ಸಿಂಧೂರ ಲಕ್ಷಣನಾಗಿ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ ಡಾಲಿ?
ಐತಿಹಾಸಿಕ ಪಾತ್ರದಲ್ಲಿ ಮಿಂಚಲಿದ್ದಾರೆ ಡಾಲಿ ಧನಂಜಯ್

ಸಿಂಧೂರ ಲಕ್ಷಣನಾಗಿ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ ಡಾಲಿ?ಐತಿಹಾಸಿಕ ಪಾತ್ರದಲ್ಲಿ ಮಿಂಚಲಿದ್ದಾರೆ ಡಾಲಿ ಧನಂಜಯ್

ಸ್ಯಾಂಡಲ್‌ವುಡ್ ನಟ ರಾಕ್ಷಸ ಎಂದೇ ಖ್ಯಾತಿ ಪಡೆದಿರುವ ಧನಂಜಯ್ ಗೆ  ಇದೀಗ ಸಖತ್ ಡಿಮ್ಯಾಂಡ್ ಶುರುವಾಗಿದೆ. ಇತ್ತೀಚೆಗಷ್ಟೇ ರಮ್ಯಾ ಜೊತೆಗಿನ `ಉತ್ತರಕಾಂಡ’ ಚಿತ್ರ ಘೋಷಣೆ ಮಾಡಿದ್ದ ಬೆನ್ನಲ್ಲೇ ಮತ್ತೊಂದು ಹೊಸ ಸಿನಿಮಾಗೆ ಡಾಲಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಐತಿಹಾಸಿಕ ಪಾತ್ರದಲ್ಲಿ ಮಿಂಚಲು ಡಾಲಿ ರೆಡಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಬಾಲಿವುಡ್ ಅಂಗಳದಲ್ಲಿ ಮಂಕಾದ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ

ಇತ್ತೀಚೆಗೆ ಡಾಲಿ ನಟಿಸಿರುವ ಸಲಗ, ರತ್ನನ್ ಪ್ರಪಂಚ, ಬೈರಾಗಿ, ಪುಷ್ಪ, ಹೆಡ್‌ಬುಷ್, ಅಷ್ಟು ಚಿತ್ರಗಳಿಗೆ ಪ್ರೇಕ್ಷರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಇದೀಗ  `ರಾಬರ್ಟ್‌’ ಖ್ಯಾತಿಯ ನಿರ್ಮಾಪಕ ಉಮಾಪತಿ  ನಿರ್ಮಾಣದ ಚಿತ್ರಕ್ಕೆ ಡಾಲಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಉತ್ತರ ಕರ್ನಾಟಕದ ಹೋರಾಟಗಾರ `ವೀರ ಸಿಂಧೂರ ಲಕ್ಷ್ಮಣ’ನಾಗಿ ಬರಲು ಡಾಲಿ ಸಜ್ಜಾಗಿದ್ದಾರೆ.

` ನಿರ್ಮಾಪಕ ಉಮಾಪತಿ `ಸಿಂಧೂರ ಲಕ್ಷ್ಮಣʼ ಕಥೆಯನ್ನು ಬರೆದಿದ್ದು, ಕನ್ನಡದ ಸೂಪರ್ ಸ್ಟಾರ್ ನಟನಿಗೆ ನಿರ್ಮಾಣ ಮಾಡಲು ಪ್ಲ್ಯಾನ್ ಮಾಡಿದ್ದರು. ಆದರೆ ಇದೀಗ ಈ ಪಾತ್ರಕ್ಕೆ ಡಾಲಿನೇ ಸೂಕ್ತ ಎಂದೇನಿಸಿ, ಧನಂಜಯ ಅವರನ್ನು ಈ ಸಿನಿಮಾದಲ್ಲಿ ಅಭಿನಯಿಸುವಂತೆ ಕೇಳಲಾಗಿದೆಯಂತೆ. ಕಥೆ ಕೇಳಿ ಡಾಲಿ ಕೂಡ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು, ತರುಣ್ ಸುಧೀರ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರಲಿದೆ.

ಉತ್ತರ ಕರ್ನಾಟಕ ಮತ್ತು ಮುಂಬೈ ಕರ್ನಾಟಕ ಭಾಗಗಳಲ್ಲಿ ಸಿಂಧೂರ ಲಕ್ಷ್ಮಣ ಅಗಾಧವಾಗಿ ಗೌರವಿಸುತ್ತಾರೆ. ಸ್ವಾತಂತ್ರ್ಯಕ್ಕಾಗಿ ತಮ್ಮದೇ ಶೈಲಿಯಲ್ಲಿ ಸಿಂಧೂರ ಲಕ್ಷ್ಮಣ ಹೋರಾಡಿದ್ದರು. ಬಡವರ ಬಳಿಯೇ ತೆರಿಗೆ ವಸೂಲಿ ಮಾಡುತ್ತಿದ್ದ ಬ್ರಿಟಿಷರಿಗೆ ಸಿಂಧೂರ ಲಕ್ಷ್ಮಣ ತಕ್ಕ ಪಾಠ ಕಲಿಸಿದ್ದರು. ಇದೀಗ ಈ ಪಾತ್ರಕ್ಕೆ ಡಾಲಿ ಜೀವ ತುಂಬಲಿದ್ದಾರೆ. ಈಗಾಗಲೇ ಸ್ಕ್ರಿಪ್ಟ್ ವರ್ಕ್ ಕೂಡ ನಡೆಯುತ್ತಿದೆ. ಸದ್ಯದಲ್ಲೇ ಚಿತ್ರದ ಕುರಿತು ಮತ್ತಷ್ಟು ಅಪ್‌ಡೇಟ್ ಸಿಗಲಿದೆ ಎನ್ನಲಾಗಿದೆ.

suddiyaana