2ನೇ ಪಂದ್ಯಕ್ಕಿಲ್ಲ KL ರಾಹುಲ್ – ಗಿಲ್ ಗೆ ಜಯಸೂರ್ಯ ಭಯ?
ಪ್ರಾಕ್ಟೀಸ್ ನಲ್ಲೇ ಗುಟ್ಟು ರಟ್ಟಾಯ್ತಾ?

2ನೇ ಪಂದ್ಯಕ್ಕಿಲ್ಲ KL ರಾಹುಲ್ – ಗಿಲ್ ಗೆ ಜಯಸೂರ್ಯ ಭಯ?ಪ್ರಾಕ್ಟೀಸ್ ನಲ್ಲೇ ಗುಟ್ಟು ರಟ್ಟಾಯ್ತಾ?

ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ಪಂದ್ಯಕ್ಕಾಗಿ ಟೀಂ ಇಂಡಿಯಾ ಆಟಗಾರರು ಭರ್ಜರಿ ಪ್ರಾಕ್ಟೀಸ್ ನಡೆಸಿದ್ದಾರೆ. ಆದ್ರೆ ಈ ಪ್ರಾಕ್ಟೀಸ್ ಟೈಮಲ್ಲೇ ಹಲವು ಮಹತ್ವದ ವಿಚಾರಗಳು ರಿವೀಲ್ ಆಗಿದೆ. ನಾಯಕ ಗಿಲ್ ವೀಕ್ ನೆಸ್ ರಿವೀಲ್ ಆಗಿದೆ. ರಾಹುಲ್ ಇಂಜುರಿ ಆತಂಕ ಮೂಡಿಸಿದೆ.

ಇದನ್ನೂ ಓದಿ : ನಾಚಿಕೆ ಬಿಟ್ಟ KL ರಾಹುಲ್ – ಕಿರಿಯರಿಂದ ಕಲಿಯುತ್ತೇನೆ ಎಂದಿದ್ದೇಕೆ?

ಶ್ರೀಲಂಕಾ ವಿರುದ್ಧ ಕೊಲಂಬೊದಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತದ ಆಟಗಾರರು ನೆಟ್ಸ್ ನಲ್ಲಿ ಬೆವರಿಳಿಸಿದ್ದಾರೆ. ಈ ವೇಳೆ ನಾಯಕ ಶುಭ್​ಮನ್ ಗಿಲ್ ಎಡಗೈ ಸ್ಪಿನ್ ವಿರುದ್ಧ ತಮ್ಮ ಬ್ಯಾಟಿಂಗ್ ಮಟ್ಟವನ್ನ ಇಂಪ್ರೂವ್ ಮಾಡಿಕೊಳ್ಳೋ ಉದ್ದೇಶದಿಂದ ಎಡಗೈ ಸ್ಪಿನ್ ವಿರುದ್ಧ ಹೆಚ್ಚಿನ ಪ್ರಾಕ್ಟೀಸ್ ಮಾಡಿದ್ದಾರೆ. ಮಾನವ್ ಸುತಾರ್, ರವೀಂದ್ರ ಜಡೇಜಾ ಸೇರಿದಂತೆ ಕೆಲ ನೆಟ್ ಬೌಲರ್​ಗಳನ್ನೇ ಜಾಸ್ತಿ ಫೋಕಸ್ ಮಾಡಿ ಆಡಿದ್ದಾರೆ. ಅಷ್ಟಕ್ಕೂ ಮೊದಲ ಪಂದ್ಯದಲ್ಲಿನ ಎರಡು ಡಿಸ್ಮಿಸಲ್​ಗಳೇ ಗಿಲ್​ರನ್ನ ಚಿಂತೆಗೀಡು ಮಾಡಿದೆ.

ಮೊದಲ ಪಂದ್ಯ.. 2 ಇನ್ನಿಂಗ್ಸ್.. ಜಯಸೂರ್ಯಗೇ ವಿಕೆಟ್!

ಲಂಕಾ ಟೆಸ್ಟ್​ನಲ್ಲಿ ಮೊದಲ ಪಂದ್ಯದ ಎರಡೂ ಇನ್ನಿಂಗ್ಸ್​ಗಳಲ್ಲೂ ಶುಬ್​ಮನ್ ಗಿಲ್ ಕಡೆಯಿಂದ ಒಳ್ಳೆ ಸ್ಕೋರ್ ಬಂದಿಲ್ಲ. ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ  ಎಡಗೈ ಸ್ಪಿನ್ನರ್ ಪ್ರಬಾತ್ ಜಯಸೂರ್ಯ ಅವರಿಗೆ ಎರಡು ಬಾರಿಯೂ ವಿಕೆಟ್ ಒಪ್ಪಿಸಿದ್ದಾರೆ. ಮೊದಲ ಇನ್ನಿಂಗ್ಸ್​ನಲ್ಲಿ 16 ರನ್ ಮತ್ತು 2ನೇ ಇನ್ನಿಂಗ್ಸ್​ನಲ್ಲಿ 8 ರನ್ ಗಳಿಗೆ ಆಟ ಮುಗಿಸಿದ್ರು. ಹೀಗಾಗಿ ಎರಡನೇ ಮ್ಯಾಚಲ್ಲಿ ಜಯಸೂರ್ಯ ಬೌಲಿಂಗ್​ ಫೇಸ್ ಮಾಡಲು ಹೆಚ್ಚಿನ ಪ್ರಾಕ್ಟೀಸ್ ಮಾಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 42 ಪಂದ್ಯಗಳಲ್ಲಿ ಗಿಲ್ ಎಡಗೈ ಸ್ಪಿನ್ನರ್‌ಗಳಿಂದ 11 ಬಾರಿ ಔಟ್ ಆಗಿದ್ದಾರೆ. ಲಂಕಾದಲ್ಲಿ ಲೆಗ್ ಸ್ಪಿನ್ನರ್ಸ್ ವಿರುದ್ಧ ಸ್ಟ್ರಗಲ್ ಪಡ್ತಿದ್ರೋ ಓವರ್ ಆಲ್ ನಂಬರ್ಸ್ ನೋಡಿದಾಗ ಗಿಲ್ ಚೆನ್ನಾಗೇ ಆಡಿದ್ದಾರೆ. ಆಫ್-ಸ್ಪಿನ್ನರ್‌ಗಳು ಮತ್ತು ಲೆಗ್-ಸ್ಪಿನ್ನರ್‌ಗಳ ವಿರುದ್ಧ ಒಟ್ಟಾರೆ ಸರಾಸರಿ 61 ರೊಂದಿಗೆ ಉತ್ತಮ ದಾಖಲೆಯನ್ನು ಹೊಂದಿದ್ದಾರೆ. ಬಟ್ ಈ ಸಲ ಪ್ರಭಾತ್ ಜಯಸೂರ್ಯಗೆ ಎರಡೂ ಸಲ ವಿಕೆಟ್ ಒಪ್ಪಿಸಿದ್ರಿಂದ ಸ್ವಲ್ಪ ಅಭ್ಯಾಸ ಜಾಸ್ತಿ ಮಾಡಿದ್ದಾರಷ್ಟೇ. ಹೀಗೆ ಗಿಲ್ ಭರ್ಜರಿ ಪ್ರಾಕ್ಟೀಸ್​ನಲ್ಲಿದ್ರೆ ಅತ್ತ ರಾಹುಲ್ ಮತ್ತು ಕುಲ್ದೀಪ್ ಅಭ್ಯಾಸ ಮಾಡದೆ ಇರೋದೇ ತಲೆಬಿಸಿಯಾಗಿದೆ.

ಅಭ್ಯಾಸಕ್ಕೆ ಬಾರದ ರಾಹುಲ್ 2ನೇ ಪಂದ್ಯ ಆಡಲ್ವಾ?

ಇನ್ನು ಭಾರತದ ಪ್ರಾಕ್ಟೀಸ್ ಸೆಷನ್ ವೇಳೆ ಕುಲ್ದೀಪ್ ಯಾದವ್ ಮತ್ತು ಕೆಎಲ್ ರಾಹುಲ್ ಪ್ರಾಕ್ಟೀಸ್ ಮಾಡಿಲ್ಲ. ಕುಲ್ದೀಪ್ ಯಾದವ್ ನೆಟ್ಸ್‌ಗೆ ಬಂದಿದ್ರೂ ಕೂಡ ಬೌಲಿಂಗ್ ಆಗ್ಲಿ ಅಥವಾ ಬ್ಯಾಟಿಂಗ್ ಆಗ್ಲಿ ಮಾಡಿಲ್ಲ. ಆದ್ರೆ ಆಫ್-ಸ್ಪಿನ್ನರ್ ಸರಾಂಶ್ ಜೈನ್ ಅವ್ರಯ ರಿಷಭ್ ಪಂತ್ ಮತ್ತು ಶುಭ್ಮನ್ ಗಿಲ್‌ಗೆ ಕೆಲವು ಓವರ್‌ಗಳನ್ನು ಬೌಲಿಂಗ್ ಮಾಡಿದರು. ಹೀಗಾಗಿ ಕುಲ್ದೀಪ್ ಎರಡನೇ ಪಂದ್ಯ ಆಡಲ್ವಾ ಅನ್ನೋ ಅನುಮಾನಗಳನ್ನ ಗಟ್ಟಿಯಾಗುವಂತೆ ಮಾಡಿದೆ. ಮತ್ತೊಂದೆಡೆ ಕೆಎಲ್ ರಾಹುಲ್ ಕೂಡ ನೆಟ್ಸ್​ನಲ್ಲಿ ಕಾಣಿಸಿಕೊಳ್ಳದೆ ಇರೋದ್ರಿಂದ ಎರಡನೇ ಪಂದ್ಯ ಮಿಸ್ ಮಾಡಿಕೊಳ್ತಾರಾ ಅನ್ನೋ ಪ್ರಶ್ನೆಗಳು ಮೂಡಿವೆ. ಈ ಬಗ್ಗೆ ಮಾತ್ನಾಡಿರುವ ಟೀಮ್ ಇಂಡಿಯಾದ ಸ್ಪಿನ್ ಬೌಲಿಂಗ್ ಕೋಚ್ ಸಾಯಿರಾಜ್ ಬಹುತುಲೆ ಕೆಎಲ್ ಮತ್ತು ಕುಲ್ದೀಪ್ ಇಬ್ಬರೂ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದಿದ್ದಾರೆ. ಹೀಗಾಗಿ ಎರಡನೇ ಪಂದ್ಯದ ಪ್ಲೇಯಿಂಗ್ 11 ಬಗ್ಗೆ ಕುತೂಹಲ ಹೆಚ್ಚಾಗಿದೆ. ಒಟ್ನಲ್ಲಿ ಡಬ್ಲ್ಯೂಟಿಸಿ ಫೈನಲ್ ಟಿಕೆಟ್ ಪಡೆಯೋಕೆ ಈ ಪಂದ್ಯವನ್ನೂ ಗೆಲ್ಲಲೇಬೇಕಾದ ಅನಿವಾರ್ಯತೆ ಭಾರತಕ್ಕಿದೆ. ಇದಕ್ಕಾಗಿ ಭರ್ಜರಿ ಪ್ರಾಕ್ಟೀಸ್ ಕೂಡ ಮಾಡ್ತಿದ್ದು ಆನ್​ಫೀಲ್ಡ್ ಪರ್ಫಾಮೆನ್ಸ್ ಹೇಗಿರುತ್ತೆ ನೋಡ್ಬೇಕು.

Shantha Kumari

Leave a Reply

Your email address will not be published. Required fields are marked *