ಕತೆ ಎಷ್ಟು ಸೊಗಸಾಗಿದೆ.. ಪುಟ್ಟ ಕಂದನ ಜೊತೆ ಕೂತು ಕತೆ ಕೇಳಿದ ಶ್ವಾನ!

ಕತೆ ಎಷ್ಟು ಸೊಗಸಾಗಿದೆ.. ಪುಟ್ಟ ಕಂದನ ಜೊತೆ ಕೂತು ಕತೆ ಕೇಳಿದ ಶ್ವಾನ!

ಮೊದ್ಲೆಲ್ಲಾ ಮಕ್ಕಳಿಗೆ ಕತೆ ಕೇಳುವುದಂದ್ರೆ ತುಂಬಾ ಇಷ್ಟ. ದೊಡ್ಡವರು ಹೇಳಿದ ಕತೆ ಅರ್ಥ ಆಗುತ್ತಾ ಇಲ್ವೋ ಗೊತ್ತಿಲ್ಲ. ಆದ್ರೆ ಏನೇ ಹೇಳಿದ್ರೂ ಕೇಳಿಕೊಳ್ತಿದ್ರು.. ಆದ್ರೆ ಈಗಿನ ಮಕ್ಕಳು ಹಾಗಲ್ಲ.. ಮೂರ್ಹೊತ್ತು ಮೊಬೈಲ್‌ ಹಿಡ್ಕೊಂಡು ಕೂತಿರ್ತಾರೆ. ಆದ್ರೆ ಇಲ್ಲೊಬ್ಬಳು ಮಹಿಳೆ, ಪುಟ್ಟ ಕಂದನಿಗೆ ಕತೆ ಹೇಳಿದ್ರೆ, ಪಕ್ಕದಲ್ಲಿ ಕುಳಿತಿದ್ದ ಶ್ವಾನ ಕೂಡ ಕೇಳಿಸಿಕೊಳ್ತಿದೆ. ಇದ್ರ ಕ್ಯೂಟ್‌ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗ್ತಿದೆ.

ಇದನ್ನೂ ಓದಿ: ವೀರೇಂದ್ರ ಪಪ್ಪಿ ಲಾಕರ್‌ ರಹಸ್ಯ! – ಶಾಸಕನ ಚಿನ್ನದ ಖಜಾನೆ ಕಂಡು ಬೆಚ್ಚಿಬಿದ್ದ ಅಧಿಕಾರಿಗಳು!

ಈಗಿನ ಮಕ್ಕಳಿಗೆ ಮೊಬೈಲ್‌ ನಲ್ಲಿ ಕಾರ್ಟೂನ್‌ ಪ್ಲೇ ಮಾಡಿದ್ರೆ ಸಾಕು.. ಅದ್ರಲ್ಲೇ ಮುಳುಗಿ ಹೋಗ್ತಾರೆ. ನೋಡಿದ್ದು ಸಾಕು.. ಆಫ್‌ ಮಾಡೋಣ ಅಂತಾ ಹತ್ರ ಹೋದ್ರೆ ರಂಪಾಟ ಮಾಡ್ತಾರೆ. ಆದ್ರೆ ಇಲ್ಲೊಬ್ಬಳು ಮಹಿಳೆ ಮಗುವಿಗೆ ಕತೆ ಹೇಳಿದ್ದಾಳೆ. ಮಗು ಕೂಡ ಅಮ್ಮ ಹೇಳಿದ್ದನ್ನೆಲ್ಲಾ ಕೇಳಿಸಿಕೊಳ್ತಿದೆ. ಪಕ್ಕದಲ್ಲಿದ್ದ ಶ್ವಾನ ಕೂಡ ತಲೆ ಅಲ್ಲಾಡಿಸ್ತಿದೆ.. ಇದ್ರ ವಿಡಿಯೋವನ್ನ @renegadethegooddog ಹೆಸರಿನ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದೆ.

ವೈರಲ್‌ ಆದ ವಿಡಿಯೋದಲ್ಲಿ ಡೆಲೈನ್ ನಿಕೋಲಾ ಎಡ್ವರ್ಡ್ಸ್ ಎಂಬ ಮಹಿಳೆ ಯು ಅಂಡ್ ಮಿ ಕಥೆಯನ್ನು ಓದುವುದರೊಂದಿಗೆ ಈ ವಿಡಿಯೋವು ಪ್ರಾರಂಭವಾಗುತ್ತದೆ. ಮನೆಯ ಮುದ್ದಿನ ಶ್ವಾನ ರೆನೆಗೇಡ್ ಹಾಗೂ ಪುಟ್ಟ ಕಂದಮ್ಮ ಈ ಮಹಿಳೆಯ ಮಡಿಲಿನಲ್ಲಿ ಕುಳಿತುಕೊಂಡಿರುವುದನ್ನು ಕಾಣಬಹುದು. ಮಹಿಳೆಯೂ ಪ್ರತಿಯೊಂದು ಸಾಲುಗಳನ್ನು ಓದುತ್ತಾ ಹೋದಂತೆ ಪುಟದ ಪ್ರತಿ ತಿರುವಿನಲ್ಲೂ ಶ್ವಾನ ರೆನೆಗೇಡ್‌ ಬಾಲ ಅಲ್ಲಾಡಿಸುತ್ತಾ ಪ್ರತಿಕ್ರಿಯೆ ನೀಡುವುದನ್ನು ನೋಡಬಹುದು. ಕೊನೆಯ ಸಾಲನ್ನು ಡೆಲೈನ್ ಹೇಳುತ್ತಿದ್ದಂತೆ ರೆನೆಗೇಡ್ ನಿಧಾನವಾಗಿ ತನ್ನ ತಲೆಯನ್ನು ಪುಸ್ತಕದತ್ತ ನೋಡುತ್ತದೆ. ಸದ್ಯ ಈ ವಿಡಿಯೋ ಸೋಶಿಯಲ್‌ ಮೀಡಿಯಾ ಬಳಕೆದಾರರ ಮೆಚ್ಚುಗೆ ಗಳಿಸಿದೆ. ಪ್ರತಿಯೊಂದು ಸಾಲನ್ನು ಎಷ್ಟು ಮುದ್ದಾಗಿ ಈ ಶ್ವಾನವು ಆಲಿಸುತ್ತಿದೆ. ಈ ದೃಶ್ಯ ಮುದ್ದಾಗಿದೆ ಎಂದು ಕಮೆಂಟ್‌ ಮಾಡ್ತಿದ್ದಾರೆ.

Shwetha M