ನೀರು ಕುಡಿದ ನಂತರ ಯಾರ ಸಹಾಯವೂ ಇಲ್ಲದೇ ನಲ್ಲಿ ಬಂದ್‌ ಮಾಡುತ್ತೆ ಈ ಶ್ವಾನ!

ನೀರು ಕುಡಿದ ನಂತರ ಯಾರ ಸಹಾಯವೂ ಇಲ್ಲದೇ ನಲ್ಲಿ ಬಂದ್‌ ಮಾಡುತ್ತೆ ಈ ಶ್ವಾನ!

ಕೆಲ ಪ್ರಾಣಿಗಳ ಹಾವಭಾವ, ವರ್ತನೆಗಳು ಮನುಷ್ಯರನ್ನೇ ಹೋಲುತ್ತವೆ. ಅವುಗಳು ತಮ್ಮ ಮುಂದೆ ಇರುವವರು ಏನು ಮಾಡುತ್ತಿದ್ದಾರೆ ಅನ್ನೋದನ್ನು ಗಮನಿಸಿ ಅದನ್ನೇ ಅನುಕರಣೆ ಮಾಡುತ್ತವೆ. ಇವುಗಳ ವರ್ತನೆ ನೋಡಿದಾಗ ಮನುಷ್ಯರಿಗಿಂತ ಪ್ರಾಣಿಗಳಿಗೆ ಬುದ್ದಿ ಹೆಚ್ಚು ಅಂತಾ ಅನ್ನಿಸಿ ಬಿಡುತ್ತದೆ. ಇದಕ್ಕೆ ಸಾಕ್ಷಿ ಅನ್ನುವಂತೆ ಇಲ್ಲೊಂದು ಮುದ್ದಾದ ನಾಯಿಯ ವಿಡಿಯೋ ಭಾರಿ ವೈರಲ್‌ ಆಗುತ್ತಿದೆ.

ವೈರಲ್‌ ಆದ ವಿಡಿಯೋವನ್ನು ಸಾಮಾಜಿಕ ಜಾಲತಾಣ ರೆಡ್ಡಿಟ್​ನಲ್ಲಿ ಪೋಸ್ಟ್ ಮಾಡಲಾಗಿದೆ. ವೈರಲ್‌ ಆದ ವಿಡಿಯೋದಲ್ಲಿ ಕಪ್ಪು ಬಣ್ಣದ ನಾಯಿಯೊಂದು ನಲ್ಲಿಯನ್ನು ನೀರು ಬಿಟ್ಟು ಕುಡಿಯುತ್ತದೆ. ಬಳಿಕ ಆ ನಾಯಿ ಯಾರ ಸಹಾಯವಿಲ್ಲದೇ ಬಂದ್‌ ಮಾಡುತ್ತದೆ. ನೆಟ್ಟಿಗರು ಈ ವಿಡಿಯೋ ನೋಡಿ ಪರಮಾಶ್ಚರ್ಯಗೊಂಡಿದ್ದಾರೆ. ಮನುಷ್ಯರಿಗಿಂತ ಜವಾಬ್ದಾರಿಯುತವಾಗಿ ವರ್ತಿಸುತ್ತಿದೆ.ಇದು ತುಂಬಾ ಬುದ್ಧಿವಂತ ನಾಯಿ ಎಂದು ಶ್ಲಾಘಿಸುತ್ತಿದ್ದಾರೆ.

ಇದನ್ನೂ ಓದಿ: ಎಮ್ಮೆ ಮೇಲೆ ಬಂದ ಶ್ವಾನ ಮಹಾರಾಜರಿಗೆ ದಾರಿ ಬಿಡಿ..! – ಎಮ್ಮೆಗೊಂದು ಕಾಲ.. ನಾಯಿಗೊಂದು ಕಾಲ ಬಂದೇ ಬಿಡ್ತು..!

ತುಂಬಾ ಒಳ್ಳೆಯ ಹುಡುಗನಿವ, ನೀರು ಕುಡಿದ ಮೇಲೆ ನಲ್ಲಿಯನ್ನು ತಿರುಗಿಸುವುದೂ ಇವನಿಗೆ ಗೊತ್ತಿದೆ ಎಂದಿದ್ಧಾರೆ ಒಬ್ಬರು. ಜಲಸಂರಕ್ಷಣೆಯಲ್ಲಿ ಮನುಷ್ಯರಿಗಿಂತ ಹೆಚ್ಚು ತಿಳಿವಳಿಕೆ ನಾಯಿಗಿದೆ ಎಂದಿದ್ದಾರೆ ಇನ್ನೊಬ್ಬರು. ನಿಜಕ್ಕೂ ಈ ವಿಡಿಯೋದಿಂದ ನಾನು ಪ್ರಭಾವಿತಗೊಂಡಿದ್ದೇನೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಬಹುಶಃ ನಾಯಿಗಳಿಗೆ ತರಬೇತಿ ಕೊಟ್ಟರೆ ಮನುಷ್ಯ ಮಾಡುವ ಅರ್ಧದಷ್ಟು ಕೆಲಸಗಳನ್ನು ಅವು ಮಾಡಬಲ್ಲವೇನೋ ಎಂದಿದ್ದಾರೆ ಒಬ್ಬರು. ಈಗಾಗಲೇ ನಾಯಿ, ಕೋತಿ ಮನುಷ್ಯರನ್ನು ಅನುಕರಿಸುವಲ್ಲಿ ಮೊದಲ ಸ್ಥಾನದಲ್ಲಿವೆ ಎಂದಿದ್ದಾರೆ ಇನ್ನೊಬ್ಬರು. ನಮ್ಮ ಮನೆಯ ಬೆಕ್ಕು ಕೂಡ ಹೀಗೆಯೇ ಜವಾಬ್ದಾರಿಯಿಂದ ವರ್ತಿಸುತ್ತದೆ. ನೀರು ಕುಡಿದ ಮೇಲೆ ಮೂತಿಯಿಂದ ನಲ್ಲಿಯನ್ನು ಬಂದ್​ ಮಾಡುತ್ತದೆ ಎಂದಿದ್ದಾರೆ ಮಗದೊಬ್ಬರು.

He opened the tap like, he pays the rent!
by inDOG

Shwetha M