ಹಾವಿಗೆ ನಿಜಕ್ಕೂ 12 ವರ್ಷ ದ್ವೇಷವಿರುತ್ತಾ? – ಕಾಮಕೇಳಿಗೆ ಹಾವುಗಳು ಸಜ್ಜಾಗೋದ್ಯಾವಾಗ?

ಹಾವಿಗೆ ನಿಜಕ್ಕೂ 12 ವರ್ಷ ದ್ವೇಷವಿರುತ್ತಾ? – ಕಾಮಕೇಳಿಗೆ ಹಾವುಗಳು ಸಜ್ಜಾಗೋದ್ಯಾವಾಗ?

ಹಾವಿನ ದ್ವೇಷ 12 ವರುಷ.. ಹಾವಿಗೆ ಕಾಟ ಕೊಟ್ಟವರು ಉಳಿಯಲ್ಲ. 12 ವರ್ಷಗಳ ವರೆಗೂ ನೆನಪಿಟ್ಟುಕೊಂಡು ದ್ವೇಷ ಸಾಧಿಸುತ್ತೆ ಎಂಬ ಮಾತಿದೆ.. ಆದ್ರೆ ಈ ಮಾತು ಎಷ್ಟು ನಿಜ? ನಿಜಕ್ಕೂ ಹಾವುಗಳು ದ್ವೇಷ ಸಾಧಿಸುತ್ತವಾ ಅನ್ನೋದ್ರ ಬಗ್ಗೆ ಅನೇಕರಿಗೆ ಪ್ರಶ್ನೆ ಇದೆ.. ಹಾವುಗಳು ಮನುಷ್ಯನ ಮೇಲೆ ದ್ವೇಷ ಸಾಧಿಸುತ್ತವಾ ಅನ್ನೋದ್ರ ಬಗ್ಗೆ ವಿಜ್ಞಾನಿಗಳು ಹೇಳೋದೇನು ಅನ್ನೋ ಮಾಹಿತಿ ಇಲ್ಲಿದೆ..

ಇದನ್ನೂ ಓದಿ: ಜನವರಿ 22ರಂದು ರಾಮಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ – ಕಾಂಗ್ರೆಸ್ ವಿರುದ್ಧ ಅಸ್ತ್ರವಾಗಿ ಪ್ರಯೋಗಿಸಲು ಬಿಜೆಪಿ ಪ್ಲ್ಯಾನ್

ನಮ್ಮ ದೇಶದಲ್ಲಿ ಅನಾದಿಕಾಲದಿಂದಲೂ ನಾಗಾರಾಧನೆಗೆ ವಿಶೇಷ ಸ್ಥಾನಮಾನವಿದೆ. ಹಾವುಗಳಿಗೆ ವಿಶೇಷವಾದ ಸ್ಥಾನಮಾನವಿದೆ. ನಾಗದೇವರನ್ನು ಭಯ ಭಕ್ತಿಯಿಂದ ಪೂಜಿಸಲಾಗುತ್ತದೆ. ಅದರನ್ನು ನಾಗರಹಾವನ್ನು ಕೊಂದರೆ ಅಥವಾ ಅದಕ್ಕೆ ತೊಂದರೆ ಕೊಟ್ಟರೆ ನಾಗ ದೋಷ ಬರುತ್ತದೆ ಎನ್ನುವ ನಂಬಿಕೆಯಿದೆ. ಆದ್ರೂ ಕೆಲವರು ಹಾವಿಗೆ ವಿನಾಃ ಕಾರಣ ತೊಂದರೆ ಕೊಡ್ತಾ ಇರ್ತಾರೆ. ಹಾವಿಗೆ ಯಾರಾದ್ರೂ ತೊಂದರೆ ಕೊಟ್ರೆ ಅದು ಸೇಡು ತೀರಿಸಿಕೊಳ್ಳುತ್ತದೆ ಎನ್ನುವ ನಂಬಿಕೆಯೂ ಇದೆ.. ಇದೇ ಕಾರಣಕ್ಕೆ ಹಾವಿನ ದ್ವೇಷ.. ಹನ್ನೆರಡು ವರುಷ ಎನ್ನುವ ಮಾತೇ ಇದೆ.. ಆದರೆ ಇಷ್ಟಕ್ಕೂ ಹಾವುಗಳಿಗೆ ಜ್ಞಾಪಕ ಶಕ್ತಿ ಇಲ್ಲ ಎನ್ನುತ್ತಾರೆ  ಉರಗ ತಜ್ಞರು. ಹಾವಿಗೆ ನೋವು ಮಾಡಿದವರ ಮುಖ ಗೊತ್ತಾಗುವುದಿಲ್ಲ.. ಹೀಗಾಗಿ ಹಾವು ತನಗೆ ತೊಂದರೆ ಕೊಟ್ಟ ವ್ಯಕ್ತಿಯನ್ನು ನೆನಪಲ್ಲಿ ಇಟ್ಟುಕೊಳ್ಳುತ್ತದೆ ಎನ್ನುವುದು ಕೇವಲ ಕಲ್ಪನೆ ಎಂದೂ ತಜ್ಞರು ವಿವರಿಸುತ್ತಾರೆ..

ಇನ್ನು ಹಾವು ಪ್ರತೀಕಾರ ತೆಗೆದುಕೊಳ್ಳುವ ಜೀವಿಗಳ ಗುಂಪಿಗೆ ಸೇರಿಲ್ಲ ಎಂದು ವಿಜ್ಞಾನಿಗಳು ಸ್ಪಷ್ಟವಾಗಿ ಹೇಳಿದ್ದಾರೆ. ಹಾವುಗಳು ಜನರನ್ನು ಮತ್ತು ಸ್ಥಳಗಳನ್ನು ನೆನಪಿಟ್ಟುಕೊಳ್ಳುವಷ್ಟು ಬುದ್ಧಿವಂತಿಕೆ ಹೊಂದಿಲ್ಲ.. ಅಂದರೆ ಕಥೆ ಮತ್ತು ಚಲನಚಿತ್ರಗಳಲ್ಲಿ ತೋರಿಸಲಾಗುವ ರೀತಿಯಲ್ಲಿ ಹಾವಿನ ಪ್ರತೀಕಾರವನ್ನು ವಿಜ್ಞಾನ ಒಪ್ಪಿಕೊಳ್ಳುವುದಿಲ್ಲ. ನಾಗರಹಾವು ಮತ್ತು ನಾಗಿಣಿಯ ಪ್ರೇಮಕಥೆಗಳೂ ಕಲ್ಪನೆಯಿಂದಲೇ ಬಂದಿವೆ ಎಂದೂ ವಿಜ್ಞಾನಿಗಳು ಹೇಳುತ್ತಾರೆ. ಹಾವಿನ ವಿಷ ಮಾರಣಾಂತಿಕ ಅನ್ನೋದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಹಾವುಗಳಿಗೆ ಭಯವಾದಾಗ, ನೋವಾದಾಗ ಮಾತ್ರ ಕಚ್ಚುತ್ತವೆ ಎನ್ನುವುದು ಕೂಡ ಅಷ್ಟೇ ಸತ್ಯ. ಹಾವುಗಳು ಸಾಮಾನ್ಯವಾಗಿ ಮನುಷ್ಯರನ್ನು ಕಚ್ಚುವುದಿಲ್ಲ, ಅವು ಅಪಾಯದಲ್ಲಿವೆ ಎಂದು ಭಾವಿಸಿದಾಗ ಮಾತ್ರ ಅವು ಕಚ್ಚಲು ಪ್ರಯತ್ನಿಸುತ್ತದೆ.

ಇನ್ನು ಹಾವುಗಳು ಲೈಂಗಿಕ ಕ್ರಿಯೆಯ ಬಗ್ಗೆ ಮನುಷ್ಯರಿಗೆ ಎಲ್ಲಿಲ್ಲದ ಆಸಕ್ತಿ ಮತ್ತು ಕುತೂಹಲವಿದೆ.. ಇಲ್ಲಿ ಗಮನಿಸಬೇಕಾದ ಕೆಲವು ಅಂಶಗಳಿವೆ. ಹುಟ್ಟಿದ ನಂತರ ಗಂಡು ಹಾವುಗಳು ಸ್ವಲ್ಪ ವೇಗವಾಗಿ ಬೆಳೆಯುತ್ತವೆ. ಅದಕ್ಕೆ ಹೋಲಿಸಿದರೆ ಹೆಣ್ಣು ಹಾವುಗಳು ಬೆಳೆಯಲು ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ. ಹೆಣ್ಣು ಹಾವುಗಳು ಮೊಟ್ಟೆ ಇಡುವಷ್ಟು ಪ್ರೌಢಾವಸ್ಥೆಗೆ ಬಂದಾಗ ಲೈಂಗಿಕ ಕ್ರಿಯೆ ನಡೆಸುತ್ತವೆ. ಕಾಮಕೇಳಿಯಲ್ಲಿ ತೊಡಗಿದ್ದಾಗ ಮಾತ್ರ ಹಾವುಗಳು ಸುತ್ತಲಿನ ಪರಿವೆಯೇ ಇಲ್ಲದೆ ಗಂಡುಹೆಣ್ಣು ಬೆಸೆದುಕೊಂಡಿರುತ್ತವೆ. ಇನ್ನು ಮರಿ ಹಾವುಗಳು ವರ್ಷಕ್ಕೆ ನಾಲ್ಕು ಬಾರಿ ತಮ್ಮ ಪೊರೆ ಕಳಚಿಕೊಳ್ಳುತ್ತವೆ. ಬೆಳೆಯುತ್ತಾ ಬೆಳೆಯುತ್ತಾ ದೊಡ್ಡದಾದ ಮೇಲೆ ಹಾವುಗಳು ವರ್ಷಕ್ಕೆ ಎರಡು ಬಾರಿ ತಮ್ಮ ಪೊರೆಗಳನ್ನು ಕಳಚಿಕೊಳ್ಳುತ್ತವೆ. ಆರೋಗ್ಯಕರ ಜೀವನ ಹೊಂದಲು ಪೊರೆ ಕಳಚಿಕೊಳ್ಳುವುದು ಹಾವುಗಳಿಗೆ ಮುಖ್ಯ. ಇದಲ್ಲದೆ, ಹಾವುಗಳ ಚರ್ಮದ ಜೀವಕೋಶಗಳು ವಯಸ್ಸಾದಂತೆ ಅದೇ ವೇಗದಲ್ಲಿ ಬೆಳೆಯುವುದಿಲ್ಲ. ಅದಕ್ಕಾಗಿಯೇ ಹಾವು ತನ್ನ ಪೊರೆಯನ್ನು ಚೆಲ್ಲುತ್ತವೆ.

Shwetha M