ಇದೆಂಥಾ ಎಡವಟ್ಟು! – ನಾಯಿಗೆ ವಾಸಸ್ಥಳ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!

ಇದೆಂಥಾ ಎಡವಟ್ಟು! – ನಾಯಿಗೆ ವಾಸಸ್ಥಳ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!

ಕೆಲವೊಂದು ದಾಖಲೆಗಳನ್ನ ಬರೆಸುವಾಗ ಸಣ್ಣ ಪುಟ್ಟ ತಪ್ಪು ಆಗೋದು ಕಾಮನ್..‌ ದಾಖಲೆಗಳಲ್ಲಿ ಹೆಸರು ತಪ್ಪಾಗಿರುವುದು, ಸ್ಪೆಲ್ಲಿಂಗ್‌ ಮಿಸ್ಟೆಕ್‌ ಆಗುತ್ತೆ. ಆದ್ರೆ ಇಲ್ಲೊಂದು ಕಡೆ ಮನುಷ್ಯನಿಗೆ ವಾಸಸ್ಥಳ ಪ್ರಮಾಣ ಪತ್ರ ಕೊಡುವ ಬದಲು ನಾಯಿಗೆ ವಾಸಸ್ಥಳ ಪ್ರಮಾಣಪತ್ರ ಸಿಕ್ಕಿದೆ. ಸರ್ಕಾರಿ ಅಧಿಕಾರಿಗಳ ಎಡವಟ್ಟು ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: ಮರಣದಂಡನೆಯಿಂದ ನಿಮಿಷಾ ಪ್ರಿಯಾಗೆ ಸಂಪೂರ್ಣ ಮುಕ್ತಿ – ಭಾರತೀಯ ಗ್ರ್ಯಾಂಡ್ ಮುಫ್ತಿ ಕಚೇರಿ ಅಧಿಕೃತ ಹೇಳಿಕೆ

ಈ ಘಟನೆ ಬಿಹಾರದಲ್ಲಿ ನಡೆದಿದೆ.  ಪಾಟ್ನಾದ ಮಸೌರ್ಹಿಯ ನಿವಾಸಿ ಕುಟ್ಟಾಬಾಬು ಮತ್ತು ಕುಟಿಯಾ ದೇವಿ ಅವರ ಪುತ್ರ ಡಾಗ್​ ಬಾಬು ಎಂಬಾತನ ಹೆಸರಿನಲ್ಲಿ ಈ ವಾಸಸ್ಥಳ ಪ್ರಮಾಣಪತ್ರವನ್ನು ಜುಲೈ 24ರಂದು ನೀಡಲಾಗಿದೆ. ಕಂದಾಯ ಅಧಿಕಾರಿಗಳು ಈ ದಾಖಲೆಗೆ ಸಹಿ ಕೂಡ ಹಾಕಿದ್ದಾರೆ. ಆದ್ರೆ ಈ ವಾಸಸ್ಥಳ ಪ್ರಮಾಣ ಪತ್ರದಲ್ಲಿ ಡಾಗ್‌ ಬಾಬು ಬದಲು ನಾಯಿಗೆ ಕೊಟ್ಟಿದ್ದಾರೆ ಅಧಿಕಾರಿಗಳು. ಇದ್ರ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದ್ದು, ಅಧಿಕಾರಿಗಳು ಮಾಡಿದ ಈ ಎಡವಟ್ಟು ನಗು ತರಿಸುವುದರ ಜೊತೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್​ ಆಗಿ ಟೀಕೆಗೂ ಗುರಿಯಾಗಿದೆ. ಬಳಿಕ, ಪ್ರಮಾಣಪತ್ರವನ್ನು ರದ್ದು ಮಾಡಲಾಗಿದ್ದು, ಇದನ್ನು ಮಂಜೂರು ಮಾಡಿದ ಅಧಿಕಾರಿಗಳ ವಿರುದ್ಧ ತನಿಖೆಗೂ ಆದೇಶಿಸಲಾಗಿದೆ.

ಈ ತಪ್ಪಿನ ಕುರಿತು ಉಪ-ವಿಭಾಗೀಯ ಅಧಿಕಾರಿ ಮಟ್ಟದಲ್ಲಿ ತನಿಖೆ ಮಾಡಲು ಪಾಟ್ನಾ ಜಿಲ್ಲಾಡಳಿತ ಆದೇಶಿಸಿದೆ. ಘಟನೆಯ ಬಗ್ಗೆ ವಿವರವಾದ ತನಿಖೆ ನಡೆಸಿ 24 ಗಂಟೆಗಳ ಗಡುವು ನೀಡಲಾಗಿದೆ. ತಪ್ಪಿತಸ್ಥ ಸಿಬ್ಬಂದಿ ಮತ್ತು ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ಹೇಳಿದೆ.

ಇನ್ನು  ನಾಯಿಗೆ ವಾಸಸ್ಥಳ ಪ್ರಮಾಣಪತ್ರ ನೀಡಿದ್ದು, ಚುನಾವಣೆ ಹೊಸ್ತಿಲಲ್ಲಿರುವ ಬಿಹಾರದಲ್ಲಿ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ವಿರೋಧ ಪಕ್ಷದ ನಾಯಕರು ಸರ್ಕಾರದ ವಿರುದ್ಧ ಟೀಕಿಸುತ್ತಿದ್ದಾರೆ. ಸ್ವರಾಜ್ ಪಕ್ಷದ ನಾಯಕ ಯೋಗೇಂದ್ರ ಯಾದವ್, ಡಾಗ್ ಬಾಬು ಹೆಸರಿನಲ್ಲಿ ನಾಯಿಗೆ ನೀಡಲಾದ ವಾಸಸ್ಥಳ ಪ್ರಮಾಣಪತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

Shwetha M