ಮುದ್ದಿನ ಶ್ವಾನ ನೋಡಿಕೊಳ್ಳುವವರು ಬೇಕಾಗಿದ್ದಾರೆ..! – ಒಂದು ಕೋಟಿ ರೂಪಾಯಿ ಸಂಬಳ ನೀಡಲಾಗುವುದು..!

ಮುದ್ದಿನ ಶ್ವಾನ ನೋಡಿಕೊಳ್ಳುವವರು ಬೇಕಾಗಿದ್ದಾರೆ..! – ಒಂದು ಕೋಟಿ ರೂಪಾಯಿ ಸಂಬಳ ನೀಡಲಾಗುವುದು..!

ಮನುಷ್ಯ ಮತ್ತು ನಾಯಿಯ ಒಡನಾಟ ಮತ್ತು ಬಾಂಧವ್ಯ ವಿಶೇಷವಾದದ್ದು. ನಾಯಿಯನ್ನ ಮನುಷ್ಯನು ಪ್ರೀತಿಯನ್ನ ಹಂಚುವ, ಒಂಟಿತನವನ್ನ ದೂರವಾಗಿಸುವ ವಿಶೇಷ ಸ್ನೇಹಿತನ ರೀತಿಯಲ್ಲಿ ನೋಡುತ್ತಾನೆ. ಹಾಗಾಗಿ ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ನಾಯಿಯೆಂದರೆ ಅಪಾರ ಕಾಳಜಿಯು ಇರುತ್ತದೆ. ತಮ್ಮ ಮನೆಯ ಸದಸ್ಯನೆಂದೇ ಆತನನ್ನ ನೋಡಿಕೊಳ್ಳುತ್ತಾರೆ. ಆದರೆ ಇಲ್ಲೊಂದು ಕುಟುಂಬದ ಶ್ವಾನ ಪ್ರೀತಿಯನ್ನ ಕೇಳಿದ್ರೆ ನೀವೂ ಬೆರಗಾಗುತ್ತೀರಿ. ವಿಚಿತ್ರವೆಂದು ಅನ್ನಿಸಲೂಬಹುದು. ತಮ್ಮ ಪ್ರೀತಿಯ ನಾಯಿಯನ್ನ ನೋಡಿಕೊಳ್ಳಲು ನಾಯಿ ದಾದಿಗಳಿಗಾಗಿ ಹುಡುಕಾಟ ನಡೆಸುತ್ತಾ ಇದೆ. ಅವರಿಗಾಗಿ ವರುಷಕ್ಕೆ ಬರೋಬ್ಬರಿ ಒಂದು ಕೋಟಿ ಸಂಬಳ ಕೊಡಲು ಕೂಡಾ ಸಿದ್ದವಾಗಿದ್ದಾರೆ.

ಇದನ್ನೂ ಓದಿ: ನಾಯಿ ಮರಿ, ಆಮೆಯ ಫುಟ್ಬಾಲ್ – ಗೋಲ್ ಹೊಡೆದಿದ್ದು ಯಾರು?

ಅಮೇರಿಕಾದ ಬಿಲಿಯನರಿ ಕುಟುಂಬವೊಂದು ತಮ್ಮ ಪ್ರೀತಿಯ ಎರಡು ನಾಯಿಗಳನ್ನ ನೋಡಿಕೊಳ್ಳಲು ದಾದಿಯನ್ನ ನೇಮಿಸಿಕೊಳ್ಳುವ ಸಲುವಾಗಿ ಒಂದು ಕೋಟಿ ಸಂಬಳದ ಜಾಹೀರಾತು ನೀಡಿದೆ. ಈ ಜಾಹೀರಾತಿನಲ್ಲಿ ತಮ್ಮ ಮುದ್ದಿನ ನಾಯಿಗಳ ಮೇಲೆ ಕಾಳಜಿ ಮತ್ತು ಗಮನ ನೀಡಲು ಮನವಿ ಮಾಡಿದ್ದಾರೆ. ಪೂರ್ಣ-ಸಮಯದ ದಾದಿಯು ನಾಯಿಯ ಅವಶ್ಯಕತೆಗಳನ್ನು ಪೂರೈಸಬೇಕು, ದಾದಿಯು ಸೆಂಟ್ರಲ್ ಲಂಡನ್‌ನ ನೈಟ್ಸ್‌ಬ್ರಿಡ್ಜ್‌ನಲ್ಲಿ ಕುಟುಂಬದೊಂದಿಗೆ ಇರಬೇಕಾಗುತ್ತದೆ.  ಕುಟುಂಬವು ಕೆಲಸ ನಿಮಿತ್ತ ಬೇರೆ ಬೇರೆ ದೇಶಗಳಿಗೆ ಪ್ರಯಾಣಿಸಿದಾಗಲೆಲ್ಲ ಮುದ್ದು ಸಾಕುಪ್ರಾಣಿಗಳೊಂದಿಗೆ ತಾವು ಕೂಡಾ ಪ್ರಯಾಣಿಸಬೇಕಾಗುತ್ತದೆ.

ಇತರ ನಾಯಿಗಳೊಂದಿಗೆ ಪ್ಲೇಡೇಟ್‌ಗಳನ್ನು ಆಯೋಜಿಸಬೇಕು, ಆಹಾರ, ವೆಟ್ ಅಪಾಯಿಂಟ್‌ಮೆಂಟ್‌ಗಳು ಮತ್ತು ಅವರ ಆರೋಗ್ಯದ ವಿವರವಾದ ದಾಖಲೆಗಳನ್ನು ಇಟ್ಟುಕೊಳ್ಳಬೇಕು ಎಂದು ಜಾಹೀರಾತಿನಲ್ಲಿ ಹೇಳಲಾಗಿದೆ. ವರುಷಕ್ಕೆ  ಆರು ವಾರಗಳ ಕಾಲ  ರಜೆಯೂ ಇರುತ್ತದೆ. ನಾಯಿಗಳ ಯೋಗಕ್ಷೇಮವನ್ನು ನೋಡಿಕೊಳ್ಳಲು ದಾದಿಯು ತಮ್ಮ ಖಾಸಗಿ ಜೀವನವನ್ನು ಬಿಡಬೇಕಾಗುತ್ತದೆ ಎಂದು ಹೇಳಿಕೊಂಡಿದೆ. ಅಂದ ಹಾಗೇ ಈ ಜಾಹೀರಾತು ಪೋಸ್ಟ್ ಆಗುತ್ತಿದ್ದಂತೆ ಸುಮಾರು 300 ಕ್ಕೂ ಹೆಚ್ಚಿನ ಅರ್ಜಿಗಳು ಬಂದಿವೆ ಎಂದು ನೇಮಕಾತಿ ಏಜನ್ಸಿಯು ಹೇಳುತ್ತಿದೆ.

suddiyaana