ಪರಪ್ಪನ ಅಗ್ರಹಾರ ಬಳಿ ಕರಡಿ ಬಂದಿದೆ ಎಂದು ಕರೆ! – ಸ್ಥಳದಲ್ಲಿ ಇದ್ದಿದ್ದು ಜಾಂಬವಂತ ಅಲ್ಲ ನಾಯಿ!

ಅರಣ್ಯ ನಾಶ ಆಗ್ತಿದ್ದಂತೆ ಕಾಡು ಪ್ರಾಣಿಗಳು ಆಹಾರ ಹುಡುಕುತ್ತಾ ನಾಡಿನತ್ತ ಮುಖಮಾಡಿವೆ. ಸಾಕಷ್ಟು ಕಡೆಗಳಲ್ಲಿ ಕಾಡಾನೆ, ಹುಲಿ, ಚಿರತೆ, ಕರಡಿ ಮುಂತಾದ ಪ್ರಾಣಿಗಳು ಆಗಾಗ ಕಾಣಿಸಿಕೊಳ್ತಿವೆ. ಬೆಂಗಳೂರಿನ ಕೆಲ ಪ್ರದೇಶಗಳಲ್ಲೂ ಚಿರತೆ, ಕರಡಿಗಳು ಆಗಾಗ ಪ್ರತ್ಯಕ್ಷವಾಗುತ್ತಿರುವತ್ತವೆ. ಇದೀಗ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ನಾಯಿಯನ್ನ ಕರಡಿ ಎಂದು ಭಾವಿಸಿ ಪೊಲೀಸರಿಗೆ ಕರೆ ಮಾಡಿರುವ ಘಟನೆ ನಡೆದಿದೆ.
ಇದನ್ನೂ ಓದಿ: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 50% ಟ್ರಾಫಿಕ್ ಫೈನ್ ಡಿಸ್ಕೌಂಟ್! – 13 ದಿನಗಳಲ್ಲಿ 35.72 ಕೋಟಿ ರೂ. ಸಂಗ್ರಹ!
ಹೌದು, ರಾಜಧಾನಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಬಳಿ ಈ ಘಟನೆ ನಡೆದಿದೆ. ಸಾಕಿದ ನಾಯಿಯೊಂದು ಪರಪ್ಪನ ಅಗ್ರಹಾರ ಜೈಲಿನ ಬಳಿ ಓಡಾಡಿತ್ತು. ಇದನ್ನ ಅಪಾರ್ಟ್ಮೆಂಟ್ ನಿವಾಸಿಗಳು ಮೊಬೈಲ್ ನಲ್ಲಿ ಸೆರೆಹಿಡಿದಿದ್ದರು. ನಂತರ ದೂರದಿಂದ ನಾಯಿಯನ್ನ ಕಂಡು ಕರಡಿ ಎಂದು ಹೇಳಿ ಸ್ಥಳೀಯರಲ್ಲಿಆತಂಕ ಹುಟ್ಟಿಸಿದ್ದರು. ಇದ್ರಿಂದಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕರಡಿ ಬಂದಿದೆ ಎಂದು ಸುಳ್ಳು ಸುದ್ದಿ ಹಬ್ಬಿದೆ.
ಕೂಡಲೇ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅಲ್ಲಿರೋದು ಕರಡಿ ಅಲ್ಲ.. ನಾಯಿ ಅನ್ನೋದು ಪೊಲೀಸರಿಗೆ ಗೊತ್ತಾಗಿದೆ. ಬಳಿಕ ಕೆಸರಿನಲ್ಲಿ ಸಿಲುಕಿದ್ದ ನಾಯಿ ರಕ್ಷಣೆ ಮಾಡಿ ಮಾಲೀಕರಿಗೆ ಪೊಲೀಸರು ಒಪ್ಪಿಸಿದ್ದಾರೆ.

ನೋಡಿರಿ

