ಪಕ್ಕದ ಮನೆ ನಾಯಿ ಕಚ್ಚಿದ್ದ ವಿಚಾರ ಮುಚ್ಚಿಟ್ಟ –  ಒಂದು ತಿಂಗಳ ಬಳಿಕ ರೇಬಿಸ್‌ನಿಂದ ಮೃತಪಟ್ಟ ಬಾಲಕ!

ಪಕ್ಕದ ಮನೆ ನಾಯಿ ಕಚ್ಚಿದ್ದ ವಿಚಾರ ಮುಚ್ಚಿಟ್ಟ –  ಒಂದು ತಿಂಗಳ ಬಳಿಕ ರೇಬಿಸ್‌ನಿಂದ ಮೃತಪಟ್ಟ ಬಾಲಕ!

ಮಕ್ಕಳನ್ನು ರಸ್ತೆ ಬದಿ ಆಟವಾಡಲು ಬಿಡುವ ಮುನ್ನ ಪೋಷಕರು ಎಚ್ಚರವಾಗಿರಬೇಕು. ನಾಯಿಗಳು ಯಾವಬೇಕಾದರೂ ಮಕ್ಕಳ ಮೇಲೆ ಅಟ್ಯಾಕ್‌ ಮಾಡಬಹುದು. ಇಲ್ಲೊಬ್ಬ ಬಾಲಕನಿಗೆ ಒಂದು ತಿಂಗಳ ಹಿಂದೆ ಪಕ್ಕದ ಮನೆಯ ನಾಯಿಯೊಂದು ಕಚ್ಚಿದೆ. ಈ ವಿಚಾರವನ್ನು ಆತ ಪೋಷಕರಿಂದ ಮುಚ್ಚಿಟ್ಟಿದ್ದ. ಇದೀಗ ಆ ಬಾಲಕ ರೇಬಿಸ್‌ನಿಂದ ಮೃತಪಟ್ಟಿರುವ ಘಟನೆ ನಡೆದಿದೆ.

ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ಈ ಘಟನೆ ನಡೆದಿದೆ. ವಿಜಯ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಚರಣ್ ಸಿಂಗ್ ಕಾಲೋನಿ ನಿವಾಸಿ ಶಹವಾಜ್‍ 8 ನೇ ತರಗತಿಯಲ್ಲಿ ಓದುತ್ತಿದ್ದಾನೆ. ಆತನಿಗೆ ಒಂದೂವರೆ ತಿಂಗಳ ಹಿಂದೆ ನೆರೆಮನೆಯ ನಾಯಿ ಕಚ್ಚಿತ್ತು. ಆದರೆ ಈತ ಭಯದಿಂದ ಅದನ್ನು ಪೋಷಕರಿಂದ ಮುಚ್ಚಿಟ್ಟಿದ್ದನು. ಕ್ರಮೇಣ ಈತನ ಆರೋಗ್ಯದಲ್ಲಿ ವ್ಯತ್ಯಾಸಗಳಾಗಲು ಶುರುವಾಗಿದೆ. ಅಲ್ಲದೆ ಸೆಪ್ಟೆಂಬರ್ 1 ರಿಂದ ಊಟ ಮಾಡುವುದುನ್ನು ಕೂಡ ನಿಲ್ಲಿಸಿದ್ದಾನೆ. ಮಗನ ವರ್ತನೆಯಿಂದ ಬೇಸತ್ತ ಪೋಷಕರು ಏನಾಯ್ತು ಎಂದು ಕೇಳಿದ್ದಾರೆ. ಈ ವೇಳೆ ಆತ ತನಗೆ ತಿಂಗಳ ಹಿಂದೆ ಪಕ್ಕದ ಮನೆಯ ನಾಯಿ ಕಚ್ಚಿರುವ ವಿಚಾರವನ್ನು ತಿಳಿಸಿದ್ದಾನೆ. ಕೂಡಲೇ ಶಹವಾಜ್‍ನನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಲ್ಲಿ ಆತನನ್ನು ವೈದ್ಯರು ದಾಖಲಿಸಿಕೊಳ್ಳದೆ ಔಷಧಿ ಕೊಟ್ಟು ಕಳುಹಿಸಿದ್ದಾರೆ.

ಇದನ್ನೂ ಓದಿ: ನಾಯಿ ಸಾಕಾಣಿಕೆಗೂ ಬಂತು ಹೊಸ ರೂಲ್ಸ್‌! –  ಹೊಸ ನಿಯಮಗಳೇನು?

ಕಳೆದ ಸೋಮವಾರ ಶಹವಾಜ್‍ನ  ಆರೋಗ್ಯ ಹದಗೆಟ್ಟ ಪರಿಣಾಮ ಪೋಷಕರು ಮತ್ತೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಂತೆಯೇ ಅಲ್ಲಿ ಚಿಕಿತ್ಸೆ ಪಡೆದು ಬುಲಂದ್‍ಶಹರ್‍ನಿಂದ ಗಾಜಿಯಾಬಾದ್‍ಗೆ ಮರಳಿ ಕರೆತರುತ್ತಿದ್ದಾಗ ಅಂಬುಲೆನ್ಸ್‍ನಲ್ಲಿ ಬಾಲಕ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.

ಶಾವೇಜ್​ನ ಪಕ್ಕದ ಮನೆಯ ಮಹಿಳೆಯೊಬ್ಬರು ಬೀದಿನಾಯಿಗಳನ್ನು ಸಾಕುತ್ತಾರೆ ಮತ್ತು ಆಹಾರ ನೀಡುತ್ತಾರೆ ಮತ್ತು ಐದರಿಂದ ಆರು ನಾಯಿಗಳು ಈ ಪ್ರದೇಶದಲ್ಲೇ ಇರುತ್ತದೆ. ಸಬೇಜ್ ಎಂಬ ಬಾಲಕನನ್ನು ಆ ನಾಯಿಗಳಲ್ಲಿ ಒಂದು ನಾಯಿ ಕಚ್ಚಿದೆ ಎನ್ನಲಾಗಿದೆ. ಈ ಹಿಂದೆಯೂ ಈ ನಾಯಿಗಳು ಇತರರಿಗೆ ಕಚ್ಚಿವೆ ಎನ್ನಲಾಗಿದೆ. ಶಾವೇಜ್ ಅವರ ಕುಟುಂಬವು ಘಟನೆಯ ಬಗ್ಗೆ ಕ್ರಮಕ್ಕೆ ಒತ್ತಾಯಿಸಿದೆ ಮತ್ತು ಇಂತಹ ಘಟನೆಗಳು ನಡೆಯದಂತೆ ಆಡಳಿತ ಮತ್ತು ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಈ ಸಂಬಂಧ ದೂರು ದಾಖಲಾಗಿದ್ದು, ನಾಯಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕೊತ್ವಾಲಿ ವಲಯದ ಸಹಾಯಕ ಪೊಲೀಸ್ ಆಯುಕ್ತ ನಿಮಿಷ್ ಪಾಟೀಲ್ ತಿಳಿಸಿದ್ದಾರೆ.

ಘಾಜಿಯಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಮಹಿಳೆಗೆ ನೋಟಿಸ್ ಜಾರಿ ಮಾಡಿದೆ. ಅವರು ಅನಧಿಕೃತವಾಗಿ ನಾಯಿಯನ್ನು ಸಾಕುತ್ತಿದ್ದು, ಅವು ಬೀದಿಯಲ್ಲಿ ಓಡಾಡುವವರನ್ನು ಕಚ್ಚುತ್ತಿದೆ ಎಂದು ಹೇಳಿದ್ದಾರೆ. ಈ ನಾಯಿಗಳಿಗೆ ರೇಬಿಸ್ ಲಸಿಕೆಗಳನ್ನು ನೀಡಲಾಗಿದೆಯೇ ಎಂದು ಕಾರ್ಪೊರೇಷನ್ ಪ್ರಶ್ನಿಸಿದೆ. ಘಾಜಿಯಾಬಾದ್​ ಮುನ್ಸಿಪಲ್ ಕಾರ್ಪೊರೇಷನ್ ಅಡಿಯಲ್ಲಿ, ಸಾಕು ನಾಯಿಗಳಿಗೆ ನೋಂದಣಿ ಮತ್ತು ಲಸಿಕೆ ಹಾಕುವುದು ಕಡ್ಡಾಯವಾಗಿದೆ. ನಾಯಿಗಳ ನೋಂದಣಿ ವಿವರಗಳೊಂದಿಗೆ ನೋಟಿಸ್‌ಗೆ ಪ್ರತಿಕ್ರಿಯಿಸಲು ಮಹಿಳೆಗೆ ಮೂರು ದಿನಗಳ ಕಾಲಾವಕಾಶ ನೀಡಲಾಗಿದೆ, ವಿಫಲವಾದರೆ 5,000 ರೂ. ದಂಡ ವಿಧಿಸಲಾಗುತ್ತದೆ.

suddiyaana