2024ರ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರಾ ಅಮೆರಿಕದ ಮಾಜಿ ಅಧ್ಯಕ್ಷ? ಸುಳಿವು ನೀಡಿದ ಡೊನಾಲ್ಡ್ ಟ್ರಂಪ್
ಬಿಡೆನ್‌ಗೆ ಬಿಸಿಮುಟ್ಟಿಸಲು ರಿಪಬ್ಲಿಕನ್ಸ್‌ ರೆಡಿ!

2024ರ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರಾ ಅಮೆರಿಕದ ಮಾಜಿ ಅಧ್ಯಕ್ಷ? ಸುಳಿವು ನೀಡಿದ ಡೊನಾಲ್ಡ್ ಟ್ರಂಪ್ಬಿಡೆನ್‌ಗೆ ಬಿಸಿಮುಟ್ಟಿಸಲು ರಿಪಬ್ಲಿಕನ್ಸ್‌ ರೆಡಿ!

ಅಮೆರಿಕ: ಇಲ್ಲಿನ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಿನ ವಾರ ದೊಡ್ಡ ಘೋಷಣೆ ಮಾಡಲಿರುವುದಾಗಿ ಹೇಳಿದ್ದು, ಈ ಬಗ್ಗೆ ಸೋಮವಾರ ಸುಳಿವು ನೀಡಿರುವ ಅವರು 2024ರಲ್ಲಿ ಅಮೆರಿಕಾ ಅಧ್ಯಕ್ಷ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ನಿರೀಕ್ಷೆಯಿದೆ.

ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ಪಕ್ಷಾಂತರ ಪರ್ವ: ಮತದಾನಕ್ಕೆ ಕೆಲವೇ ದಿನಗಳಿರುವಾಗ ಬಿಜೆಪಿಗೆ ಸೇರಿದ 26 ಕಾಂಗ್ರೆಸ್ ನಾಯಕರು

2020ರ ಚುನಾವಣೆಯಲ್ಲಿ ಸೋತಿದ್ದ ಡೊನಾಲ್ಡ್​ ಟ್ರಂಪ್ ಮರುಚುನಾವಣೆಯ ಪ್ರಯತ್ನದ ಬಗ್ಗೆ ಇಲ್ಲಿವರೆಗೂ ಏನೂ ಹೇಳಿರಲಿಲ್ಲ. ಆದರೆ, ಇದೀಗ ತಾನು ಮತ್ತೆ ಚುನಾವಣಾ ಕಣಕ್ಕೆ ಇಳಿಯಲು ಸಿದ್ಧ ಎಂದು ಸುಳಿವು ನೀಡಿದ್ದಾರೆ.

ಇಂದು ನಡೆಯಲಿರುವ ಅತ್ಯಂತ ಮಹತ್ವದ, ನಿರ್ಣಾಯಕ ಚುನಾವಣೆಗೆ ನಾವು ಯಾವುದೇ ಅಡ್ಡಿ ಮಾಡುವುದಿಲ್ಲ. ನಾನು ನವೆಂಬರ್ 15ರಂದು ಫ್ಲೋರಿಡಾದ ಪಾಮ್ ಬೀಚ್‌ನಲ್ಲಿರುವ ಮಾರ್-ಎ-ಲಾಗೋದಲ್ಲಿ ಬಹಳ ದೊಡ್ಡ ಘೋಷಣೆ ಮಾಡಲಿದ್ದೇನೆ” ಎಂದು ಟ್ರಂಪ್ ಓಹಿಯೋದಲ್ಲಿ ನೆರೆದಿದ್ದ ಪ್ರೇಕ್ಷಕರಿಗೆ ಹೇಳಿದ್ದಾರೆ.

ಈ ವರ್ಷದ ಮಧ್ಯಂತರ ಚುನಾವಣೆ ಇಂದು ನಡೆಯಲಿದೆ. ಈ ಮತದಾನದ ಅಂತಿಮ ದಿನಕ್ಕೂ ಮೊದಲು ಓಹಿಯೋದಲ್ಲಿ ಪ್ರಚಾರ ಮಾಡುವಾಗ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ. ದೋಷಾರೋಪಣೆಗಳಿಗೆ ಕಾರಣವಾಗಬಹುದಾದ ಹಲವಾರು ತನಿಖೆಗಳು ಸೇರಿದಂತೆ ಕಾನೂನು ಸವಾಲುಗಳ ಸರಣಿಯನ್ನು ಎದುರಿಸುತ್ತಿರುವ ಡೊನಾಲ್ಡ್​ ಟ್ರಂಪ್ ನೀಡಿರುವ ಹೇಳಿಕೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

suddiyaana