ಯುವಕನ ಪ್ರಾಣಕ್ಕೆ ಕುತ್ತು ತಂದ ಪ್ರೀತಿ – ಅಮ್ಮನ ಜೊತೆಯಲ್ಲಿದ್ದ ಮಗನ ಭೀ*ಕರ ಅಂತ್ಯ

ಯುವಕನ ಪ್ರಾಣಕ್ಕೆ ಕುತ್ತು ತಂದ ಪ್ರೀತಿ –  ಅಮ್ಮನ ಜೊತೆಯಲ್ಲಿದ್ದ ಮಗನ ಭೀ*ಕರ ಅಂತ್ಯ

ರಾಜಧಾನಿ ಬೆಂಗಳೂರಿನಲ್ಲಿ ಪ್ರೀತಿಗೆ ಯುವಕನೊಬ್ಬ ಬ*ಲಿಯಾಗಿದ್ದಾನೆ. ತಾನು ಪ್ರೀತಿಸಿದ ಹುಡುಗಿ ಕುಟುಂಬದವರು 30 ವರ್ಷದ ಪವನ್ ಕುಮಾರ್ ಎಂಬಾತನ ಪ್ರಾಣವನ್ನ ತೆಗೆದಿದ್ದಾರೆ. ದೊಡ್ಡಬಳ್ಳಾಪುರ  ನಗರದ ಯಲಹಂಕ- ಹಿಂದೂಪುರ ರಸ್ತೆಯ ಚರ್ಚ್ ಮುಂಭಾಗದಲ್ಲಿ ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಘಟನೆ ನಡೆದಿದೆ.

ಇದನ್ನೂ ಓದಿ: ರಕ್ಷಿತಾಗೆ ಅತಿರೇಕದ ವರ್ತನೆಯೇ ಮುಳುವಾಯ್ತಾ? – ಬ್ಯಾಕ್‌ ಟು ಬ್ಯಾಕ್‌ ಎಡವಟ್ಟು.. ಈ ವಾರ ಕಳಪೆ ಫಿಕ್ಸ್?‌

 ಅಂದಹಾಗೇ ಮೃತ ಪವನ್‌ ಕುಮಾರ್‌, ಜಾಲಪ್ಪ ಕಾಲೇಜಿನಲ್ಲಿ ಡ್ರೈವರ್ ಕೆಲಸ ಮಾಡುತ್ತಾ ಜೀವನ  ನಡೆಸುತ್ತಿದ್ದರು.  ಕಾಲೇಜಿನ ವಸತಿ ಗೃಹದಲ್ಲಿ ತನ್ನ ತಾಯಿ ಜೊತೆ ವಾಸವಾಗಿದ್ದರು. ಗುರುವಾರ ರಾತ್ರಿ 9 ಗಂಟೆ ಸಮಯದಲ್ಲಿ ದುಷ್ಕರ್ಮಿಗಳು ಫೋನ್ ಮಾಡಿ ಹೊರಗೆ ಕರೆಸಿಕೊಂಡಿದ್ದಾರೆ. ಆಟೋದಲ್ಲಿ ಬರುತ್ತಿದ್ದ ವೇಳೆ ಕಾರಿನಲ್ಲಿ ಬಂದ ದುಷ್ಕರ್ಮಿಗಳ ಗ್ಯಾಂಗ್ ಆಟೋವನ್ನು ಅಡ್ಡಗಟ್ಟಿ,  ಹ* ನಡೆಸಿ ಪರಾರಿಯಾಗಿದೆ.  ಇದ್ರಿಂದ ಪವನ್ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ.

ಯುವತಿಯೊಬ್ಬಳನ್ನು ಈತ ಪ್ರೀತಿ ಮಾಡುತ್ತಿದ್ದ ವಿಚಾರಕ್ಕೆ ಈ ಹಿಂದೆ ಕೂಡ  ಗಲಾಟೆ  ಆಗಿತ್ತು. ಕೆಲವರು ವಾರ್ನಿಂಗ್ ಕೊಟ್ಟ ಮೇಲೆ   ಇಬ್ಬರೂ ಬೇರೆ ಬೇರೆಯಾಗಿದ್ದರಂತೆ . ಆದ್ರೆ  ಇತ್ತೀಚೆಗೆ ಮತ್ತೆ ಇಬ್ಬರೂ ಜೊತೆಯಾಗಿದ್ರಿಂದ ಈ ಘಟನೆ ನಡೆದಿ ಎನ್ನಲಾಗಿದೆ.  ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ, ಡಿವೈಎಸ್​ಪಿ ಪಾಡುರಂಗ, ನಗರ ಪೊಲೀಸ್ ಠಾಣೆ ಇನ್ಸ್​ಪೆಕ್ಟರ್ ಅಮರೇಶಗೌಡ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ.

 

Kishor KV