ವಿವಿಗಳಲ್ಲಿ ಮೋದಿ ಕುರಿತ ನಿಷೇಧಿತ ಸಾಕ್ಷ್ಯಚಿತ್ರ ಪ್ರದರ್ಶನ – ಎಲ್ಲೆಲ್ಲಿ ವಿವಾದ..!?

ವಿವಿಗಳಲ್ಲಿ ಮೋದಿ ಕುರಿತ ನಿಷೇಧಿತ ಸಾಕ್ಷ್ಯಚಿತ್ರ ಪ್ರದರ್ಶನ – ಎಲ್ಲೆಲ್ಲಿ ವಿವಾದ..!?

ಪ್ರಧಾನಿ ಮೋದಿ ಕುರಿತು ಬಿಬಿಸಿ ರಚಿಸಿರುವ ಸಾಕ್ಷ್ಯಚಿತ್ರದ ಪ್ರಸಾರವನ್ನ ಈಗಾಗ್ಲೇ ಕೇಂದ್ರ ಸರ್ಕಾರ ನಿರ್ಬಂಧಿಸಿದೆ. ಆದ್ರೆ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲೇ ಈ ಡಾಕ್ಯುಮೆಂಟರಿ ಪ್ರದರ್ಶನದ ವಿಚಾರವಾಗಿ ವಿವಾದಗಳು ಸೃಷ್ಟಿಯಾಗಿವೆ.

ಇದನ್ನೂ ಓದಿ : ಚುನಾವಣೆ ತಯಾರಿ ನಡುವೆಯೇ ನಿಖಿಲ್ ಕುಮಾರಸ್ವಾಮಿ ಹೊಸ ಸಿನಿಮಾ ಘೋಷಣೆ

ಪ್ರಧಾನಿ ನರೇಂದ್ರ ಮೋದಿ ಕುರಿತು ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಮಾಹಿತಿ ಹಾಗೂ ಪ್ರಸಾರ ಸಚಿವಾಲಯ ಜನವರಿ 20ರಂದು ನಿರ್ಬಂಧ ಹೇರಿತ್ತು. ಆದರೂ ಮಂಗಳವಾರ ಅಂದ್ರೆ ಇವತ್ತು ಜೆಎನ್​ಯು ಕಾಲೇಜಿನಲ್ಲಿ ಮೋದಿ ಕುರಿತ  ‘ಇಂಡಿಯಾ : ದಿ ಮೋಸ್ಟ್ ಕ್ವಶ್ಚನ್’ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ವಿದ್ಯಾರ್ಥಿ ಸಂಘಟನೆ ಮುಂದಾಗಿತ್ತು. ಆದ್ರೆ ಪ್ರದರ್ಶನಕ್ಕೆ ಮಾಹಿತಿ ಹಾಗೂ ಪ್ರಸಾರ ಸಚಿವಾಲಯ ನಿಷೇಧ  ಹೇರಿರೋದ್ರಿಂದ ಪ್ರದರ್ಶನವನ್ನ ರದ್ದುಗೊಳಿಸಿರೋದಾಗಿ ವಿದ್ಯಾರ್ಥಿ ಸಂಘಟನೆಗಳು ತಿಳಿಸಿವೆ. ಹಾಗೂ ಕಾಲೇಜು ಆಡಳಿತ ಮಂಡಳಿ ಪ್ರದರ್ಶನ ಆಯೋಜನೆ ಮಾಡಿದವರ ವಿರುದ್ಧ ಶಿಸ್ತು ಉಲ್ಲಂಘನಾ ಕ್ರಮ ಕೈಗೊಂಡಿದ್ದು, ವಿದ್ಯಾರ್ಥಿಗಳಿಗೆ ವಾರ್ನಿಂಗ್ ಮಾಡಿರೋದಾಗಿ ತಿಳಿಸಿದೆ.

ಆದ್ರೆ ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ಜನವರಿ 21ರಂದು ವಿದ್ಯಾರ್ಥಿಗಳೇ ಈ ಸಾಕ್ಷ್ಯಚಿತ್ರದ ಪ್ರದರ್ಶನ ಏರ್ಪಡಿಸಿದ್ದು ಚರ್ಚೆಗೆ ಕಾರಣವಾಗಿದೆ. ಇಸ್ಲಾಮಿಕ್ ಸಂಘಟನೆಯ ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿಗಳ ಒಕ್ಕೂಟದ ವಿದ್ಯಾರ್ಥಿಗಳು ಸೇರಿದಂತೆ 50ಕ್ಕೂ ಹೆಚ್ಚು ಸ್ಟೂಡೆಂಟ್ಸ್ ಸಾಕ್ಷ್ಯಚಿತ್ರದ ಪ್ರದರ್ಶನದಲ್ಲಿ ಭಾಗಿಯಾಗಿದ್ರು. ಪ್ರಸಾರಕ್ಕೆ ನಿರ್ಬಂಧ ಹೇರಿದ ಮರುದಿನ ಸಾಕ್ಷ್ಯಚಿತ್ರದ ಪ್ರದರ್ಶನ ನಡೆದಿರೋದು ಕೂಡ ಚರ್ಚೆಗೆ ಗ್ರಾಸವಾಗಿದೆ.

ಮತ್ತೊಂದೆಡೆ ಡೆಮಾಕ್ರಟಿಕ್ ಯೂತ್ ಫೆಡರೇಷನ್ ಆಫ್ ಇಂಡಿಯಾ ಹಾಗೂ ಕೇರಳದ ಆಡಳಿತ ಪಕ್ಷ ಸಿಪಿಐಎಂನ ಯುವ ಕಾರ್ಯಕರ್ತರು ಇದೇ ವಿವಾದಿತ ಚಿತ್ರವನ್ನ ಪ್ರದರ್ಶನ ಮಾಡಲು ಮುಂದಾಗಿದ್ದಾರೆ. ಡಿವೈಎಫ್​ಐನ ಫೇಸ್​ಬುಕ್ ಪೇಜ್​ನಲ್ಲಿ ಈ ಬಗ್ಗೆ ಅನೌನ್ಸ್ ಮಾಡಲಾಗಿದೆ.

 

 

 

suddiyaana