ಮೊಟ್ಟೆ ತಿಂದ್ರೆ ಗ್ಯಾಸ್ಟ್ರಿಕ್‌ ಆಗುತ್ತಾ? – ಈ ಸಮಸ್ಯೆ ಇದ್ರೆ ಅಪ್ಪಿತಪ್ಪಿಯೂ ಮೊಟ್ಟೆ ತಿನ್ನಬೇಡಿ!

ಮೊಟ್ಟೆ ತಿಂದ್ರೆ ಗ್ಯಾಸ್ಟ್ರಿಕ್‌ ಆಗುತ್ತಾ? – ಈ ಸಮಸ್ಯೆ ಇದ್ರೆ ಅಪ್ಪಿತಪ್ಪಿಯೂ ಮೊಟ್ಟೆ ತಿನ್ನಬೇಡಿ!

ಮೊಟ್ಟೆ ತಿನ್ನೋದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಹೀಗಾಗಿ ದಿನಾ ಬೆಳಗ್ಗೆ ಬೇಯಿಸಿದ ಮೊಟ್ಟೆ ತಿನ್ನುವ ಅಭ್ಯಾಸ ಮಾಡಿಕೊಂಡಿದ್ದಾರೆ. ಮೊಟ್ಟೆಗಳಲ್ಲಿ ಅಗತ್ಯಕ್ಕಿಂತಲೂ ಹೆಚ್ಚಾದ ಪೌಷ್ಟಿಕ ಸತ್ವಗಳು,  ಪ್ರೋಟೀನ್ ಅಂಶ ಹೆಚ್ಚಾಗಿದೆ. ಈ ಕಾರಣದಿಂದಾಗಿ ಮೊಟ್ಟೆಯನ್ನು ಹೆಚ್ಚು ಪೋಷಕಾಂಶವುಳ್ಳ ಆಹಾರ ಪದಾರ್ಥ ಎಂದು ಪರಿಗಿಸಲಾಗುತ್ತದೆ. ಆದ್ರೆ ಕೆಲವರಿಗೆ ಮೊಟ್ಟೆ ತಿಂದ್ರೆ ಆಗಲ್ಲ. ಮೊಟ್ಟೆ ತಿಂದ ಕೂಡಲೇ ಅನಾರೋಗ್ಯ ಕಾಣಿಸಿಕೊಳ್ಳುತ್ತದೆ.

ಇದನ್ನೂ ಓದಿ: ಇನ್ನುಮುಂದೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆ ಕಡ್ಡಾಯ! – ಕೇಂದ್ರದಿಂದ ಹೊಸ ಮಾರ್ಗಸೂಚಿ

ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಮೊಟ್ಟೆಗಳ ಸೇವನೆಯು ಕೆಲವರಿಗೆ ಅಡ್ಡಪರಿಣಾಮ ಸಹ ಬೀರುತ್ತದೆ. ಇನ್ನು ಕೆಲವರು ಮೊಟ್ಟೆ ತಿಂದ್ರೆ ಗ್ಯಾಸ್ಟ್ರಿಕ್​ ಆಗುತ್ತಾ ಅನ್ನೋ ಗೊಂದಲ್ಲಿದ್ದಾರೆ. ಅಷ್ಟಕ್ಕೂ ಮೊಟ್ಟೆ ತಿಂದ್ರೆ ಗ್ಯಾಸ್ಟ್ರಿಕ್‌ ಆಗುತ್ತಾ ಅನ್ನೋದಕ್ಕೆ ತಜ್ಞರು ಉತ್ತರಿಸಿದ್ದಾರೆ.

ತಜ್ಞರ ಪ್ರಕಾರ, ಕೆಲವರಿಗೆ ಮೊಟ್ಟೆ ತಿಂದ ನಂತರ ಹೊಟ್ಟೆಯಲ್ಲಿ ಗ್ಯಾಸ್​ ಉಂಟಾಗುತ್ತದೆ. ಆದರೆ ಎಲ್ಲರಿಗೂ ಹೀಗೆ ಆಗುತ್ತದೆ ಎಂದರ್ಥವಲ್ಲ. ಮೊಟ್ಟೆಗಳಲ್ಲಿ ಗಂಧಕ ಅಧಿಕವಾಗಿರುತ್ತದೆ. ಇದು ಜೀರ್ಣಕ್ರಿಯೆಯ ಸಮಯದಲ್ಲಿ ಅನಿಲವಾಗಿ ಬದಲಾಗುತ್ತದೆ. ಇದರಿಂದ ಹೊಟ್ಟೆ ಉಬ್ಬರ ಉಂಟಾಗುತ್ತದೆ.  ಮೊಟ್ಟೆಗಳಲ್ಲಿ ಪ್ರೋಟೀನ್ ಕೂಡ ಅಧಿಕವಾಗಿರುತ್ತದೆ. ಈ ಪ್ರೋಟೀನ್ ಜೀರ್ಣವಾಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಇದು ಅತಿಯಾದ ಗ್ಯಾಸ್ಟ್ರಿಕ್​ ರಚನೆಗೆ ಕಾರಣವಾಗುತ್ತದೆ. ನೀವು ಒಂದೇ ಬಾರಿಗೆ ಸಾಕಷ್ಟು ಮೊಟ್ಟೆಗಳನ್ನು ತಿಂದರೆ ಈ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ.

ಕೆಲವರಿಗೆ ಮೊಟ್ಟೆಯ ಬಿಳಿಭಾಗವೆಂದರೆ ಅಲರ್ಜಿ. ಏಕೆಂದರೆ, ಇದರಿಂದ ಗ್ಯಾಸ್ ಮತ್ತು ಹೊಟ್ಟೆ ಉಬ್ಬರ ಉಂಟಾಗುತ್ತದೆ. ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳು ಸಮತೋಲನದಲ್ಲಿಲ್ಲದಿದ್ದರೆ ಗ್ಯಾಸ್ಟ್ರಿಕ್​ ಸಮಸ್ಯೆಗಳು ಹೆಚ್ಚಾಗಬಹುದು. ಕೆಲವರಿಗೆ ಮೊಟ್ಟೆಯ ಪ್ರೋಟೀನ್ ಅನ್ನು ಜೀರ್ಣಿಸಿಕೊಳ್ಳಲು ಕಿಣ್ವಗಳ ಕೊರತೆಯಿರುತ್ತದೆ, ಇದು ಜೀರ್ಣಕಾರಿ ಸಮಸ್ಯೆಗಳು ಮತ್ತು ಗ್ಯಾಸ್ಟ್ರಿಕ್​​ಗೆ ಕಾರಣವಾಗಬಹುದು.

ಅರ್ಧ ಬೇಯಿಸಿದ ಅಥವಾ ಹಸಿ ಮೊಟ್ಟೆಗಳನ್ನು ತಿನ್ನುವುದರಿಂದಲೂ ಗ್ಯಾಸ್ಟ್ರಿಕ್​ ಸಮಸ್ಯೆ ಉಂಟಾಗುತ್ತದೆ. ಅಲ್ಲದೇ ಇದನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ಈರುಳ್ಳಿ, ಬೀನ್ಸ್ ಮತ್ತು ಎಲೆಕೋಸು ಮುಂತಾದ ಗ್ಯಾಸ್ಟ್ರಿಕ್​ ಉಂಟು ಮಾಡುವ ಆಹಾರಗಳೊಂದಿಗೆ ಮೊಟ್ಟೆಗಳನ್ನು ತಿನ್ನುವುದು ಸಮಸ್ಯೆಯನ್ನು ಉಲ್ಬಣಗೊಳಿಸುತ್ತದೆ. ಈ ಸಮಸ್ಯೆಯನ್ನು ಕಡಿಮೆ ಮಾಡಲು ಮೊಟ್ಟೆಗಳನ್ನು ಚೆನ್ನಾಗಿ ಬೇಯಿಸಬೇಕು.

ಮೊಟ್ಟೆ ತಿಂದ ನಂತರ ಜೀರಿಗೆ ನೀರು ಅಥವಾ ಗಿಡಮೂಲಿಕೆ ಚಹಾ ಕುಡಿಯುವುದರಿಂದ ಜೀರ್ಣಕ್ರಿಯೆ ಸರಾಗವಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ದೇಹವು ಮೊಟ್ಟೆಗಳಿಗೆ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತದೆ. ಕೆಲವರಿಗೆ ಯಾವುದೇ ಸಮಸ್ಯೆಗಳು ಕಾಣಿಸಿಕೊಳ್ಳಲ್ಲ. ಆದರೆ ಕೆಲವರಿಗೆ ಸ್ವಲ್ಪ ಪ್ರಮಾಣದ ಮೊಟ್ಟೆಗಳನ್ನು ತಿಂದ ನಂತರವೂ ಗ್ಯಾಸ್ಟ್ರಿಕ್​ ಉಂಟಾಗುತ್ತದೆ. ಆದ್ದರಿಂದ ನಿಮ್ಮ ದೇಹಕ್ಕೆ ಯಾವುದು ಸರಿಹೊಂದುತ್ತದೆ ಎಂಬುದನ್ನು ತಿಳಿದುಕೊಂಡು ಅದಕ್ಕೆ ತಕ್ಕಂತೆ ತಿನ್ನುವುದು ಉತ್ತಮ.

Shwetha M

Leave a Reply

Your email address will not be published. Required fields are marked *