೀಡುತ್ತಿಲ್ಲ ಎಂದು ಬರೆದಿದ್ದಾರೆ.  ಕೊನೆಯಲ್ಲಿ ದಯವಿಟ್ಟು ಭಯ್ಯಾ ಎಂದು ನನ್ನನ್ನು ಕರೆಯಬೇಡಿ ಎಂದು ಸೂಚಿಸಿದ್ದಾರೆ. ನೋಟ್ ಎಂದು ರೆಡ್ ಕಲರ್ ನಲ್ಲಿ ಬರೆಯಲಾಗಿದ್ದು, ಅದರ ಮುಂದೆ ಸಮಯದ ಕಾರಣ ಹೇಳಿ ಫಾಸ್ಟ್ ಡ್ರೈವ್ ಗೆ ಪ್ರೋತ್ಸಾಹಿಸಬೇಡಿ ಎಂದೂ ವಿನಂತಿ ಮಾಡಿದ್ದಾರೆ.

ಏಳು ಪಾಯಿಂಟ್ ಇರುವ ಈ ನೋಟ್ ನಲ್ಲಿ ಬಹುತೇಕ ವಿಷ್ಯಗಳು ಸೂಕ್ತವಾಗಿವೆ. ಅದನ್ನು ಬಳಕೆದಾರರು ಸಮರ್ಥಿಸಿಕೊಂಡಿದ್ದಾರೆ. ಪ್ರತಿಯೊಬ್ಬ ಪ್ರಯಾಣಿಕ ಪಾಲಿಸಬೇಕಾದ ಅಂಶಗಳು ಇದರಲ್ಲಿವೆ, ಆದ್ರೆ ಭಯ್ಯಾ ಎಂಬುದು ಮಾತ್ರ ವಿಚಿತ್ರವಾಗಿದೆ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ಭಯ್ಯಾ ಎಂದು ಯಾಕೆ ಕರೆಯಬಾರದು ಎಂಬ ಪ್ರಶ್ನೆಯನ್ನು ನೆಟ್ಟಿಗರು ಕೇಳಿದ್ದಾರೆ.  ಭಯ್ಯಾ ಬದಲು ಏನೆಂದು ಕರೆಯಬೇಕು? ಡ್ರೈವರ್, ಅಂಕಲ್, ಬ್ರದರ್, ಯಾವುದು ಸೂಕ್ತ ಎಂಬುದು ನೆಟ್ಟಿಗರ ಪ್ರಶ್ನೆ.

Shwetha M

Leave a Reply

Your email address will not be published. Required fields are marked *