ಒಬಾಮ ಅರೆಸ್ಟ್ ಆಗುವ AI ವಿಡಿಯೋ ಹಂಚಿಕೊಂಡ ಟ್ರಂಪ್ – ಅಮೆರಿಕ ಅಧ್ಯಕ್ಷ ಆಡಿದ್ದೇ ಆಟ ಎಂದ ನೆಟ್ಟಿಗರು

ದಿನನಿತ್ಯ ಒಂದಲ್ಲ ಒಂದು ಸುದ್ದಿಯಲ್ಲಿರೋ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಮತ್ತೊಮ್ಮೆ ದೊಡ್ಡ ಚರ್ಚೆ ಹುಟ್ಟುಹಾಕಿದ್ದಾರೆ. ಟ್ರಂಪ್ ಅವರು ಎಐ ರಚಿತ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಇದು ದೊಡ್ಡ ಮಟ್ಟದಲ್ಲಿ ಕಚ್ಚು ಹತ್ತಿಸಿದೆ. ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ಶ್ವೇತಭವನದಲ್ಲಿ ಬಂಧಿಸುತ್ತಿರುವುದನ್ನು ತೋರಿಸುವ AI ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಇಂಡಿಗೋ ವಿಮಾನದಲ್ಲಿ ತಾಂತ್ರಿಕದೋಷ – ಆಕಾಶದಲ್ಲೇ 40 ನಿಮಿಷ ಸುತ್ತಾಡಿದ ವಿಮಾನ!
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎಐ ರಚಿತ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ಶ್ವೇತಭವನದಲ್ಲಿ ಬಂಧಿಸುತ್ತಿರುವುದನ್ನು ತೋರಿಸುವ ಕೃತಕ ಬುದ್ಧಿಮತ್ತೆ ಆಧಾರಿತ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಭಾರೀ ವಿವಾದಕ್ಕೆ ಕಾರಣವಾಗಿದೆ.
ಟ್ರೂತ್ ಸೋಶಿಯಲ್ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ ಟ್ರಂಪ್, ವಿಶೇಷವಾಗಿ ಅಧ್ಯಕ್ಷರು, ಕಾನೂನಿಗಿಂತ ದೊಡ್ಡವರಲ್ಲ ಎಂದು ಹೇಳಿದ್ದಾರೆ. ನಂತರ ಮಾಜಿ ಅಧ್ಯಕ್ಷ ಜೋ ಬಿಡೆನ್ ಸೇರಿದಂತೆ ಹಲವಾರು ಅಮೇರಿಕನ್ ರಾಜಕಾರಣಿಗಳು ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ನಂತರ ಶ್ವೇತಭವನದಲ್ಲಿ ಒಬಾಮಾ ಅವರನ್ನು ಬಂಧಿಸಿಸುವಂತೆ ಎಐ ವಿಡಿಯೋ ರಚಿಸಿದ್ದಾರೆ. ಇನ್ನೊಂದೆಡೆ ಒಮಾಬಾ ಅವರು ಕೈದಿಯ ವೇಷದಲ್ಲಿರುವುದನ್ನು ತೋರಿಸಲಾಗಿದೆ.
AI ಆಧಾರಿತ ವಿಡಿಯೋದಲ್ಲಿ, ಓವಲ್ ಕಚೇರಿಯಲ್ಲಿ ತಮ್ಮೊಂದಿಗೆ ಕುಳಿತಿದ್ದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರನ್ನು, ಇಬ್ಬರು ಎಫ್ಬಿಐ ಏಜೆಂಟ್ಗಳು ಕೈಕೋಳ ಹಾಕಿ ಬಂಧಿಸುತ್ತಿರುವ ರಚಿಸಲಾಗಿದೆ. ಒಬಾಮ ಬಂಧನದ ಸಮಯದಲ್ಲಿ ಡೊನಾಲ್ಡ್ ಟ್ರಂಪ್ ನಗುತ್ತಿರುವುದನ್ನು ಕಾಣಬಹುದಾಗಿದೆ. ನಕಲಿ ವೀಡಿಯೊವು ಒಬಾಮಾ ಜೈಲಿನ ಬಟ್ಟೆ ಧರಿಸಿ ಕಂಬಿ ಹಿಂದೆ ನಿಂತಿರುವುದಿರೊಂದಿಗೆ ಕೊನೆಗೊಳ್ಳುತ್ತದೆ.
ಹಲವು ವಿಮರ್ಶಕರು ಅಮೆರಿಕದ ಅಧ್ಯಕ್ಷರ ಈ ನಡೆಯನ್ನು ಟೀಕಿಸಿದ್ದಾರೆ. ಅಲ್ಲದೇ ಇದು ದೊಡ್ಡ ಬೇಜವಾಬ್ದಾರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬರಾಕ್ ಒಬಾಮ ಅವರು ಉನ್ನತ ಮಟ್ಟದ ಚುನಾವಣಾ ವಂಚನೆ ಎಸಗಿದ್ದಾರೆ ಎಂಬ ಡೊನಾಲ್ಡ್ ಟ್ರಂಪ್ ಆರೋಪದ ಬೆನ್ನಲ್ಲೇ, ಈ ನಕಲಿ ವಿಡಿಯೋ ಬಿಡುಗಡೆಗೊಂಡಿರುವುದು ಅಮೆರಿಕ ರಾಜಕಾರಣದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ಡೊನಾಲ್ಡ್ ಟ್ರಂಪ್ ಅಹಂಕಾರದಲ್ಲೇ ಕಾಲ ಕಳೆಯುತ್ತಾರೆ ಎಂದು ಈ ಹಿಂದೆ ಬರಾಕ್ ಒಬಾಮ್ ಹೇಳಿದ್ರು.. ಈ ಟ್ರಂಪ್ ಆಡಳಿತದಲ್ಲಿ ಅಮೆರಿಕದಲ್ಲಿ ಸಾಕಷ್ಟು ಬದಲಾವಣೆ ಆಗುವುದ್ದನ್ನ ಇಡೀ ವಿಶ್ವವೇ ಗಮನಿಸುತ್ತಿದೆ.

ನೋಡಿರಿ

