ಬೆಳಗ್ಗೆ ಎದ್ದಾಗ ದೇಹದಲ್ಲಿ ನೋವು ಕಾಣಿಸಿಕೊಳ್ಳುತ್ತದೆಯೇ? ಅದಕ್ಕೇನು ಕಾರಣ ಗೊತ್ತಾ?

ಬೆಳಗ್ಗೆ ಎದ್ದಾಗ ದೇಹದಲ್ಲಿ ನೋವು ಕಾಣಿಸಿಕೊಳ್ಳುತ್ತದೆಯೇ? ಅದಕ್ಕೇನು ಕಾರಣ ಗೊತ್ತಾ?

ಅನೇಕರಿಗೆ ಬೆಳಗ್ಗೆ ಎದ್ದಾಗ ದೇಹದ ಕೆಲವು ಭಾಗಗಳಲ್ಲಿ ನೋವು ಕಾಣಿಸಿಕೊಳ್ಲುತ್ತೆ. ದೇಹದಲ್ಲಿ ಉಲ್ಲಾಸನೇ ಇರಲ್ಲ. ಸುಸ್ತು, ತಲೆನೋವು ಅಂತಾ ಹೇಳ್ತಾ ಇರ್ತಾರೆ. ಯಾಕೆ ಹೀಗಾಗುತ್ತೆ ಅನ್ನೋ ಮಾಹಿತಿ ಇಲ್ಲಿದೆ..

ದೇಹದಲ್ಲಿ ಸಾಕಷ್ಟು ವಿಟಮಿನ್ ಡಿ ಇಲ್ಲದಿರುವಾಗ ಹೈಪೋಕಾಲ್ಸೆಮಿಯಾ ಅಥವಾ ಕಡಿಮೆ ಕ್ಯಾಲ್ಸಿಯಂಗೆ ಕಾರಣವಾಗುತ್ತದೆ. ದೇಹದಲ್ಲಿನ ನಮ್ಮ ಮೂತ್ರಪಿಂಡಗಳು ಮತ್ತು ಸ್ನಾಯುಗಳಂತಹ ಅನೇಕ ಪ್ರಮುಖ ಅಂಗಗಳು ಸರಿಯಾಗಿ ತಮ್ಮ ಕಾರ್ಯಗಳನ್ನು ನಿರ್ವಹಿಸಲು ಈ ಕ್ಯಾಲ್ಸಿಯಂ ತುಂಬಾ ಅಗತ್ಯವಿರುತ್ತದೆ. ನಿಮ್ಮ ಮೂಳೆಗಳನ್ನು ಆರೋಗ್ಯಕರವಾಗಿ ಇಡಲು ಕ್ಯಾಲ್ಸಿಯಂ ಅತೀ ಮುಖ್ಯ. ಕ್ಯಾಲ್ಸಿಯಂ ಹೀರಿಕೊಳ್ಳಲು ನಮಗೆ ಸಾಕಷ್ಟು ವಿಟಮಿನ್ ಡಿ ಅಗತ್ಯವಿದೆ. ಈ ವಿಟಮಿನ್ ಕೊರತೆಯು ದೇಹದ ಅಂಗಗಳಲ್ಲಿ ಮತ್ತು ಮೂಳೆಗಳಲ್ಲಿ ನೋವನ್ನು ಉಂಟು ಮಾಡುತ್ತದೆ.

ಇದನ್ನೂ ಓದಿ:  ಈ ವ್ಯಕ್ತಿಗಳು ಕುಡಿಯದೇ ಇದ್ರೂ ತೂರಾಡುತ್ತಾರೆ! – ಮದ್ಯ ಸೇವಿಸದಿದ್ರೂ ಅಮಲೇರುವುದು ಯಾಕೆ?

ಇನ್ನು ನಮ್ಮ ದೇಹದಲ್ಲಿನ ಕೆಂಪು ರಕ್ತ ಕಣಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ ರಕ್ತಹೀನತೆ ಉಂಟಾಗುತ್ತದೆ. ಇದರಿಂದ ನಮ್ಮ ದೇಹದ ಅಂಗಾಂಶಗಳು ಸಾಕಷ್ಟು ಆಮ್ಲಜನಕವನ್ನು ಪಡೆಯುವುದಿಲ್ಲ. ರಕ್ತಹೀನತೆಯು ನಮ್ಮ ದೇಹದ ಅನೇಕ ಭಾಗಗಳನ್ನು ದುರ್ಬಲಗೊಳಿಸುತ್ತದೆ. ಹೀಗಾಗಿ ದೇಹದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ನಮ್ಮ ದೇಹ ಆರೋಗ್ಯಕರವಾಗಿರಲು ಅಥವಾ ಸರಿಯಾಗಿ ಕಾರ್ಯನಿರ್ವಹಿಸಲು ಸಾಕಷ್ಟು ಆಮ್ಲಜನಕ ರಕ್ತಹೀನತೆಯಿಂದ ಸಿಗುವುದಿಲ್ಲ. ಇದ್ರಿಂದಾಗಿ ಕೂಡ  ದೇಹದಲ್ಲಿ  ನೋವು ಕಾಣಿಸಿಕೊಳ್ಳುತ್ತೆ.

ಅಧಿಕ ತೂಕ ಇದ್ರೂ ಕೂಡ ಈ ಸಮಸ್ಯೆ ಕಾಣಿಸಿಕೊಳ್ಳುತ್ತೆ. ಅಧಿಕ ತೂಕವು ನಿಮ್ಮ ಬೆನ್ನು ಮತ್ತು ಕತ್ತಿನ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ. ಇದರಿಂದಲೂ ದೇಹದ ಹಲವು ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಅಧಿಕ ತೂಕವು ನಿದ್ರೆ ಮತ್ತು ಉಸಿರಾಟದ ತೊಂದರೆಗಳಿಗೆ ಕಾರಣವಾಗಬಹುದು. ಇದು ನಿದ್ರೆಯ ಗುಣಮಟ್ಟದ ಮೇಲೆ ಗಂಭೀರವಾಗಿ ಪರಿಣಾಮ ಬೀರುತ್ತದೆ. ವಿಶೇಷವಾಗಿ ಎಚ್ಚರವಾದ ನಂತರ ನೋವು ಕಾಣಿಸಿಕೊಳ್ಳುತ್ತದೆ. ಆದ್ದರಿಂದ, ತೂಕವನ್ನು ಕಳೆದುಕೊಳ್ಳುವುದು ತುಂಬಾ ಮುಖ್ಯ. ಇದರಿಂದ ನಿಮ್ಮ ನಿದ್ರೆಯ ಗುಣಮಟ್ಟ ಸುಧಾರಿಸುತ್ತದೆ.

Shwetha M