ತಾಯಿಯ ಎದೆಹಾಲಿನಷ್ಟೇ ಸಮಾನ ಕತ್ತೆ ಹಾಲು – ಕತ್ತೆ ಹಾಲು ಸೇವಿಸಿದ್ರೆ ಎಷ್ಟೆಲ್ಲಾ ಪ್ರಯೋಜನ?

ತಾಯಿಯ ಎದೆಹಾಲಿನಷ್ಟೇ ಸಮಾನ ಕತ್ತೆ ಹಾಲು – ಕತ್ತೆ ಹಾಲು ಸೇವಿಸಿದ್ರೆ ಎಷ್ಟೆಲ್ಲಾ ಪ್ರಯೋಜನ?

ಆರೋಗ್ಯಕ್ಕೆ ಒಳ್ಳೇದು ಅಂತಾ ಎಲ್ಲಾ ವಯಸ್ಸಿನವರು ಹಾಲು ಕುಡೀತಾರೆ. ಆದ್ರೆ ಎಮ್ಮೆ, ಹಸು, ಮೇಕೆ ಹಾಲಿಗಿಂತ ಕತ್ತೆ ಹಾಲಿನಲ್ಲಿ ತುಂಬಾನೇ ಪೋಷಕಾಂಶಗಳಿವೆ. ಅದರ ಮಹತ್ವದ ಬಗ್ಗೆ ತಿಳಿದರೆ ನೀವೂ ಕೂಡ ದಂಗಾಗುತ್ತೀರಿ.

ಇದನ್ನೂ ಓದಿ : ಅತಿಯಾದ ಯೋಚನೆ ಅನಾರೋಗ್ಯಕ್ಕೆ ಆಹ್ವಾನ!

ಹಳ್ಳಿಗಳ ಕಡೆ ಕುರಿ ಮಂದೆಯವರು ಬಂದಾಗ ಮಕ್ಕಳಿಗೆ ಕತ್ತೆ ಹಾಲು ಕುಡಿಸ್ತಾರೆ. ಇನ್ನು ಸಿಟಿಗಳಲ್ಲಿ ಇತ್ತೀಚೆಗೆ ಕತ್ತೆಗಳ ಸಮೇತ ಮನೆ ಬಾಗಿಲಿಗೇ ಬರ್ತಾರೆ. ಯಾಕಂದ್ರೆ ಕತ್ತೆ ಹಾಲಿನ ಸೇವನೆಯಿಂದ ಹಲವು ಪ್ರಯೋಜನಗಳಿವೆ. ತಾಯಿಯ ಎದೆ ಹಾಲಿನಷ್ಟೇ ಪೌಷ್ಟಿಕಾಂಶ ಗುಣಗಳನ್ನ ಕತ್ತೆ ಹಾಲು ಹೊಂದಿದೆ ಅಂದ್ರೆ ನೀವು ನಂಬಲೇಬೇಕು. ಹಸುವಿನ ಹಾಲಿಗೆ ಹೋಲಿಸಿದರೆ ಕತ್ತೆ ಹಾಲಿನಲ್ಲಿ ಕೊಬ್ಬಿನಾಂಶ ತೀರಾ ಕಡಿಮೆ ಇರುತ್ತದೆ. ಕೆಲ ಅಧ್ಯಯನದ ಪ್ರಕಾರ, ಕತ್ತೆ ಹಾಲು ಹಸುವಿನ ಹಾಲಿಗಿಂತ 9 ಪಟ್ಟು ಹೆಚ್ಚು ಟೌರಿನ್ ಎಂಬ ಅಂಶವನ್ನು ಹೊಂದಿರುತ್ತದೆ. ಇದ್ರಿಂದ ಜೀರ್ಣಕ್ರಿಯೆ ಸುಗಮವಾಗುತ್ತದೆ. ಶಿಶುವಿಗೆ ಮಿತವಾಗಿ ಕತ್ತೆಯ ಹಾಲನ್ನು ನೀಡಿದಾಗ ಪೋಷಕಾಂಶಗಳನ್ನು ಜೀರ್ಣಿಸಿಕೊಳ್ಳಲು ಹಾಗು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಮೂಳೆಗಳ ಆರೋಗ್ಯಕ್ಕೆ ಬೇಕಾದ ವಿಟಮಿನ್‌ ಡಿ ಪೋಷಕಾಂಶ ಇದರಲ್ಲಿ ಹೆಚ್ಚಾಗಿದೆ. ಇದೇ ಕಾರಣಕ್ಕೆ ಕತ್ತೆ ಹಾಲು 10 ಎಂಎಲ್​ಗೆ 100 ರೂಪಾಯಿ 1 ಲೀಟರ್​ಗೆ 5 ಸಾವಿರ ಇದೆ.

Shantha Kumari