ಬೆಕ್ಕು ಕಂಡರೆ ವಾಹನ ನಿಲ್ಲಿಸೋದ್ಯಾಕೆ – ಅಪಶಕುನ ಎಂಬ ನಂಬಿಕೆ ಹಿಂದಿನ ವೈಜ್ಞಾನಿಕ ಕಾರಣವೇನು?
ಮನೆ ಕಾಯುವ ನಾಯಿಯನ್ನು ಮನೆ ಹೊರಗೆ ಇಡ್ತೀವಿ. ಅದೇ ಬೆಕ್ಕನ್ನ ಮನೆ ತುಂಬಾ ಓಡಾಡೋಕೆ ಬಿಡ್ತೇವೆ. ಆದ್ರೂ ಕೂಡ ಬೆಕ್ಕು ಅಡ್ಡ ಬಂದ್ರೆ ಅಪಶಕುನಾ ಅಂತಾರೆ. ನಿಜಕ್ಕೂ ಬೆಕ್ಕು ಅಪಶಕುನನಾ? ವಿಜ್ಞಾನದ ಕಾರಣ ಏನು ಅನ್ನೋದನ್ನ ನಾವಿಲ್ಲಿ ತಿಳಿದುಕೊಳ್ಳಬೇಕು.
ಇದನ್ನೂ ಓದಿ : ಕೋಳಿ ಮಾಂಸವನ್ನು ಚೆನ್ನಾಗಿ ತೊಳೆಯಬಾರದಾ – ಚಿಕನ್ ಕ್ಲೀನ್ ಮಾಡಿದ್ರೆ ಆರೋಗ್ಯ ಹಾಳಾಗುತ್ತಾ?
ಎಲ್ಲಾದ್ರೂ ಹೊರಗಡೆ ಹೊರಟಾಗ ಅಥವಾ ರಸ್ತೆಗಳಲ್ಲಿ ಹೋಗುವಾಗ ಬೆಕ್ಕು ಅಡ್ಡ ಬಂದ್ರೆ ಸಡನ್ನಾಗಿ ನಿಂತು ಬಿಡ್ತಾರೆ. ಕೆಲ ವಾಹನಗಳ ಚಾಲಕರೂ ಕೂಡ ಕೆಲ ಕಾಲ ಗಾಡಿ ಸೈಡ್ಗೆ ಹಾಕ್ತಾರೆ. ಯಾಕಂದ್ರೆ ಬೆಕ್ಕು ಅಡ್ಡ ಬಂದ್ರೆ ಕೆಟ್ಟದ್ದಾಗುತ್ತೆ ಅನ್ನೋ ನಂಬಿಕೆ ಅವ್ರದ್ದು. ಪ್ರಾಚೀನ ಕಾಲದಲ್ಲಿ ಮನೆಗೆ ಬೆಕ್ಕು ಬಂದರೆ ನಕಾರಾತ್ಮಕ ಶಕ್ತಿ ಬರುತ್ತದೆ ಎಂದು ನಂಬಲಾಗಿತ್ತು. ವೈದಿಕ ಜ್ಯೋತಿಷ್ಯದ ಪ್ರಕಾರ, ಬೆಕ್ಕು ರಾಹುವಿನ ವಾಹನ. ಅದಕ್ಕಾಗಿಯೇ ಬೆಕ್ಕು ರಸ್ತೆ ದಾಟಿದರೆ ಅದನ್ನು ಅಶುಭವೆಂದು ಪರಿಗಣಿಸಲಾಗುತ್ತಿತ್ತು. ಆದ್ರೆ ವಿಜ್ಞಾನ ಹೇಳುವುದೇ ಬೇರೆ. ವಾಸ್ತವವಾಗಿ ಬೆಕ್ಕುಗಳು ಇಲಿಗಳು ಸೇರಿದಂತೆ ಅನೇಕ ಕೀಟಗಳನ್ನು ತಿನ್ನುತ್ತವೆ. ತಿಂದ ನಂತರ ಅಲ್ಲಿ ಇಲ್ಲಿ ತಿರುಗಾಡುವ ಮೂಲಕ ಸೋಂಕು ಹರಡುವ ಅಪಾಯವಿದೆ. ಹೀಗಾಗಿ ಜನರು ಬೆಕ್ಕುಗಳಿಂದ ದೂರವಿರಲು ಇಷ್ಟಪಡುತ್ತಿದ್ದರು. ಆದರೆ ಈ ನಂಬಿಕೆ ಕ್ರಮೇಣ ಮೂಢನಂಬಿಕೆಯಾಗಿ ಬದಲಾಯಿತು ಎನ್ನಲಾಗುತ್ತೆ.