ಹೊಟ್ಟೆಯಲ್ಲಿತ್ತು 100ಕ್ಕೂ ಹೆಚ್ಚಿನ ಇಯರ್‌ ಫೋನ್‌, ನಟ್, ಬೋಲ್ಟ್‌, ಲಾಕೆಟ್‌ & ಸ್ಕ್ರೂ – ಆಪರೇಷನ್ ಮಾಡಿದ ವೈದ್ಯರೇ ಶಾಕ್

 ಹೊಟ್ಟೆಯಲ್ಲಿತ್ತು 100ಕ್ಕೂ ಹೆಚ್ಚಿನ ಇಯರ್‌ ಫೋನ್‌, ನಟ್, ಬೋಲ್ಟ್‌, ಲಾಕೆಟ್‌ & ಸ್ಕ್ರೂ – ಆಪರೇಷನ್ ಮಾಡಿದ ವೈದ್ಯರೇ ಶಾಕ್

ಆತ ವಾಕರಿಕೆ, ಜ್ವರ, ತೀವ್ರ ಹೊಟ್ಟೆನೋವು ಎಂದು ವೈದ್ಯರ ಬಳಿ ಬರುತ್ತಾನೆ. ವೈದ್ಯರು ಆತನನ್ನ ಎಕ್ಸ್ ರೇ ಸ್ಕ್ಯಾನಿಂಗ್ ಮಾಡಿಸುವ ಮೂಲಕ ವರದಿ ಪರಿಶೀಲಿಸುತ್ತಾರೆ. ಈ ವೇಳೆ ರಿಪೋರ್ಟ್ ನಲ್ಲಿ ಕಂಡ ಕಾರಣ ನೋಡಿ ನಂಬಬೇಕೋ ಬೇಡವೋ ಎಂಬ ಗೊಂದಲಕ್ಕೆ ವೈದ್ಯರು ಜಾರುತ್ತಾರೆ. ಯಾಕಂದ್ರೆ ಆತನ ಹೊಟ್ಟೆಯಲ್ಲಿ ಹತ್ತಾರು ಲೋಹೀಯ ವಸ್ತುಗಳು ಇರೋದು ಗೊತ್ತಾಗುತ್ತದೆ. ಆಪರೇಷನ್ ಮಾಡಿದ ವೈದ್ಯರು ಆತನ ಹೊಟ್ಟೆಯೊಳಗಿದ್ದ ವಸ್ತುಗಳನ್ನ ನೋಡಿ  ನಿಜಕ್ಕೂ ಅಘಾತಗೊಳ್ಳುತ್ತಾರೆ. ಯಾಕೆಂದರೆ ಅಲ್ಲಿ ಕಂಡು ಬಂದಿದ್ದು ನೂರಕ್ಕೂ ಹೆಚ್ಚಿನ ಇಯರ್‌ಫೋನ್‌ಗಳು, ನಟ್ಸ್ ಮತ್ತು ಬೋಲ್ಟ್‌ಗಳು, ಲಾಕೆಟ್‌ಗಳು ಮತ್ತು ಸ್ಕ್ರೂಗಳು.

ಇದನ್ನೂ ಓದಿ : ಇಡೀ ಜಗತ್ತನ್ನೇ ತಲ್ಲಣಗೊಳಿಸಲಿದೆ ಕೋವಿಡ್‌ಗಿಂತಲೂ ಮಾರಣಾಂತಿಕ ವೈರಸ್‌! -ವಿಶ್ವಾದ್ಯಂತ 5 ಕೋಟಿ ಜನ ಬಲಿಯಾಗುವ ಭೀತಿ!

ಹೌದು ಇಂತದೊಂದು ಘಟನೆ ಪಂಜಾಬ್ ನ ಮೊಗಾ ಜಿಲ್ಲೆಯ ಆಸ್ಪತ್ರೆಯಲ್ಲಿ ನಡೆದಿದೆ. ಎರಡು ದಿನಗಳಿಂದ ವಾಕರಿಕೆ, ತೀವ್ರ ಜ್ವರ ಮತ್ತು ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಕುಲದೀಪ್ ಸಿಂಗ್ ಅವರನ್ನು ಮೊಗಾ ಜಿಲ್ಲೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ನೋವಿನ ಕಾರಣವನ್ನು ಪತ್ತೆಹಚ್ಚಲು ವೈದ್ಯರು ಎಕ್ಸ್-ರೇ ಸ್ಕ್ಯಾನ್ ನಡೆಸಿದರು. ಆಶ್ಚರ್ಯವೆಂಬಂತೆ ಅವರ ಹೊಟ್ಟೆಯಲ್ಲಿ ಹಲವಾರು ಲೋಹೀಯ ವಸ್ತುಗಳನ್ನು ಕಂಡುಬಂದಿತ್ತು. ಮೂರು ಗಂಟೆಗಳ ಸುದೀರ್ಘ ಕಾರ್ಯಾಚರಣೆಯ ನಂತರ, ವ್ಯಕ್ತಿಯ ಹೊಟ್ಟೆಯಿಂದ ಇಯರ್‌ಫೋನ್‌ಗಳು, ನಟ್ಸ್ ಮತ್ತು ಬೋಲ್ಟ್‌ಗಳು, ಲಾಕೆಟ್‌ಗಳು ಮತ್ತು ಸ್ಕ್ರೂಗಳನ್ನು ಹೊರತೆಗೆದರು. ಹಾಗಿದ್ದರೂ ವಸ್ತುಗಳು ದೀರ್ಘಕಾಲದವರೆಗೆ ಹೊಟ್ಟೆಯಲ್ಲಿದ್ದ ಕಾರಣ, ರೋಗಿಯ ಸ್ಥಿತಿ ಇನ್ನೂ ಸ್ಥಿರವಾಗಿಲ್ಲ.

ರೋಗಿಯು ಪಿಕಾ ಕಾಯಿಲೆಯಿಂದ ಬಳಲುತ್ತಿದ್ದ!

ವೈದ್ಯರ ಪ್ರಕಾರ, ರೋಗಿಯು ಪಿಕಾ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ಪಿಕಾ ಎಂಬುದು ತಿನ್ನುವ ಮಾನಸಿಕ ಅಸ್ವಸ್ಥತೆಯಾಗಿದ್ದು, ಇದರಲ್ಲಿ ವ್ಯಕ್ತಿಯು ಸಾಮಾನ್ಯವಾಗಿ ಆಹಾರವೆಂದು ಪರಿಗಣಿಸದ ವಸ್ತುಗಳನ್ನು ತಿನ್ನುತ್ತಾನೆ. ಚೂಪಾದ ವಸ್ತುಗಳನ್ನು ತಿಂದಿದ್ದರಿಂದ ಹೊಟ್ಟೆಯಲ್ಲಿ ತೀವ್ರ ಗಾಯಗಳಾಗಿವೆ. ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಭಾವಿಸಿದ್ದರೂ, ರೋಗಿಯು ಇನ್ನೂ ವೆಂಟಿಲೇಟರ್‌ನಲ್ಲಿದ್ದು ಪರಿಸ್ಥಿತಿ ಗಂಭೀರವಾಗಿದೆ.

Shantha Kumari