Tomato ತಿಂದ್ರೆ ಕಿಡ್ನಿ ಸ್ಟೋನ್‌ ಬರುತ್ತಾ? – ಪ್ರತಿದಿನ ಟೊಮ್ಯಾಟೊ ತಿಂದ್ರೆ ಏನಾಗುತ್ತೆ?

Tomato ತಿಂದ್ರೆ ಕಿಡ್ನಿ ಸ್ಟೋನ್‌ ಬರುತ್ತಾ? – ಪ್ರತಿದಿನ ಟೊಮ್ಯಾಟೊ ತಿಂದ್ರೆ ಏನಾಗುತ್ತೆ?

ಟೊಮ್ಯಾಟೊಗಳಲ್ಲಿ ಆರೋಗ್ಯಕ್ಕೆ ಉತ್ತಮವಾದ ಅನೇಕ ಪೋಷಕಾಂಶಗಳಿವೆ. ಆದ್ರೆ ಇತ್ತೀಚೆಗೆ ಇದನ್ನ ತಿಂದ್ರೆ ಕಿಡ್ನಿ ಸ್ಟೋನ್‌ ಆಗುತ್ತೆ ಅನ್ನೋ ಮಾತು ಕೇಳಿಬಂದಿದೆ. ಇದೇ ಕಾರಣಕ್ಕೆ ಎಷ್ಟೋ ಜನ ಈ ತರಕಾರಿಯನ್ನ ತಿನ್ನೋದು ಬಿಟ್ಟಿದ್ದಾರೆ. ಆದ್ರೆ ಟೊಮ್ಯಾಟೊ ತಿನ್ನೋದ್ರಿಂದ ಕಿಡ್ನಿ ಸ್ಟೋನ್‌ ಆಗಲ್ಲ ಅಂತ ತಜ್ಞರು ಹೇಳ್ತಾರೆ.

ಇದನ್ನೂ ಓದಿ:  ದಳಪತಿ ವಿಜಯ್‌ಗೆ ಕಾನೂನು ಸಂಕಷ್ಟ! – ಕರೂರು ಕಾಲ್ತುಳಿತ ಕೇಸ್‌ ಸಂಬಂಧ ವಿಚಾರಣೆಗೆ ಹಾಜರಾಗುವಂತೆ CBI ಸಮನ್ಸ್‌

ಟೊಮ್ಯಾಟೊದಲ್ಲಿರುವ ಆಕ್ಸಲೇಟ್ ಅಂಶದಿಂದಾಗಿ ಕಿಡ್ನಿ ಸ್ಟೋನ್‌ ಆಗುತ್ತೆ ಅಂತ ಹೇಳುತ್ತಾರೆ. ಆದ್ರೆ ಟೊಮ್ಯಾಟೊದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆಕ್ಸಲೇಟ್ ಕಂಟೆಂಟ್‌ ಇಲ್ಲ. ಪಾಲಕ್, ಬೀಟ್‌ರೂಟ್‌ಗೆ ಹೋಲಿಸಿದರೆ ಟೊಮ್ಯಾಟೊಗಳಲ್ಲಿ ಆಕ್ಸಲೇಟ್ ಪ್ರಮಾಣ ತುಂಬಾ ಕಡಿಮೆ. ಆರೋಗ್ಯವಂತರು ದಿನಾ ಟೊಮ್ಯಾಟೊ ತಿಂದರೆ ಕಿಡ್ನಿ ಸ್ಟೋನ್‌ ಆಗಲ್ಲ ಎಂದು ತಜ್ಞರು ಹೇಳುತ್ತಾರೆ.

ಟೊಮ್ಯಾಟೊಗಳಲ್ಲಿ ವಿಟಮಿನ್ ಸಿ, ವಿಟಮಿನ್ ಎ, ಪೊಟ್ಯಾಶಿಯಂ, ಲೈಕೋಪೀನ್‌ನಂತಹ ಶಕ್ತಿಯುತ ಆ್ಯಂಟಿಆಕ್ಸಿಡೆಂಟ್‌ಗಳಿವೆ. ಇವು ಹೃದಯದ ಆರೋಗ್ಯ, ರೋಗನಿರೋಧಕ ಶಕ್ತಿ ಮತ್ತು ಚರ್ಮದ ಆರೋಗ್ಯಕ್ಕೆ ಸಹಕಾರಿ. ಲೈಕೋಪೀನ್ ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸರಿಯಾದ ಪ್ರಮಾಣದಲ್ಲಿ ಟೊಮ್ಯಾಟೊ ಸೇವಿಸುವುದರಿಂದ ಕಿಡ್ನಿಗಳ ಕಾರ್ಯನಿರ್ವಹಣೆಯ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರುವುದಿಲ್ಲ ಅಂತ ತಜ್ಞರು ಹೇಳ್ತಾರೆ.

ಇನ್ನು ಕಿಡ್ನಿ ಸ್ಟೋನ್‌ ಆಗಲು ಮುಖ್ಯ ಕಾರಣ ಏನಂದ್ರೆ ದೇಹದಲ್ಲಿ ಖನಿಜಗಳ ಅಸಮತೋಲನ, ಕಡಿಮೆ ನೀರು ಕುಡಿಯುವುದು ಮತ್ತು ಕೆಲವು ಆಹಾರಗಳ ಅತಿಯಾದ ಸೇವನೆಯಿಂದ ಕಿಡ್ನಿ ಸ್ಟೋನ್‌ ಬರುತ್ತೆ. ಕಿಡ್ನಿ ಸ್ಟೋನ್‌ ಸಮಸ್ಯೆ ಮುಂಚೆಯಿಂದಲೇ ಇದ್ರೆ ಸ್ವಲ್ಪ ಎಚ್ಚರಿಕೆಯಿಂದ ಇರ್ಬೇಕು. ಈ ಸಮಸ್ಯೆ ನಿಮಗೆ ಕಾಣಿಸಿಕೊಂಡಿದ್ರೆ ಟೊಮ್ಯಾಟೊಗಳನ್ನ ಮಿತವಾಗಿ ಸೇವಿಸುವುದು ಉತ್ತಮ. ಟೊಮ್ಯಾಟೊ ಜೊತೆಗೆ ಇತರ ತರಕಾರಿಗಳು, ಹಣ್ಣುಗಳು ಮತ್ತು ಸಮತೋಲಿತ ಆಹಾರವನ್ನು ಸೇವಿಸ್ಬೇಕು. ಹೆಚ್ಚು ಉಪ್ಪು ಹಾಕಿದ ಆಹಾರ, ಹೆಚ್ಚು ಎಣ್ಣೆಯುಕ್ತ ಆಹಾರ ಸೇವಿಸೋದನ್ನ ಆದಷ್ಟು ಕಡಿಮೆ ಮಾಡಿ. ಇಲ್ಲ ಅಂದ್ರೆ ಆರೋಗ್ಯಕ್ಕೆ ಪರಿಣಾಮ ಬೀಳುವ ಸಾಧ್ಯತೆ ಇದೆ.

Shwetha M