ಭಾರತದಿಂದ ಅಮೆರಿಕಕ್ಕೆ ಅನ್ಯಾಯ- ಟ್ರಿಂಪ್ ಹೀಗೆ ಹೇಳಿದ್ದೇಕೆ ಗೊತ್ತಾ?
ಟೆಸ್ಲಾ ಕಂಪನಿಗೆ ಅಡ್ಡಗಾಲು

ಭಾರತದಿಂದ ಅಮೆರಿಕಕ್ಕೆ ಅನ್ಯಾಯವಾಗುತ್ತದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಎಲೋನ್ ಮಸ್ಕ್ ಅವರ ಟೆಸ್ಲಾ ಕಂಪನಿಯು ಭಾರತದಲ್ಲಿ ಸುಂಕಗಳನ್ನು ತಪ್ಪಿಸಲು ಕಾರ್ಖಾನೆಯನ್ನು ನಿರ್ಮಿಸಿದರೆ ಅದ್ರಿಂದ ಭಾರತಕ್ಕೆ ಅನ್ಯಾಯ ಆಗುತ್ತೆ ಅಂತ ಹೇಳಿದ್ದಾರೆ. ಸುಂಕ ಹೆಚ್ಚಳ ಬಗ್ಗೆ ಡೊನಾಲ್ಡ್ ಟ್ರಂಪ್ ಕ್ರಮದ ಮಧ್ಯೆ ಈ ಹೇಳಿಕೆ ನೀಡಿದ್ದಾರೆ. ಫೆಬ್ರವರಿ 13 ರಂದು, ಪ್ರಧಾನಿ ನರೇಂದ್ರ ಮೋದಿ ಅವರು ಶ್ವೇತಭವನದಲ್ಲಿ ಟ್ರಂಪ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತ ನಡೆಸುವ ಮೊದಲು, ಅಮೆರಿಕ ಅಧ್ಯಕ್ಷರು ಪರಸ್ಪರ ಸುಂಕಗಳನ್ನು ಘೋಷಿಸಿದ್ದರು.
ಫಾಕ್ಸ್ ನ್ಯೂಸ್‌ನ ಸೀನ್ ಹ್ಯಾನಿಟಿ ಅವರೊಂದಿಗಿನ ಇತ್ತೀಚಿನ ಸಂದರ್ಶನದಲ್ಲಿ ಮಾತನಾಡುವ ವೇಳೆ ಡೊನಾಲ್ಡ್ ಟ್ರಂಪ್, ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಸುಂಕಗಳನ್ನು ವಿಧಿಸುತ್ತದೆ ಎಂದು ಹೇಳಿದ್ದರು. ಭಾರತದಲ್ಲಿ ಕಾರನ್ನು ಮಾರಾಟ ಮಾಡುವುದು ಮಸ್ಕ್ ಅವರಿಗೆ ಅಸಾಧ್ಯ ಎಂದಿದ್ದರು.
ಜಗತ್ತಿನ ಪ್ರತಿಯೊಂದು ದೇಶವು ನಮ್ಮಿಂದ ಲಾಭ ಮಾಡಿಕೊಳ್ಳುತ್ತಿವೆ. ಸುಂಕದ ಮೂಲಕ ಮಾಡುತ್ತಿದ್ದಾರೆ. ಪ್ರಾಯೋಗಿಕವಾಗಿ ಹೇಳುವುದಾದರೆ ಭಾರತದಲ್ಲಿ ಕಾರು ಮಾರಾಟ