ಭಾರತದಲ್ಲಿ ರಸ್ತೆಗೆ ಟ್ರಂಪ್ ಹೆಸರು – ಧನ್ಯವಾದ ತಿಳಿಸಿದ ಅಮೆರಿಕ ಅಧ್ಯಕ್ಷ

ಭಾರತದಲ್ಲಿ ರಸ್ತೆಗೆ ಟ್ರಂಪ್ ಹೆಸರು – ಧನ್ಯವಾದ ತಿಳಿಸಿದ ಅಮೆರಿಕ ಅಧ್ಯಕ್ಷ

ಭಾರತದ ರಸ್ತೆಗೆ ತನ್ನ ಹೆಸರು ಇಟ್ಟಿದ್ದಕ್ಕೆ ಟ್ರಂಪ್ ಫುಲ್ ಖುಷಿಯಾಗಿದ್ದಾರೆ. ಇಂಡಿಯಾಗೆ ಧನ್ಯವಾದವನ್ನ ತಿಳಿಸಿದ್ದಾರೆ. ಹೈದರಾಬಾದ್ ನ ರಸ್ತೆಗೆ ಡೊನಾಲ್ಡ್ ಟ್ರಂಪ್ ಹೆಸರನ್ನು ಇಡಲಾಗಿದೆ. ಇದನ್ನು ಔಪಚಾರಿಕವಾಗಿ ಅನಾವರಣಗೊಳಿಸಿದ ಬಳಿಕ ಶುಕ್ರವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಟ್ರೂತ್ ಸೋಷಿಯಲ್‌ನಲ್ಲಿ ಭಾರತಕ್ಕೆ ಧನ್ಯವಾದ ಅರ್ಪಿಸಿದರು.

ಸೋಷಿಯಲ್‌ನಲ್ಲಿ  ಪೋಸ್ಟ್ ಮಾಡಿರುವ ಟ್ರಂಪ್ ಇದೊಂದು ತಮಗೆ ದೊರೆತ ಅಭೂತಪೂರ್ವ ಗೌರವ ಎಂದು ಹೇಳಿದ್ದಾರೆ. ತೆಲಂಗಾಣದ ಹೈದರಾಬಾದ್‌ನಲ್ಲಿರುವ  ಯುಎಸ್ ರಾಯಭಾರ  ಕಚೇರಿಗೆ ಹೊಂದಿಕೊಂಡಿರುವ ರಸ್ತೆಗೆ ಅಧಿಕೃತವಾಗಿ ಡೊನಾಲ್ಡ್ ಟ್ರಂಪ್ ಅವೆನ್ಯೂ  ಎಂದು ಮರುನಾಮಕರಣ ಮಾಡಲಾಗಿದೆ. ಇದನ್ನು ಅನಾವರಣಗೊಳಿಸಿದ ಬಳಿಕ ಡೊನಾಲ್ಡ್ ಟ್ರಂಪ್ ಧನ್ಯವಾದ ಸಮರ್ಪಿಸಿದ್ದಾರೆ.

ಇದನ್ನೂ ಓದಿ: ಸೋಷಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿದ ಕಿಚ್ ಸುದೀಪ್ ಕ್ಯಾರವನ್ – 6.5 ಕೋಟಿ ಕ್ಯಾರವನ್ ವಿಶೇಷತೆಯೇನು ಗೊತ್ತಾ?

ಹೈದರಾಬಾದ್‌ನಲ್ಲಿರುವ ಯುಎಸ್ ರಾಯಭಾರ ಕಚೇರಿಗೆ ಹೊಂದಿಕೊಂಡಿರುವ ರಸ್ತೆಯನ್ನು ತೆಲಂಗಾಣ ಅಧಿಕೃತವಾಗಿ ಡೊನಾಲ್ಡ್ ಟ್ರಂಪ್ ಅವೆನ್ಯೂ ಎಂದು ಮರುನಾಮಕರಣ ಮಾಡಿದ ಕೆಲವು ದಿನಗಳ ಬಳಿಕ ಡೊನಾಲ್ಡ್ ಟ್ರಂಪ್ ಈ ಪೋಸ್ಟ್ ಹಂಚಿಕೊಂಡಿದ್ದಾರೆ. ಟ್ರಂಪ್ ಅವರ ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಮಂದಿಯ ಗಮನ ಸೆಳೆದಿದ್ದು, ಅವರ ಪೋಸ್ಟ್‌ನಲ್ಲಿ ಭಾರತದಲ್ಲಿ ಅಮೆರಿಕದ ಅಧ್ಯಕ್ಷರಿಗೆ ಸಿಗುವ ಈ ರೀತಿಯ ಮೊದಲ ಗೌರವ ಎಂದು ಬಣ್ಣಿಸಿದ್ದಾರೆ.

ಡೊನಾಲ್ಡ್ ಟ್ರಂಪ್ ಅವೆನ್ಯೂ ಹೈದರಾಬಾದ್‌ನ ನಾನಕ್ರಾಮ್‌ಗುಡದಲ್ಲಿದೆ. ಇದು ಅಮೆರಿಕದ ರಾಜತಾಂತ್ರಿಕ ಕಾರ್ಯಾಚರಣೆ ಮತ್ತು ಹಲವಾರು ಪ್ರಮುಖ ಅಂತಾರಾಷ್ಟ್ರೀಯ ತಂತ್ರಜ್ಞಾನ ಕಂಪೆನಿಗಳನ್ನು ಹೊಂದಿರುವ ಪ್ರದೇಶವಾಗಿದೆ. ಇದನ್ನು ಹೈದರಾಬಾದ್ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ಸಂಬಂಧದ ಸಾಂಕೇತಿಕ ಗುರುತಿಸುವಿಕೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Kishor KV

Leave a Reply

Your email address will not be published. Required fields are marked *