6 ತಿಂಗಳ ಹಿಂದೆ ಯುವಕನಿಗೆ ನಾಯಿ ಕಡಿತ: ಆತನಲ್ಲಾದ ಬದಲಾವಣೆ ಕಂಡು ವೈದ್ಯರು ಶಾಕ್

6 ತಿಂಗಳ ಹಿಂದೆ ಯುವಕನಿಗೆ ನಾಯಿ ಕಡಿತ: ಆತನಲ್ಲಾದ ಬದಲಾವಣೆ ಕಂಡು ವೈದ್ಯರು ಶಾಕ್

ಒಡಿಶಾ: ನಾಯಿ ಕಚ್ಚಿದರೆ ಅಯ್ಯೋ ಏನು ಆಗುವುದಿಲ್ಲ ಎಂದು ಅನೇಕರು ನಿರ್ಲಕ್ಷ್ಯ ಮಾಡುತ್ತಾರೆ. ಇದರಿಂದಾಗಿ ಸಾವು ಸಂಭವಿಸುವ ಸಾಧ್ಯತೆಯೂ ಇದೆ. ಆದರೆ ಒಡಿಶಾದ ಕಟಕ್ ನ ಉದಯಪುರ ಎಂಬಲ್ಲಿ ನಡೆದ ಘಟನೆ ಆತಂಕಕಾರಿಯಾಗಿದ್ದು, ವೈದ್ಯರನ್ನೂ ಬೆಚ್ಚಿಬೀಳಿಸುವಂತಿದೆ.

ಇದನ್ನೂ ಓದಿ: ಮೂನ್ ಲೈಟಿಂಗ್ ಉದ್ಯೋಗಿಗಳಿಗೆ ಎಚ್ಚರಿಕೆ ನೀಡಿದ ಆದಾಯ ತೆರಿಗೆ ಇಲಾಖೆ!

ಉದಯಪುರದ ನಿವಾಸಿ, ರಾಜೇಶ್ ಬ್ಯೂರ ಎಂಬಾತನಿಗೆ ನಾಯಿ ಕಚ್ಚಿದ್ದು, ಅದನ್ನು ನಿರ್ಲಕ್ಷ್ಯ ಮಾಡಿದ್ದಾನೆ. ಇದರಿಂದಾಗಿ ಆತ ನ. 1 ರಿಂದ ನಾಯಿಯಂತೆ ಬೊಗಳಲು ಆರಂಭಿಸಿದ್ದಾನೆ.

ರಾಜೇಶ್ ನ ನಡೆಯನ್ನು ಕಂಡು ಆತನ ಪೋಷಕರು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಆತನ ಸ್ಥಿತಿ ಮತ್ತಷ್ಟು ಹದಗೆಟ್ಟಿದ್ದರಿಂದ ವೈದ್ಯರ ಸಲಹೆಯಂತೆ ಕಟಕ್ ಮೂಲದ ಎಸ್ ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.

ಈತನನ್ನು ಪರೀಕ್ಷಿಸಿದ ವೈದ್ಯರು, ನಾಯಿ ಕಚ್ಚಿದ ಬಳಿಕ ಚಿಕಿತ್ಸೆ ಪಡೆದುಕೊಳ್ಳದ ಕಾರಣ ಆತ ಹೈಡ್ರೋಫೋಬಿಯಾ ಅಥವಾ ನೀರಿನ ಭಯವನ್ನು ಹೊಂದಿದ್ದಾನೆ. ಅದರ ಲಕ್ಷಣಗಳಲ್ಲಿ ಲಾರಿಂಗೊಸ್ಪಾಸ್ಮ್ (ಲಾರಿಂಗೊಸ್ಪಾಸ್ಮ್ ಎನ್ನುವುದು ಧ್ವನಿ ಪೆಟ್ಟಿಗೆಯ ಸೆಳೆತ ಸ್ಥಿತಿಯಾಗಿದ್ದು, ಇದರಿಂದ ತಾತ್ಕಾಲಿಕವಾಗಿ  ಮಾತನಾಡಲು ಅಥವಾ ಉಸಿರಾಡಲು ಕಷ್ಟವಾಗುತ್ತದೆ) ಕೂಡ ಇರುತ್ತದೆ. ಈ ಲಾರಿಂಗೊಸ್ಪಾಸ್ಮ್ ನ ಕಾರಣದಿಂದಾಗಿ, ರೋಗಿಯು ನಾಯಿಯಂತೆ ಕೂಗುತ್ತಾನೆ ಎಂದು ವೈದ್ಯರು ತಿಳಿಸಿದರು.

suddiyaana