ನೀಲಿ ಚಿತ್ರ ನಟಿ ಜೊತೆ ಸಂಬಂಧ – ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅರೆಸ್ಟ್  

ನೀಲಿ ಚಿತ್ರ ನಟಿ ಜೊತೆ ಸಂಬಂಧ – ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅರೆಸ್ಟ್  

ಅಮೆರಿಕದ ಇತಿಹಾಸದಲ್ಲೇ ಕಂಡು ಕೇಳರಿಯದ ಘಟನೆ ನಡೆದಿದೆ. ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಬಂಧಕ್ಕೊಳಗಾಗಿದ್ದು, ಇದೇ ಮೊದಲ ಬಾರಿಗೆ ಅಮೆರಿಕದ ಅಧ್ಯಕ್ಷರಾಗಿದ್ದವರು ಅರೆಸ್ಟ್ ಆಗಿದ್ದಾರೆ.

ಇದನ್ನೂ ಓದಿ: ಖಾಸಗಿ ವಿಡಿಯೋ ಲೀಕ್ ಮಾಡುವುದಾಗಿ ಕಿಚ್ಚ ಸುದೀಪ್ ಗೆ ಪತ್ರ – ಲೆಟರ್ ನಲ್ಲಿ ಬರೆದಿರೋದೇನು?

ಪೋರ್ನ್​ ಸ್ಟಾರ್​ ಸ್ಟೋರ್ಮಿ ಡೇನಿಯಲ್​ ಜೊತೆಗಿನ ದೈಹಿಕ ಸಂಬಂಧದ ಬಗ್ಗೆ ಮಾಹಿತಿ ಬಹಿರಂಗಪಡಿಸದಂತೆ ಒತ್ತಡ ಹೇರಿ ಆಕೆಗೆ ಹಣ ನೀಡಿರುವ ಆರೋಪಕ್ಕೆ ಸಂಬಂಧಿಸಿ ಡೊನಾಲ್ಡ್ ಟ್ರಂಪ್​​ ಕೋರ್ಟ್​ಗೆ ಶರಣಾಗಿದ್ರು. ಈ ವೇಳೆ ಪೊಲೀಸರು ಟ್ರಂಪ್​​ರನ್ನ್ ಅರೆಸ್ಟ್ ಮಾಡಿದ್ದಾರೆ. ಇನ್ನು ವಿಚಾರಣೆ ವೇಳೆ ಟ್ರಂಪ್​​ ತಮ್ಮ ಮೇಲಿನ ಆರೋಪಗಳನ್ನ ತಳ್ಳಿ ಹಾಕಿದ್ದಾರೆ. ಕೋರ್ಟ್​ನಿಂದ ಹೊರ ಬಂದ ಬಳಿಕ ಟ್ರಂಪ್ ತಮ್ಮ ಬೆಂಬಲಿಗರನ್ನ ಉದ್ದೇಶಿಸಿ ಭಾಷಣ ಮಾಡಿದ್ದು, ಅಧ್ಯಕ್ಷ ಜೋ ಬೈಡೆನ್ ವಿರುದ್ಧ ಕಿಡಿ ಕಾರಿದ್ದಾರೆ.

ಅಮೆರಿಕ ನರಕದತ್ತ ಸಾಗುತ್ತಿದೆ. ನಮ್ಮ ದೇಶದಲ್ಲೀ ಹೀಗೂ ಆಗುತ್ತೆ ಅಂತಾ ಯಾವತ್ತೂ ಅಂದುಕೊಂಡಿರಲಿಲ್ಲ. ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ನಾನು ಗೆಲ್ಲುತ್ತೇನೆ ಅನ್ನೋ ದೃಷ್ಟಿಯಿಂದಲೇ ಬೈಡೆನ್ ಸರ್ಕಾರ ನನ್ನ ವಿರುದ್ಧ ಷಡ್ಯಂತ್ರ ನಡೆಸಿದೆ ಅಂತಾ ಟ್ರಂಪ್ ಹೇಳಿದ್ದಾರೆ. ಅಷ್ಟೇ ಅಲ್ಲ, ಬೈಡೆನ್ ಆಡಳಿತದ ಅವಧಿಯಲ್ಲಿ ಶೀಘ್ರವೇ​ ಅಣ್ವಸ್ತ್ರ ಯುದ್ಧ ನಡೆಯಲಿದೆ. ಬೈಡೆನ್​​ರಿಂದಾಗಿ ಮೂರನೇ ಮಹಾಯುದ್ಧ ಸಂಭವಿಸಲಿದೆ ಅಂತಾ ಟ್ರಂಪ್ ಎಚ್ಚರಿಸಿದ್ದಾರೆ.

suddiyaana