ಈ ಊರಿಗೆ ನಾನೇ ರಾಜ.. ಆಟೋ ನನ್ನ ಸಿಂಹಾಸನ!- ರಿಕ್ಷಾ ಮೇಲೆ ಸವಾರಿ ಮಾಡಿದ ನಾಯಿ!

ಈ ಊರಿಗೆ ನಾನೇ ರಾಜ.. ಆಟೋ ನನ್ನ ಸಿಂಹಾಸನ!- ರಿಕ್ಷಾ ಮೇಲೆ ಸವಾರಿ ಮಾಡಿದ ನಾಯಿ!

ಶ್ವಾನಗಳು ಅಂದ್ರೆನೇ ಹಾಗೆ. ಎಲ್ಲಾದ್ರೂ ಒಂಚೂರು ಜಾಗ ಸಿಕ್ಕಿದ್ರೆ ಸಾಕು. ಅಲ್ಲೇ ಕುಳಿತುಕೊಳ್ಳುತ್ತವೆ. ಏನೇ ಮಾಡಿದ್ರೂ ಅಲ್ಲಿಂದ ಎದ್ದು ಹೋಗಲ್ಲ. ಇದೀಗ ಇಲ್ಲೊಂದು ನಾಯಿ ಆಟೋವನ್ನೇ ಸಿಂಹಾಸನ ಮಾಡಿಕೊಂಡಿದೆ. ಆಟೋ ಮೇಲೆ ಹತ್ತಿ ಕುಳಿತುಕೊಂಡಿದೆ. ಇದ್ರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ: ಮಕ್ಕಳ ಪಾಲಿಗೆ ಯಮನಾದ ಸ್ಕೂಲ್‌ ಬಸ್!‌ – ತಂದೆ ಎದುರೇ ಕಂದಮ್ಮಗಳ ದುರಂತ ಅಂತ್ಯ

ಪುಣೆಯ ದಾಂಗೆ ಚೌಕ್ ಬಳಿ ಆಟೋ ರಿಕ್ಷಾದ ಮೇಲ್ಛಾವಣಿಯ ಮೇಲೆ ನಾಯಿಯೊಂದು ಅತ್ಯಂತ ಗತ್ತಿನಿಂದ ಸವಾರಿ ಮಾಡಿದೆ. ರಸ್ತೆಯಲ್ಲಿ ಎಷ್ಟೇ ವಾಹನ ವಾಹನಗಳು ಸಾಗುತ್ತಿದ್ದರೂ ಈ ಶ್ವಾನ ಮಾತ್ರ ಆತ್ಮವಿಶ್ವಾಸದಿಂದ ಕುಳಿತಿದೆ. ಚಲಿಸುವ ಆಟೋ ಮೇಲೆ ಕೂಲ್‌ ಆಗಿ ಕುಳಿತಿರುವ ವಿಡಿಯೋ ನೋಡಿ ಜನ ಶಾಕ್‌ ಆಗಿದ್ದಾರೆ. ಇದ್ರ ವಿಡಿಯೋ ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ವೈರಲ್‌ ಆದ ವಿಡಿಯೋದಲ್ಲಿ ಜನನಿಬಿಡ ರಸ್ತೆಯಲ್ಲಿ ಈ ಕ್ಲಿಪ್ ಪ್ರಾರಂಭವಾಗುತ್ತದೆ. ಆಟೋ ರಿಕ್ಷಾದ ಮೇಲೆ ನಾಯಿ ಛಾವಣಿಯ ಮೇಲೆ ಆರಾಮವಾಗಿ ಕುಳಿತಿದೆ. ನಾಯಿ ಯಾವುದಕ್ಕೂ ಭಯ ಪಟ್ಟಿಲ್ಲ. ಬೊಗಳುತ್ತಿಲ್ಲ ಅಥವಾ ಕೆಳಗೆ ಜಿಗಿಯಲು ಪ್ರಯತ್ನಿಸುತ್ತಿಲ್ಲ.ಅದು ಸುಮ್ಮನೆ ಕುಳಿತುಕೊಂಡು ಜನರನ್ನು ವೀಕ್ಷಣೆ ಮಾಡು ತ್ತಿದೆ. ಹಲವರು ಆ ಕ್ಷಣವನ್ನು ಜನರು ತಮಾಷೆಯಾಗಿ ಕಂಡುಕೊಂಡರು, ಇತರರು ಪ್ರಾಣಿಯ ಸುರಕ್ಷತೆಯ ಬಗ್ಗೆ ಪ್ರಶ್ನಿಸಿದ್ದಾರೆ.

Shwetha M